ಮಕಾಡೆ ಮಲಗಿದ ಅಲ್ಲು ಸಿನಿಮಾ: `ಪುಷ್ಪ’.. ಫೈರ್​ ಅಲ್ಲ.. ಟಾರ್ಚರ್ ಎಂದ ಟ್ರೋಲಿಗರು!

ಬಹುನಿರೀಕ್ಷಿತ ‘ಪುಷ್ಪ’(Pushpa) ಸಿನಿಮಾ ವಿಶ್ವದಾದ್ಯಂತ ಡಿಸೆಂಬರ್​17ರಂದು ಬಿಡುಗಡೆಯಾಗಿದೆ. ಅಲ್ಲು ಅರ್ಜುನ್​(Allu Arjun) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಈ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ,ಈ ಸಿನಿಮಾ ಫಸ್ಟ್​ ಶೋ(First Show) ಮುಗಿಯುತ್ತಿದ್ದಂತೆ  ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲು ಅರ್ಜು ಫ್ಯಾನ್ಸ್​ ಮಾತ್ರ ಸೂಪರ್​ ಡೂಪರ್​ ಹಿಟ್​ ಅಂದರು. ಉಳಿದವರು ಈ ಸಿನಿಮಾ ಅಷ್ಟೇನು ಇಲ್ಲ. ಹೇಳಿಕೊಳ್ಳುವಷ್ಟು ಇಲ್ಲ. ಒಂದು ಬಾರಿ ಕಷ್ಟ ಪಟ್ಟು ನೋಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ಚಿತ್ರಮಂದಿರಗಳಲ್ಲು ಹೌಸ್​ಫುಲ್(Housfull)​ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ 10 ಪುಷ್ಪ ಸಿನಿಮಾ ಸೇರಿಸಿದರೆ ಒಂದು ಕೆಜಿಎಫ್(KGF)​ ಎಂದು ಅಭಿಮಾನಿಗಳು ಪೋಸ್​​ ಕೊಡುತ್ತಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತ ಪ್ರತಿಕ್ರಿಯೆ ಸಿಗದಿದ್ದಾಗ ಎಲ್ಲರೂ ಸೈಲೆಂಟ್​ ಆಗಿದ್ದಾರೆ. ಪುಷ್ಪ ಸಿನಿಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವ ಮುನ್ನ ಸಾವಿರ ಸಲ ಯೋಚಿಸಿ ಮಾತನಾಡಿ ಎಂದು ಟ್ರೋಲಿಗರು(Trollers) ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಪುಷ್ಪದಂತೆ ಸಾವಿರ ಸಿನಿಮಾ ಬಂದರೂ ನಮ್ಮ ಕೆಜಿಎಫ್​ ಸಿನಿಮಾ ಮುಂದೆ ಶೂನ್ಯ ಎಂದು ಟ್ರೋಲ್(Troll)​ ಮಾಡುತ್ತಿದ್ದಾರೆ. ಕನ್ನಡದವರು ಇರಲಿ, ಅವರ ರಾಜ್ಯದ ಅಭಿಮಾನಿಗಳೇ ಪುಷ್ಪ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ. 

‘ಪುಷ್ಪ.. ಫೈರ್​ ಅಲ್ಲ.. ಟಾರ್ಚರ್​.. ಅಂತಿದ್ದಾರೆ ಟ್ರೋಲಿಗರು’

ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸಿನಿಮಾ ಉತ್ತಮವಾಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ‘ಕೆಜಿಎಫ್​’ ಬಗ್ಗೆ ಹಗುರವಾಗಿ ಮಾತನಾಡಿದ್ದ ಆಂಧ್ರದ ನಿರ್ದೇಶಕರಿಗೆ ಈಗ ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಪುಷ್ಪ 10 ಸಿನಿಮಾ ಸೇರಿದರೆ ಒಂದು ಕೆಜಿಎಫ್​ ಎಂದು ಪಕ್ಕದ ರಾಜ್ಯದವರು ಕಿಂಡಲ್​ ಮಾಡಿದ್ದರು. ಆದರೆ ಈಗ ಏನು ಮಾತನಾಡದೇ ಫುಲ್​ ಸೈಲೆಂಟ್​ ಆಗಿದ್ದಾರೆ. ಚಿತ್ರದಲ್ಲಿ ಪುಷ್ಪ ಹೂ ಅಲ್ಲ ಫೈರ್​ ಎಂಬ ಡೈಲಾಗ್​ ಅನ್ನು ಅಲ್ಲು ಅರ್ಜುನ್​ ಹೇಳಿದ್ದರು. ಆದರೆ, ಅವರ ಫ್ಯಾನ್ಸ್​​ಗಳೇ ಪುಷ್ಪ ಫೈರ್​ ಅಲ್ಲ ಟಾರ್ಚರ್​ ಅಂತ ಟ್ವೀಟ್​ ಮಾಡುತ್ತಿದ್ದಾರೆ.

ಕೆಜಿಎಫ್​ಗೆ ಹೋಲಿಸಿ ತಪ್ಪು ಮಾಡಿಬಿಟ್ರು..!

ಈ ಮೊದಲು ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್​ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದಿದ್ದರು. ಈಗ ಚಿತ್ರ ರಿಲೀಸ್​ ಆಗಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಅದಕ್ಕೆ ಹೇಳುವುದು ಮೊದಲೇ ನಿರ್ಧಾರ ಮಾಡಿಕೊಳ್ಳಬೇಡಿ. ನಮ್ಮ ರಾಕಿಭಾಯ್​ ಅವರ ಕೆಜಿಎಫ್​ ಸಿನಿಮಾ ತರ ಯಾವ ಸಿನಿಮಾನೂ ಬರಲ್ಲ ಎಂದು ಹೇಳುತ್ತಿದ್ದಾರೆ.

 

 

ಟ್ರೋಲಿಗರಿಗೆ ಆಹಾರವಾದ ಪುಷ್ಪ ಸಿನಿಮಾ!

ಟ್ರೋಲಿಗರ ಬಗ್ಗೆ ಹೇಳಬೇಕೆ ಸ್ವಲ ಕಂಟೆಂಟ್​ ಸಿಕ್ಕರೂ ಜನರನ್ನೂ ಸಾವಿರ ರೀತಿಯಲ್ಲಿ ರಂಜಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಕೈಗೆ ಪುಷ್ಪ ಸಿನಿಮಾ ಸಿಕ್ಕರೆ ಏನಾಗಬೇಡಿ ಊಹೆ ಮಾಡಿಕೊಳ್ಳಿ. ಯಶ್​ ಅವರ ಡೈಲಾಗ್​ಗಳ ವಿಡಿಯೋಗಳನ್ನು ಇಟ್ಟುಕೊಂಡು ಎಡಿಟ್​ ಮಾಡಿ ಸಖತ್​ ಟ್ರೋಲ್​ ಮಾಡುತ್ತಿದ್ದಾರೆ.

ಇನ್ನೂ ವಿಲನ್​ ಪಾತ್ರಕ್ಕೆ ಫಹಾದ್​ ಫಾಜಿಲ್​ ಅವರನ್ನು ಕರೆಸಿರುವುದು ಊಟ ಆದಮೇಲೆ ಉಪ್ಪು ಬಡಿಸಿದಂತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಅಂತಹ ಅದ್ಭುತ ನಟನನ್ನು ಕರೆಸಿ , ಕೇವಲ 5 ನಿಮಿಷಕ್ಕೆ ಪಾತ್ರ ಮಾಡಿಸಿದರೆ ಇನ್ನೇನು ಆಗುತ್ತೆ ಅಂತ ಕಾಲೆಳೆಯುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *