ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ 2 ರಿಲೀಸ್: ಮತ್ತೆ ಕಮಾಲ್ ಮಾಡೋಕೆ ನಿಧಿಮಾ-ಆದಿ ರೆಡಿ!
2020ರ ಆರಂಭದಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್’ (Love Mocktail)ಸಿನಿಮಾ ಸೂಪರ್ ಹಿಟ್ ಆಗಿತ್ತು. ರಿಲೀಸ್ ಆದ ದಿನ ಚಿತ್ರಮಂದಿರಗಳಿಗೆ ಜನ ಬರಲಿಲ್ಲ. ದಿನಗಳೆದಂತೆ ಈ ಸಿನಿಮಾ ಮಾಡಿದ ಕ್ರೇಜ್(Craze) ಇದೆಯಲ್ಲಾ, ಯಾವ ಕನ್ನಡ ಸಿನಿಮಾಗೂ ಆಗಿಲ್ಲ. ಸಿನಿಮಾ ಸೋತೇ ಹೋಯಿತು ಅಂದುಕೊಳ್ಳುವಾಗಲೇ ಲವ್ಮಾಕ್ಟೈಲ್ ಸೂಪರ್ ಡೂಪರ್(Super Duper Hit) ಹಿಟ್ ಆಗಿತ್ತು. ನೋಡ ನೋಡುತ್ತಲೇ ಚಿತ್ರ ಬಾಕ್ಸಾಫೀಸ್(Box Office)ನಲ್ಲಿ ಕಮಾಲ್ ಮಾಡಿತ್ತು. ಅದರಲ್ಲೂ ಸಿನಿಮಾ ಓಟಿಟಿ(OTT)ಗೆ ಬಂದಮೇಲೆ ಹೆಚ್ಚಿನ ಜನರು ಈ ಸಿನಿಮಾವನ್ನು ನೋಡಿದರು. ಛೇ… ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕಿತ್ತುಅಂದುಕೊಂಡರು. ಹೀಗಾಗಿ ಲಾಕ್ಡೌನ್(Lockdown) ಲಿಫ್ಟ್ ಆದ ಬಳಿಕ ಮತ್ತೆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿತ್ತು. ಇದಾದ ಬಳಿಕ ಡಾರ್ಲಿಂಗ್ ಕೃಷ್ಣ(Darling Krishna) ಲವ್ಮಾಕ್ಟೈಲ್ 2 ಸಿನಿಮಾ ಬರುವುದಾಗಿ ಘೋಷಿಸಿದ್ದರು. ಅದರ ಬಿಡುಗಡೆ ದಿನಾಂಕ ಕೂಡ ರಿವೀಲ್ ಆಗಿದೆ. ಫೆಬ್ರವರಿ 11ಕ್ಕೆ ಪ್ರೇಕ್ಷಕರ ಮುಂದೆ ಲವ್ ಮಾಕ್ಟೈಲ್ ಬರಲಿದೆ. ಲವ್ ಮಾಕ್ಟೈಲ್ ಮಾಡಿದ್ದ ಮ್ಯಾಜಿಕ್(Magic) , ಲವ್ ಮಾಕ್ಟೈಲ್ 2 ಮಾಡಲಿದ್ಯಾ ಎಂದು ಕಾದುನೋಡಬೇಕಿದೆ. ಇನ್ನೂ ಆದಿತ್ಯಾ- ನಿಧಿಮಾ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಜೊತೆಗೆ ಹೆಂಗೆ ನಾವು ಎಂಬ ಡೈಲಾಗ್ ಕೂಡ ಎಲ್ಲರ ಬಾಯಲ್ಲೂ ಇದೆ.
ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ – 2 ರಿಲೀಸ್!
ಶೀರ್ಷಿಕೆಯೇ ಸೂಚಿಸುವಂತೆ ಇದು ಲವ್ ಸ್ಟೋರಿ ಸಿನಿಮಾ. ಪ್ರೇಮಿಗಳಿಗೆ ಸೂಕ್ತವಾಗುವಂತಹ ಕಥೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಫೆ.14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್ ಆಗಬಹುದು ಎಂದು ಸಿನಿಪ್ರಿಯರು ಊಹಿಸಿದ್ದರು. ಆದರೆ, ಆ ದಿನಕ್ಕಿಂದ ಮೂರು ದಿನ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ . ‘ಲವ್ ಮಾಕ್ಟೇಲ್ 2’ ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಕೇಳುಗರಿಗೆ ಇಷ್ಟ ಆಗಿವೆ. ಚಿತ್ರದ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ.
ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮಿಲನ ನಾಗರಾಜ್!
ಲವ್ ಮಾಕ್ಟೈಲ್ 2 ಸಿನಿಮಾ ರಿಲೀಸ್ ದಿನಾಂಕವನ್ನು ಮಿಲನ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ. ನೀವೆಲ್ಲರೂ ಫೆಬ್ರವರಿ 14ಕ್ಕೆ ರಿಲೀಸ್ ಮಾಡುತ್ತೇವೆ ಎಂದು ಗೆಸ್ಸ್ ಮಾಡಿದ್ದೀರ, ಆದರೆ ನವು ಮೂರು ದಿನದ ಮುಂಚೆಯೇ ಬರುತ್ತಿದ್ದೇವೆ ಎಂದು ಮಿಲನ ನಾಗರಾಜ್ ಬರೆದುಕೊಂಡಿದ್ದಾರೆ. ಇನ್ನೂ ಇದನ್ನು ಕಂಡ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಮೊದಲ ಸಿನಿಮಾವೇ ಪ್ರೇಮಿಗಳ ಪಾಲಿಗೆ ಅದ್ಬುತ ಸಿನಿಮಾವಾಗಿತ್ತು. ಇದೀಗ ಲವ್ ಮಾಕ್ಟೈಲ್ ಹೇಗೆ ಇರುತ್ತೋ ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಿಧಿಮಾ ಪಾತ್ರದ ಬಗ್ಗೆ ಹೆಚ್ಚಾಯ್ತು ಕ್ಯೂರಿಯಾಸಿಟಿ!
ಹೌದಯ, ಆದಿತ್ಯ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದರು. ಇನ್ನೂ ನಿಧಿ ಪಾತ್ರದಲ್ಲಿ ಮಿಲನ ನಾಗರಾಜ್ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಲವ್ ಮಾಕ್ಟೈಲ್ನಲ್ಲಿ ನಿಧಿಮಾ ಪಾತ್ರ ಸಾವನಪ್ಪುತ್ತೆ. ಈ ಲವ್ ಮಾಕ್ಟೈಲ್ 2 ಸಿನಿಮಾದಲ್ಲಿ ಮತ್ತೆ ನಿಧಿಮಾ ಪಾತ್ರ ಬರುತ್ತಾ? ಇಲ್ವಾ? ಬಂದರೂ ಹೇಗೆ ಬರುತ್ತೆ? ಫ್ಲ್ಯಾಶ್ಬ್ಯಾಕ್ ಕಥೆನಾ? ಹೀಗೆ ಹತ್ತು, ಹಲವು ಪ್ರಶ್ನೆಗಳು ಅಭಿಮಾನಿಗಳಿಗೆ ಬಂದಿದೆ. ಈ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡಿತ್ತು. ಇದೀಗ ಲವ್ ಮಾಕ್ಟೈಲ್ 2 ಸಿನಿಮಾದ ಹಾಡುಗಳು ಕೂಡ ಸಖತ್ ಸದ್ದು ಮಾಡುತ್ತಿದೆ.