ಜನರೇ ಗಮನಿಸಿ, Omicron ಸೋಂಕಿತರ ಟ್ರಾವೆಲ್ ಹಿಸ್ಟರಿ ಬಹಿರಂಗ: ಪಾಸಿಟಿವ್ ಬಂದಿದ್ರೂ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ
ರಾಜ್ಯದಲ್ಲಿ (Karnataka) ಗುರುವಾರ ಐದು ಹೊಸ ಓಮೈಕ್ರಾನ್ ಪ್ರಕರಣಗಳು (Omicron Cases) ಪತ್ತೆಯಾಗಿದ್ದು, ಗುಪ್ತಗಾಮಿನಿಯಂತೆ ಸಂಚಾರ ಮಾಡುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಓಮೈಕ್ರಾನ್ ಸೋಂಕಿತರೊಬ್ಬರಿಗೆ ಪಾಸಿಟಿವ್ ವರದಿ ಬಂದಿದ್ರೂ ಬೆಂಗಳೂರಿನಿಂದ ಬೆಳಗಾವಿಗೆ (Bengaluru To Belagavi) ಪ್ರಯಾಣ ಮಾಡಲು ಆರೋಗ್ಯಾಧಿಕಾರಿಗಳು ಅನುಮತಿ ನೀಡಿರೋದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಇದುವರೆಗೂ 82 ಪ್ರಕರಣಗಳು ದಾಖಲಾಗಿದೆ. ದೆಹಲಿಯಲ್ಲಿ ಗುರುವಾರ ಹೊಸ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ 10 ಒಮೈಕ್ರಾನ್ ಪ್ರಕರಣ ದಾಖಲಾಗಿದೆ. ಸೋಂಕಿತರಲ್ಲಿ ಸೌಮ್ಯ ಗುಣ ಲಕ್ಷಣ ಕಂಡು ಬಂದಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಓಮೈಕ್ರಾನ್ ಕೇಸ್ -4 ಯುವತಿ
ಇಂಗ್ಲೆಂಡ್‌ನಿಂದ ಪ್ರಯಾಣ ಮಾಡಿದ್ದು, ಡಿ.13ರಂದು ಯುಕೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಯುಕೆಯಿಂದ ಕೊರೊನಾ ನೆಗೆಟಿವ್ ರಿಪೋರ್ಟ್‌ನೊಂದಿಗೆ ಪ್ರಯಾಣ ಮಾಡಲಾಗಿತ್ತು, ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟೆಸ್ಟ್ ವೇಳೆ ಓಮೈಕ್ರಾನ್ ಪತ್ತೆಯಾಗಿದೆ. ಯುವತಿ 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ದಿನ ವಿಮಾನ ನಿಲ್ದಾಣದಿಂದ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ರೋಗಿಯ ಕೋರಿಕೆಯ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತೆಯನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದುದರಿಂದ ಪ್ರಾಥಮಿಕ ಸಂಪರ್ಕ ಇಲ್ಲ.
ಓಮೈಕ್ರಾನ್ ಕೇಸ್ ನಂ-5, 52 ವರ್ಷದ ಪುರುಷ
ಡಿ.13ರಂದು ನೈಜೀರಿಯಾದಿಂದ ಬೆಂಗಳೂರಿಗೆ ಬಂದಿದ್ದು, ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟೆಸ್ಟ್ ವೇಳೆ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆಯಾದ್ರೂ ಆರೋಗ್ಯಾಧಿಕಾರಿಗಳು ಈತನಿಗೆ ಬೆಳಗಾವಿಗೆ ತೆರಳಲು ಅವಕಾಶ ನೀಡಿದ್ದಾರೆ. ಓಮೈಕ್ರಾನ್ ಸೋಂಕಿತ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿ, ಮರುದಿನ ಸೋಂಕಿತನಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ.ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರ ಟೆಸ್ಟ್ ವರದಿ ಬರಬೇಕಿದೆ
ಓಮೈಕ್ರಾನ್ ಕೇಸ್ ನಂ-6, 70 ವರ್ಷದ ವೃದ್ಧೆ
ಡಿ.3ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿ ಓಮೈಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಸೋಂಕಿನ ಲಕ್ಷಣ ಹಿನ್ನೆಲೆ ಡಿಸೆಂಬರ್ 5ರಂದು ವೃದ್ಧೆಗೆ RTPCR ಟೆಸ್ಟ್ ಮಾಡಲಾಗಿತ್ತು. ಮಹದೇವಪುರದ ಖಾಸಗಿ ಲ್ಯಾಬ್ನಲ್ಲಿ ಟೆಸ್ಟಿಂಗ್ ಮಾಡಲಾಗಿದ್ದು, ಡಿಸೆಂಬರ್ 6ರಂದು ವೃದ್ಧೆಗೆ ಓಮಿಕ್ರಾನ್ ಸೋಂಕು ಇರೋದು ದೃಢವಾಗಿದೆ. ವೃದ್ಧೆ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರ ಪೈಕಿ ಇಬ್ಬರಿಗೆ ಓಮೈಕ್ರಾನ್ ಪಾಸಿಟಿವ್ ಖಚಿತವಾಗಿದೆ.
ಓಮೈಕ್ರಾನ್ ಕೇಸ್ ನಂ:7, 36 ವರ್ಷದ ವ್ಯಕ್ತಿ
ಡಿ.3ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ದೆಹಲಿ ಓಮಿಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಡಿಸೆಂಬರ್ 5ರಂದು ವ್ಯಕ್ತಿಗೆ RTPCR ಟೆಸ್ಟ್ ಗೆ ಒಳಗಾಗಿದ್ದರು, ಡಿಸೆಂಬರ್ 6ರಂದು ಓಮಿಕ್ರಾನ್ ತಗುಲಿರುವುದು ಧೃಡಪಟ್ಟಿದೆ. ಅಂದೇ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದರು, 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ದೆಹಲಿಗೆ ಸಂಬಂಧಿಕರ ವಿವಾಹಕ್ಕೆ ಹೋಗಿದ್ದರು. 70 ವರ್ಷದ ವೃದ್ಧೆ ಹಾಗೂ 36 ವರ್ಷದ ವ್ಯಕ್ತಿ ತಾಯಿ-ಮಗ
ಓಮೈಕ್ರಾನ್ ಕೇಸ್ ನಂ-8, 33 ವರ್ಷದ ವ್ಯಕ್ತಿ
ಡಿ.8ರಂದು ದ.ಆಫ್ರಿಕಾದಿಂದ ದೆಹಲಿಗೆ ಬಂದು ಅದೇ ದಿನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಡಿ.10ರಂದು ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದ್ದಕ್ಕೆ ಟೆಸ್ಟ್ ಮಾಡಲಾಗಿತ್ತು. ಓಮೈಕ್ರಾನ್ ಪಾಸಿಟಿವ್ ಬಂದ ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಅಪಾರ್ಟ್ಮೆಂಟ್ ನಿವಾಸಿ ಓಮೈಕ್ರಾನ್ ಸೋಂಕು
ಅಂತರಾಷ್ಟ್ರೀಯ ಪ್ರಯಾಣಿಕರು ಅಲ್ಲದ ಕಾರಣ ಮಹಾದೇವಪುರ ವಲಯದ ಬೆಳ್ಳಂದೂರು ನಲ್ಲಿ ಇರುವ ಅಪಾರ್ಟ್ಮೆಂಟ್ ನಲ್ಲಿ ಕ್ವಾರಂಟೈನ್ ಆಗದೇ ಮನೆಗೆ ಬಂದಿದ್ರು. ಸೊಂಕಿತರ ಸಂಪರ್ಕಿತರು ಎಂದು ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಓಮಿಕ್ರಾನ್ ಪಾಸಿಟಿವ್ ದೃಢವಾಗಿದೆ. ಅಪಾರ್ಟ್ಮೆಂಟ್ ಕೆಲ ಮಂದಿಗೆ ಬಿಬಿಎಂಪಿ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಪಾಸಿಟಿವ್ ಬಂದ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು