ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 14 ವಿದೇಶಿ ಸ್ಥಳಗಳಿಗೆ ವಿಮಾನ ಸೇವೆ

ದೇವನಹಳ್ಳಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರ ಅನುಕೂಲಕ್ಕಾಗಿ 13 ಅಂತಾರಾಷ್ಟ್ರೀಯ ವಿಮಾನಯಾನ ಕಂಪೆನಿಗಳು 14 ವಿದೇಶಿ ಸ್ಥಳಗಳಿಗೆ ವಿಮಾನ ಕಾರ್ಯಾಚರಣೆ ಆರಂಭಿಸಲಿವೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಬೆಂಗಳೂರನ್ನು 14 ಅಂತಾರಾಷ್ಟ್ರೀಯ ಸ್ಥಳಗಳೊಂದಿಗೆ ಸಂಪರ್ಕ ಪುನರ್‌ ಸ್ಥಾಪಿಸಿಕೊಳ್ಳುವಲ್ಲಿ ವಿದೇಶಗಳಲ್ಲಿರುವವರನ್ನು ಸ್ವದೇಶಕ್ಕೆ ವಾಪಸ್‌ ತರುವ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಜೊತೆಗೆ ಭಾರತ ಸರ್ಕಾರದ ವಂದೇ ಭಾರತ್‌ ಮಿಷನ್‌ ಮತ್ತು ಏರ್‌ ಬಬಲ್‌ ಕಾರ್ಯಕ್ರಮಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು(ಕೆ.ಐ.ಎ.ಬಿ./ ಬೆಂಗಳೂರು ವಿಮಾನ ನಿಲ್ದಾಣ)ವಿಗೆ ಅವಕಾಶ ಮಾಡಿಕೊಟ್ಟಿವೆ. ಈ ಒಪ್ಪಂದಗಳ ಅಡಿಯಲ್ಲಿ 13 ವಿಮಾನಯಾನ ಸಂಸ್ಥೆಗಳು ಈ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ಬಿಐಎಎಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ನೇರ ಸಂಪರ್ಕ ಹೊಂದಲಿರುವ ಸ್ಥಳಗಳಲ್ಲಿ, ಅಬುಧಾಬಿ(ಎತಿಹಾದ್‌, ಗೋ ಏರ್‌ ಮತ್ತು ಇಂಡಿಯಾ ಎಕ್ಸ್‌ಪ್ರೆಸ್‌), ಆಮ್ಸ್‌ಟರ್‌ಡ್ಯಾಮ್‌ (ಕೆಎಲ್‌ಎಂ ರಾಯಲ್‌ ಡಚ್‌), ದುಬೈ(ಎಮಿರೇಟ್ಸ್‌, ಇಂಡಿಗೊ, ಗೋಏರ್‌, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ವಿಸ್ತಾರ), ದೋಹಾ(ಇಂಡಿಗೊ, ಕತಾರ್‌ ಏರ್‌ವೇಸ್‌), ಫ್ರಾಂಕ್‌ಫರ್ಟ್‌(ಲುಫ್ತಾನ್ಸ), ಕುವೈತ್‌(ಏರ್‌ ಇಂಡಿಯಾ ಮತ್ತು ಇಂಡಿಗೊ), ಕೌಲಾಲಂಪುರ್‌(ಏರದದ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಮಲೇಷಿಯನ್‌ ಏರ್‌ಲೈನ್ಸ್‌), ಲಂಡನ್‌(ಏರ್‌ ಇಂಡಿಯಾ ಮತ್ತು ಬ್ರಿಟಷ್‌ ಏರ್‌ವೇಸ್‌), ಮಸ್ಕತ್‌(ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌), ನರೀಟ(ಏರ್‌ ಇಂಡಿಯಾ) ಮತ್ತು ಸಿಂಗಪುರ್‌(ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌) ಸೇರಿವೆ. ಸ್ಯಾನ್‌ಫ್ರಾನ್ಸಿಸ್ಕೊಗೆ ಕೊಚ್ಚಿನ್‌(ಏರ್‌ ಇಂಡಿಯ) ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕ ಹೊಂದಲಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *