Omicronನ ಮೂರು ಹೊಸ ಪ್ರಕರಣ ಪತ್ತೆ, ಭಾರತದಲ್ಲಿ ವೇಗವಾಗಿ ಹರಡುತ್ತಿದೆ ಹೊಸ ರೂಪಾಂತರ

ನವದೆಹಲಿ : ಕೊರೊನಾ ವೈರಸ್‌ನ (Coronavirus) ಹೊಸ ರೂಪಾಂತರವಾದ ಒಮಿಕ್ರಾನ್‌ನ (Omicron) ಭೀತಿ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಈ ಮಧ್ಯೆ, ಭಾರತದಲ್ಲಿ ಓಮಿಕ್ರಾನ್‌ನ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ (Maharastra) 2 ಮತ್ತು ಗುಜರಾತ್‌ನಲ್ಲಿ 1 ಹೊಸ ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 41 ಕ್ಕೆ ಏರಿದೆ.

ಸೋಮವಾರ, ಮಹಾರಾಷ್ಟ್ರದ (Maharastra) ಲಾತೂರ್ ಮತ್ತು ಪುಣೆಯಲ್ಲಿ ಒಮಿಕ್ರಾನ್‌ನ (Omicron) ತಲಾ ಒಂದು ಪ್ರಕರಣ ಪತ್ತೆಯಾಗಿದೆ.  ಗುಜರಾತ್‌ನ ಸೂರತ್‌ನಲ್ಲಿಯೂ ಒಂದು ಪ್ರಕರಣ ಬೆಳೆಕಿಗೆ ಬಂದಿದೆ. ಭಾರತದಾದ್ಯಂತ ಓಮಿಕ್ರಾನ್ ಪ್ರಕರಣಗಳ ಕುರಿತು ಹೇಳುವುದಾದರೆ, ಮಹಾರಾಷ್ಟ್ರದಲ್ಲಿ 20, ರಾಜಸ್ಥಾನದಲ್ಲಿ 9, ಗುಜರಾತ್‌ನಲ್ಲಿ 4, ಕರ್ನಾಟಕದಲ್ಲಿ  3, ಕೇರಳದಲ್ಲಿ 1, ಆಂಧ್ರಪ್ರದೇಶದಲ್ಲಿ 1, ದೆಹಲಿಯಲ್ಲಿ 2 ಮತ್ತು ಚಂಡೀಗಢದಲ್ಲಿ 1 ಪ್ರಕರಣಗಳಿವೆ.

 

ಬ್ರಿಟನ್‌ನಲ್ಲಿ ಕೋವಿಡ್‌ನ (COVID-19) ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದ ಮೊದಲ ಸಾವು  ಸಂಭವಿಸಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದನ್ನು ಖಚಿತಪಡಿಸಿದ್ದಾರೆ. ಯುಕೆಯಲ್ಲಿ, 633 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಬ್ರಿಟನ್‌ನಲ್ಲಿ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದ್ದಾರೆ. ಲಂಡನ್‌ನಲ್ಲಿ, ಹೊಸದಾಗಿ ಪತ್ತೆಯಾದ ಕರೋನಾ ಕೇಸ್ ನಲ್ಲಿ 40 ಪ್ರತಿಶತ ಓಮಿಕ್ರಾನ್ ರೂಪಾಂತರವಾಗಿದೆ.

ಭಾರತವು ಓಮಿಕ್ರಾನ್ (Omicron) ಬಗ್ಗೆ ಜಾಗರೂಕವಾಗಿದೆ. ಇದರ ಒಂದು ಝಲಕ್ ತಮಿಳುನಾಡು ಸರ್ಕಾರದ ನಿರ್ಧಾರದಲ್ಲೂ ಕಂಡುಬಂದಿದೆ. ಕೊರೋನಾ (Coronavirus) ಭೀತಿಯಿಂದಾಗಿ ತಮಿಳುನಾಡು ಸರ್ಕಾರವು ಹೊಸ ವರ್ಷದಂದು ಸಮುದ್ರ ತೀರದಲ್ಲಿ ನಡೆಯಲಿರುವ ಬೀಚ್ ಪಾರ್ಟಿಯನ್ನು ನಿಷೇಧಿಸಿದೆ. ಈ ನಿಷೇಧವು ಡಿಸೆಂಬರ್ 31 ಮತ್ತು ಜನವರಿ 1 ರಂದು ತಮಿಳುನಾಡಿನಾದ್ಯಂತ ಅನ್ವಯಿಸುತ್ತದೆ. ಕೋವಿಡ್ ಸೋಂಕನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ, ಡಿಸೆಂಬರ್ 31, 2021 ಮತ್ತು ಜನವರಿ 1, 2022 ರಂದು ತಮಿಳುನಾಡಿನ ಎಲ್ಲಾ ಬೀಚ್‌ಗಳಲ್ಲಿ ಜನರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *