Bollywood: 2022ಕ್ಕೆ ಬಾಲಿವುಡ್ನಲ್ಲಿ ತೆರೆ ಕಾಣಲಿರುವ ಮಹಿಳಾ ಪ್ರಧಾನ ಸಿನಿಮಾಗಳಿವು..!
ವರ್ಷ ಸಿನಿ ಜಗತ್ತಿನಲ್ಲಿ(Film World) ತೆರೆಕಂಡ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ರಿಲೀಸ್ ಆದ ಚಿತ್ರಗಳ ಪೈಕಿ ಮಹಿಳಾ ಪ್ರಧಾನ ಸಿನಿಮಾಗಳು ಗಮನ ಸೆಳೆದಿದೆ. ಹಿಂದಿ(Hindi) ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಕಥೆಗಳಿಗೆ ಪ್ರೇಕ್ಷಕರು ಹೆಚ್ಚು ಮಣೆ ಹಾಕ್ತಾರೆ. ಸ್ಟಾರ್ ಹೀರೋಗಳಂತೆ(Star Hero) ನಟಿಯನ್ನು ನಂಬಿ ನಿರ್ಮಾಪಕರು(Producer) ಸಿನಿಮಾ ಮಾಡ್ತಾರೆ, ಪ್ರೇಕ್ಷಕರು ಸಿನಿಮಾ ನೋಡ್ತಾರೆ.. ಹೀಗಾಗಿಯೇ ಈ ವರ್ಷ ಬಿಡುಗಡೆಯಾದ ಪಾಗ್ಲೇಟ್, ಮಿಮಿ, ಸೈನಾ, ದಿ ಗರ್ಲ್ ಆನ್ ದ ಟ್ರೇನ್, ಶೆರ್ನಿ ಸೇರಿ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಸಾಕಷ್ಟು ಗಮನ ಸೆಳೆದವು.. ಹಾಗೆಯೇ 2021ರಲ್ಲಿ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಬಾಲಿವುಡ್(Bollywood) ಅಂಗಳದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಸಿನಿಮಾಗಳು ಈಗಿನಿಂದಲೇ ಸಾಕಷ್ಟು ಕುತೂಹಲ ಮೂಡಿಸುತ್ತಿವೆ.. ಇದ್ರೆ ಹೊಸವರ್ಷದಲ್ಲಿ ಬಾಲಿವುಡ್ ನಲ್ಲಿ ಬರುವ ಮಹಿಳಾ ಪ್ರಧಾನ ಸಿನಿಮಾಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ.
1)ಗಂಗೂಬಾಯಿ ಕಾಠಿಯಾವಾಡಿ: ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಗೂಬಾಯಿ ಕಾಠಿಯಾವಾಡಿ ಕಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಚಿತ್ರವನ್ನು ತಯಾರಿಸಲಾಗಿದೆ. ಈಗಾಗಲೇ ಚಿತ್ರವು ತನ್ನ ಟೀಸರ್ ಮುಖಾಂತರ ವೀಕ್ಷಕರ ಮನ ಗೆದ್ದಿದ್ದು, ಬೆಳ್ಳಿ ತೆರೆಯಲ್ಲಿ ಚಿತ್ರವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ ಈ ಹಿಂದಿನ ಚಿತ್ರಗಳಂತೆಯೇ ಈ ಚಿತ್ರ ಕೂಡ ಅದ್ದೂರಿಯಾಗಿ ಮೂಡಿಬಂದಿದೆ.
3)ಡಬಲ್ XL: ಇದೊಂದು ಹಾಸ್ಯಪ್ರಧಾನ ಮಹಿಳಾ ಚಿತ್ರವಾಗಿದ್ದು, ಸೋನಾಕ್ಷಿ ಸಿನ್ಹಾ ಹಾಗೂ ಹುಮಾ ಖುರೇಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಸಿನಿಮಾ 2022ರ ಬೇಸಿಗೆ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಡಬಲ್ ಎಕ್ಸ್ಎಲ್ ಮಹಿಳೆಯರು ಎದುರಿಸುತ್ತಿರುವ ದೇಹದ ಶೇಮಿಂಗ್ ಸುತ್ತ ಚಿತ್ರ ಕಥೆ ಇದ್ದು ಈಗಾಗಲೇ ಟ್ರೈಲರ್ ಮೂಲಕ ಸಿನಿಮಾ ಗಮನಸೆಳೆದಿದೆ..
4)ಜೀ ಲೇ ಜರಾ: ಜೀ ಲೇ ಜರಾ ಈ ಚಲನಚಿತ್ರವು
ಜಿಂದಗಿ ನಾ ಮಿಲೇಗಿ ದೊಬಾರಾ ಅವರ ಸ್ತ್ರೀ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದ್ದು, ಮೂವರು ಹುಡುಗಿಯರ ಪ್ರವಾಸದ ಸುತ್ತ ಚಿತ್ರ ಕತೆ ಹೆಣೆಯಲಾಗಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಕಾಣಿಸಿಕೊಂಡಿದ್ದು, ಫರ್ಹಾನ್ ಅಖ್ತರ್ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ.
5)ಶಭಾಷ್ ಮಿಥು: ಶಭಾಷ್ ಮಿಥು ಈ ಚಿತ್ರವು ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿದ್ದಾರೆ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಭಾರತದ ಮಹಿಳಾ ಕ್ರಿಕೆಟಿಗರ ಜೀವನಾಧಾರಿತ ಮೊದಲ ಬಯೋಪಿಕ್ ಸಿನಿಮಾ ಆಗಿದೆ.. ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳು, ಖೇಲ್ ರತ್ನ ಪ್ರಶಸ್ತಿ, ವಿಶ್ವದ ವಿಸ್ಡನ್ ಲೀಡಿಂಗ್ ವುಮನ್ ಕ್ರಿಕೆಟರ್ ಪ್ರಶಸ್ತಿಗಳನ್ನು ಗೆದ್ದಿರುವ ಮಿಥಾಲಿ ಅವರ ಜೀವನ ಹಾಗೂ ಕ್ರಿಕೆಟ್ ಜರ್ನಿ ಕುರಿತು ಆಗಿರುವ ಈ ಸಿನಿಮಾ 2022 ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.