BMTC: ವೋಲ್ವೊ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ; ಟಿಕೆಟ್ ದರದಲ್ಲಿ ಇಳಿಕೆ- ಪರಿಷ್ಕೃತ ದರದ ಪಟ್ಟಿ ಇಲ್ಲಿದೆ

ಬೆಂಗಳೂರು: ವೋಲ್ವೊ ಬಸ್ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ವೋಲ್ವೊ ಬಸ್ ಟಿಕೆಟ್ ದರ ಶೇ.34ರಷ್ಟು ಕಡಿತ ಆಗಲಿದೆ. ವಜ್ರ ಸಾರಿಗೆಗಳ ಪ್ರಯಾಣ ದರ ಶೇಕಡಾ 34ರಷ್ಟು ಕಡಿತಗೊಳಿಸಿ ಆದೇಶ ನೀಡಲಾಗಿದೆ. ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಡಿಸೆಂಬರ್ 17ರಿಂದ ಜಾರಿಗೆ ಬರುವಂತೆ ಬಿಎಂಟಿಸಿಯಿಂದ ಆದೇಶ ನೀಡಲಾಗಿದೆ. ₹120 ಇದ್ದ ದಿನದ ಪಾಸ್ ಇನ್ಮುಂದೆ 100 ರೂ. ಗೆ ಲಭ್ಯ ಆಗಲಿದೆ. ₹2,000 ಇದ್ದ ಮಾಸಿಕ ಪಾಸ್ ದರ ಡಿಸೆಂಬರ್ 17ರಿಂದ ₹1,500 ಆಗಲಿದೆ. 50 ಕಿ.ಮೀ.​ಗೆ ₹90 ಇದ್ದ ಟಿಕೆಟ್​ ದರ 50 ರೂ.ಗೆ ಇಳಿಕೆ ಮಾಡಲಾಗಿದೆ.

ಈಗಾಗಲೇ 09 ಮಾರ್ಗಗಳಲ್ಲಿ 83 ಎಸಿ ಬಸ್​ ಕಾರ್ಯನಿರ್ವಹಿಸುತ್ತಿದೆ. 17/12/21 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್​ಗಳನ್ನ ಹೆಚ್ಚುವರಿಯಾಗಿ ಬಿಡಲಾಗುವುದು. 120 ರೂ ಇದ್ದ ದಿನದ ಪಾಸು ಇನ್ನು ಮುಂದೆ 100ರೂ ಗೆ ಲಭ್ಯ ಆಗಲಿದೆ. 2000ರೂ ಇದ್ದ ಮಾಸಿಕ ಪಾಸಿನ ದರ ಶುಕ್ರವಾರದಿಂದ 1500ರೂ ಗೆ ಸಿಗಲಿದೆ. ಈ ಹಿಂದೆ 50 ಕಿಲೋಮೀಟರ್​ಗೆ 90ರೂ ಇದ್ದ ಟಿಕೆಟ್​ ದರ ಶುಕ್ರವಾರದಿಂದ 50 ರೂಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ದೂರದ ಅಂತರ: ಪ್ರಸ್ತುತ ದರ: ಪರಿಷ್ಕೃತ ದರ ಪಟ್ಟಿ ಇಲ್ಲಿದೆ
2.0ಕಿ.ಮಿ: 10.00 – 10.00
4.0ಕಿ.ಮಿ: 15.00 – 15.00
6.0ಕಿ.ಮಿ: 20.00 -20.00
8.0ಕಿ.ಮಿ: 30.00 – 25.00
10.0ಕಿ.ಮಿ: 35.00 – 25.00
12.0ಕಿ.ಮಿ: 35.00 – 30.00
14.0ಕಿ.ಮಿ: 45.00 – 30.00
16.0ಕಿ.ಮಿ: 45.00 – 35.00
18.0ಕಿ.ಮಿ: 50.00 – 35.00
20.0ಕಿ.ಮಿ: 55.00 – 35.00
22.0ಕಿ.ಮಿ: 55.00 – 35.00
24.0ಕಿ.ಮಿ: 60.00 – 40.00
26.0ಕಿ.ಮಿ: 60.00 – 40.00
28.0ಕಿ.ಮಿ: 65.00 – 40.00
30.0ಕಿ.ಮಿ: 65.00 – 40.00
32.0ಕಿ.ಮಿ: 65.00 – 45.00
34.0ಕಿ.ಮಿ: 70.00 – 45.00
36.0ಕಿ.ಮಿ: 70.00 – 45.00
38.0ಕಿ.ಮಿ: 70.00 – 45.00
40.0ಕಿ.ಮಿ: 75.00 – 45.00
42.0ಕಿ.ಮಿ: 75.00 – 50.00
44.0ಕಿ.ಮಿ: 80.00 – 50.00
46.0ಕಿ.ಮಿ: 80.00 – 50.00
48.0ಕಿ.ಮಿ: 90.00 – 50.00
50.0ಕಿ.ಮಿ: 90.00 – 50.00

ಸರ್ಕಾರದಿಂದ ನಗದು ಅನುದಾನದ ಮೊತ್ತ ಪರಿಷ್ಕರಣೆ
ಸರ್ಕಾರದಿಂದ ನಗದು ಅನುದಾನದ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನ ಹೆಚ್ಚು ಮಾಡಲಾಗಿದೆ.

  • ಪರಮವೀರ ಚಕ್ರ-25 ಲಕ್ಷದಿಂದ 1.5 ಕೋಟಿ ರೂ.
  • ಮಹಾವೀರ ಚಕ್ರ-12 ಲಕ್ಷದಿಂದ 1 ಕೋಟಿ‌ ರೂಪಾಯಿ
  • ಅಶೋಕ ಚಕ್ರ-25 ಲಕ್ಷದಿಂದ 1.5 ಕೋಟಿ ರೂಪಾಯಿ
  • ಕೀರ್ತಿ ಚಕ್ರ-12 ಲಕ್ಷದಿಂದ 1 ಕೋಟಿ ರೂಪಾಯಿ
  • ವೀರ ಚಕ್ರ-8 ಲಕ್ಷದಿಂದ 50 ಲಕ್ಷ ರೂಪಾಯಿ
  • ಶೌರ್ಯ ಚಕ್ರ-8 ಲಕ್ಷದಿಂದ 50 ಲಕ್ಷ ರೂಪಾಯಿ
  • ಸೇನಾ ಮೆಡಲ್‌-2 ಲಕ್ಷದಿಂದ 15 ಲಕ್ಷ ರೂಪಾಯಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *