Imran Khan On India: ‘ನನಗೆ ಭಯವಿದೆ….’ ಭಾರತದ ವಿರುದ್ಧ ಪರಮಾಣು ಯುದ್ಧದ ಕುರಿತು ಪಾಕ್ ಪ್ರಧಾನಿ Imran Khan ಹೇಳಿದ್ದೇನು?
ಲಾಹೋರ್: Imran Khan On Nuclear War With India – ಭಾರತದೊಂದಿಗಿನ ಪರಮಾಣು ಯುದ್ಧದ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತವು ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದರೆ, ಅದೇ ಧಾಟಿಯಲ್ಲಿ ಭಾರತಕ್ಕೆ ಉತ್ತರ ನೀಡಲಾಗುವುದು ಎಂದು ಇಮ್ರಾನ್ ಹೇಳಿದ್ದಾರೆ. ಸುದ್ದಿ ವಾಹಿನಿ ಅಲ್-ಜಜೀರಾಗೆ ನೀಡಿದ ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಾಕ್ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan), ಭಾರತವು ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದರೆ, ಫೆಬ್ರವರಿ 2019 ರಲ್ಲಿ ನೀಡಲಾದಂತಹ ಆಕ್ರಮಣಕಾರಿ ಪ್ರತಿಕ್ರಿಯೆಯನ್ನೇ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಇಮ್ರಾನ್ ಖಾನ್ ಭಾರತದ ಆಡಳಿತಾರೂಢ ಸರ್ಕಾರವನ್ನು ಫ್ಯಾಸಿಸ್ಟ್ ಎಂದು ಕರೆದಿದ್ದಾರೆ. ಇಮ್ರಾನ್, “ಈ ಮೊದಲಿನಂತೆ ನಡೆದರೆ, ಎರಡು ಪರಮಾಣು ಶಕ್ತಿಗಳು (Nuclear War) ಮುಖಾಮುಖಿಯಾಗಲಿವೆ ಮತ್ತು ಅದರ ಪರಿಣಾಮಗಳು ಭೀಕರವಾಗಿರಲಿವೆ ಎಂಬ ಭಯ ನನಗಿದೆ, ಮೂಲಭೂತವಾದಿ ಮನಸ್ಸು ಮಾತ್ರ ಆ ರೀತಿ ಯೋಚಿಸಬಹುದು” ಎಂದು ಇಮ್ರಾನ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕಾಶ್ಮೀರ ವಿಷಯವನ್ನು ಯುಎಸ್‌ಎ ಭದ್ರತಾ ಮಂಡಳಿಯಿಂದ ಇಸ್ಲಾಮಿಕ್ ರಾಷ್ಟ್ರಗಳ ವೇದಿಕೆಯವರೆಗೆ ಪ್ರಸ್ತಾಪಿಸುತ್ತಿದ್ದೇವೆ, ಆದರೆ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಭಾರತದೊಂದಿಗೆ ಅವರ ವೈಯಕ್ತಿಕ ಸಂಬಂಧವನ್ನು ಹೊಂದಿವೆ, ಅದನ್ನು ನಾವು ಅವರಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಇದು ಪಾಕಿಸ್ತಾನದ ಕರ್ತವ್ಯವಾಗಿದ್ದು, ನಾವು ಕಾಶ್ಮೀರದ ಜನರ ಧ್ವನಿ ಎತ್ತುವುದನ್ನು ಮುಂದುವರೆಸಲಿದ್ದೇವೆ ಎಂದಿದ್ದಾರೆ.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೆ ಯಾರು ಹೊಣೆ?
ಈ ಸಂದರ್ಭದಲ್ಲಿ, ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಕುರಿತು ಇಮ್ರಾನ್ ಖಾನ್ ಅವರನ್ನು ಪ್ರಶ್ನಿಸಲಾಗಿ. ಪಾಕಿಸ್ತಾನವು ಸಂಪನ್ಮೂಲಗಳಿಂದ ಸಮೃದ್ಧವಾಗಿತ್ತು. ಆದರೆ ಭುಟ್ಟೋ ಮತ್ತು ಷರೀಫ್ ಕುಟುಂಬವು ಅದರ ಲಾಭವನ್ನು ಪಡೆದುಕೊಂಡಿತು. ನಮ್ಮ ಸರ್ಕಾರವು ಪಾಕಿಸ್ತಾನವನ್ನು ಸಮೃದ್ಧ ದೇಶವನ್ನಾಗಿ ಮಾಡಲು ಬಯಸುತ್ತದೆ ಮತ್ತು ನಾವು ಎರಡು ಅತ್ಯಂತ ಶ್ರೀಮಂತ ಕುಟುಂಬಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದಿದ್ದಾರೆ.
ಎರಡೂ ಕುಟುಂಬಗಳು ತಮ್ಮ ರಾಜವಂಶವನ್ನು ಸ್ಥಾಪಿಸಲು ಶ್ರಮಿಸುತ್ತಿವೆ ಮತ್ತು ದೇಶ ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗೆ ಕಾರಣವಾಗಿವೆ ಎಂದು ಇಮ್ರಾನ್ ಖಾನ್ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.