ಎಲ್ಲೆ ಮೀರಿದ ಸಾಮೂಹಿಕ ಪ್ರತಿಭಟನೆಗಳ ಮಧ್ಯೆ ವಕ್ಕರಿಸಿದೆ ಒಮಿಕ್ರಾನ್; ಬೆಳಗಾವಿ ಅಧಿವೇಶನದ ಮೇಲೆ ಒಮಿಕ್ರಾನ್ ಕರಿನೆರಳು

ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಶುರುವಾಗಿ, ಪ್ರತಿ ಪಕ್ಷ ಕಾಂಗ್ರೆಸ್ ಸೇರಿದಂತೆ ಸ್ಥಳೀಯ ರೈತರು ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದನ್ನು ಕಂಡು ರಾಜ್ಯದ ಜನ ಆತಂಕದಿಂದ ನೋಡುವಂತಾಗಿದೆ. ಪ್ರತಿಭಟನೆ ಮಾಡುವುದು ಅವರವರ ಹಕ್ಕಾದರೂ ರಾಜ್ಯದ ಜನತೆ ಭೀತಿಗೊಳಗಾಗಿರುವುದು ಕೊರೊನಾ ಸೋಂಕಿನ ಕರಾಳತೆಯ ಹಿನ್ನೆಲೆಯಲ್ಲಿ. ಆ ಪಾಟಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ, ತಾವುಂಟು ಮೂರು ಲೋಕವುಂಟು ಎಂಬಂತೆ ಪ್ರತಿಭಟನಾಕಾರರು ಗುಂಪುಗುಂಪಾಗಿ ಪ್ರತಭಟನೆಯಲ್ಲಿ ತೊಡಗಿದ್ದಾರೆ. ಮಾಸ್ಕ್ ಅಂತೂ ಯಾರೊಬ್ಬರ ಮೂಗಿನ ಮೇಲೂ ಇಲ್ಲವಾಗಿದೆ. ಇಂತಹ ಆತಂಕದ ಪರಿಸ್ಥಿತಿಯಿರುವಾಗಲೇ… ಒಮಿಕ್ರಾನ್ ಎಂಬ ಕೊರೊನಾದ ಹೊಸ ತಳಿ ತನ್ನ ಆಟವನ್ನು ಬೆಳಗಾವಿಯಲ್ಲಿಯೂ ಶುರುವಿಟ್ಟುಕೊಂಡಿದೆ.

ನಿನ್ನೆ ಬೆಳಗಾವಿಯಲ್ಲಿ ಮೊದಲ ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ಅಧಿವೇಶನ ನಡೆಯುತ್ತಿರುವ ವೇಳೆ ಒಮಿಕ್ರಾನ್ ಪತ್ತೆ ಹಿನ್ನೆಲೆ ಬೆಳಗಾವಿಯಲ್ಲಿ ಆತಂಕ ಮನೆ ಮಾಡಿದೆ. ಡಿಸೆಂಬರ್ 13ರಂದು ನೈಜೇರಿಯಾದಿಂದ ಬೆಳಗಾವಿಗೆ ಬಂದಿದ್ದ 52 ವರ್ಷದ ವ್ಯಕ್ತಿಗೆ ಆರ್‌ಟಿಪಿಸಿಆರ್ ಟೆಸ್ಟ್ ವೇಳೆ ಕೊವಿಡ್ ಪಾಸಿಟಿವ್ ಬಂದಿತ್ತು. ಬಳಿಕ ಜಿನೋಮ್ ಸಿಕ್ವೆನ್ಸಿಂಗ್ ವರದಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸದ್ಯ ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಟೆಸ್ಟ್ ಮಾಡಲಾಗುತ್ತಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತು ಜನರ ಥ್ರೋಟ್ ಸ್ವ್ಯಾಬ್ ಸಂಗ್ರಹಿಸಿದ್ದಾರೆ. ಒಮಿಕ್ರಾನ್ ಸೋಂಕಿತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಬೆಂಗಳೂರಿನಲ್ಲಿ 8 ಜನರಿಗೆ ಒಮಿಕ್ರಾನ್
ರಾಜ್ಯದಲ್ಲಿ ಒಮಿಕ್ರಾನ್ ಭಯಾನಕ ದಾಳಿ ಮಾಡಿದೆ. ದಕ್ಷಿಣ ಆಫ್ರಿಕಾ ಮಾರಿ ರಾಜಧಾನಿಯಲ್ಲಿ ಕೇಕೆ ಹಾಕಿದೆ. ನಿನ್ನೆ ಒಂದೇ ದಿನ ಐವರಿಗೆ ಒಮಿಕ್ರಾನ್ ವಕ್ಕರಿಸಿದ್ದು, ಇಡೀ ಬೆಂಗಳೂರಿಗೆ ಬೆಂಗಳೂರೇ ನಲುಗಿ ಹೋಗಿದೆ. ನಿನ್ನೆ ಐವರಿಗೆ ದಾಳಿ ಮಾಡಿರುವ ಒಮಿಕ್ರಾನ್, ಬೆಂಗಳೂರಿನಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಂಡಿದೆ. ನಿನ್ನೆವರೆಗೂ 3ಕೇಸ್ ಇದ್ದ ಒಮಿಕ್ರಾನ್, ಈಗ 8ಕ್ಕೆ ಏರಿಕೆಯಾಗಿದೆ. ನಿನ್ನೆ ಮೂವರು ವ್ಯಕ್ತಿಗಳು ಹಾಗೂ ಇಬ್ಬರು ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗೆ ಭಾರಿ ಆತಂಕ ಹೆಚ್ಚಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *