Morning Digest: ಹೆಚ್ಚಾದ ಶೀತಗಾಳಿ, ಚಿನ್ನದ ಬೆಲೆಯಲ್ಲಿ ಇಳಿಕೆ, ಶೀಘ್ರದಲ್ಲೇ ಎಲೆಕ್ಟ್ರಿಕಲ್ ಟ್ರ್ಯಾಕ್ಟರ್, ಬೆಳಗಿನ ಟಾಪ್ ನ್ಯೂಸ್ಗಳು
1.Karnataka Weather Today: ಶೀತಗಾಳಿ ಹೆಚ್ಚಳ, ಇಂದು ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲು
Karnataka Weather Report Today December 20, 2021: ಕಳೆದ ಮೂರು ದಿನದಂತೆ ಇಂದು ಸಹ ಹವಾಮಾನ (Weather) ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ (Cold Wave) ಜನರನ್ನು ನಡುಗಿಸುತ್ತಿದೆ. ಮುಂದಿನ ನಾಲ್ಕೈದು ದಿನ ಚಳಿಯ (Winter) ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ 11 ಡಿಗ್ರಿ ಸೆಲ್ಸಿಯಸ್ ತಾಪಮನ ದಾಖಲಾಗಲಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಚಳಿ ಸಹ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿದ್ದ ಅಕಾಲಿಕ ಮಳೆಗೆ ಬ್ರೇಕ್ ನೀಡಿದ್ದು, ರೈತ ವರ್ಗ ನಿಟ್ಟುಸಿರು ಬಿಟ್ಟಿದೆ.
2.Petrol And Diesel Price Today: ತೈಲ ಬೆಲೆಯಲ್ಲಿ ಏರಿಳಿತ: ವಾಹನ ಇಂಧನ ತುಂಬಿಸುವ ಮೊದಲು ಇವತ್ತಿನ ಬೆಲೆ ತಿಳಿದುಕೊಳ್ಳಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ (Petrol, Diesel Price) ಕೊಂಚ ಇಳಿಕೆಯಾಗಿದೆ. ಎಲ್ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
3.ಕೋವಿಡ್-19 ಹೊಸ ರೂಪಾಂತರ ಓಮೈಕ್ರಾನ್ ಇಲಿಗಳಲ್ಲಿ ಮೊದಲು ಅಭಿವೃದ್ಧಿಗೊಂಡಿದೆಯೇ..?
ಕೋವಿಡ್-19 ಹೊಸ ರೂಪಾಂತರವು ನವೆಂಬರ್ 25ರಂದು ದಕ್ಷಿಣ ಆಫ್ರಿಕದಿಂದ (South Africa) ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮೊದಲು ವರದಿಯಾಗಿದೆ. ಈ ಹೊಸ ರೂಪಾಂತರಕ್ಕೆ (Worm Transformation) ಓಮೈಕ್ರಾನ್ (Omicron) ಎಂದು ಹೆಸರಿಸಲಾಗಿದ್ದು ಇದನ್ನು ಕಳವಳಕಾರಿ ರೂಪಾಂತರ ಎಂಬುದಾಗಿ ಗುರುತಿಸಲಾಗಿದೆ. ಅಂದರೆ ಇದು ಕ್ಷಿಪ್ರವಾಗಿ ಹರಡುವ ರೂಪಾಂತರ ಎಂಬುದಾಗಿ ವ್ಯಾಖ್ಯಾನಿಸಲಾಗಿದ್ದು ರೂಪಾಂತರ ಪತ್ತೆಯಾದಾಗಿನಿಂದ ಹೆಚ್ಚಿನ ದೇಶಗಳು ದಕ್ಷಿಣ ಆಫ್ರಿಕದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿವೆ. ಹಲವಾರು ದಶಕಗಳಿಂದ (Several decades) ಈ ರೂಪಾಂತರ ಹುಟ್ಟಿಕೊಂಡಿದೆ ಎಂಬ ಸಿದ್ಧಾಂತವೂ ಇದೆ.
4.Electric Tractor: ಶೀಘ್ರದಲ್ಲಿಯೇ ಭಾರತದಲ್ಲಿ ಬ್ಯಾಟರಿ-ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ಬಿಡುಗಡೆ ಮಾಡುವುದಾಗಿ ಸಚಿವ ಗಡ್ಕರಿ ಘೋಷಣೆ
ದಿನೇ ದಿನ ಪೆಟ್ರೋಲ್, ಡಿಸೇಲ್(Petrol -Diesel)ಬೆಲೆ ಏರಿಕೆಯಾಗುತ್ತಿರುವುದು (Price Hike)ವಾಹನ ಚಾಲಕರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಹೀಗಾಗಿ ಪೆಟ್ರೋಲ್, ಡಿಸೇಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು(Electrical Vehicles) ಮಾರುಕಟ್ಟೆಗೆ(Market)ಬಂದಿವೆ. ಅಲ್ಲದೆ ಕೇಂದ್ರ ಸರಕಾರ(Central Government)ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಈಗಾಗಲೇ ಅನೇಕ ಪ್ರತಿಷ್ಠಿತ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.ಇನ್ನು ಎಲೆಕ್ಟ್ರಿಕ್ ವಾಹನ ಬಳಕೆಯಿಂದ ಪ್ರಮುಖವಾಗಿ ನಗರ ಪ್ರದೇಶದಲ್ಲಿನ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಇಂಧನ ಆಮದು ಪ್ರಮಾಣವೂ ಕಡಿಮೆಯಾಗಲಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ವಿಶೇಷ ಒತ್ತು ನೀಡುತ್ತಿದೆ. ಹೀಗಾಗಿಯೇ ಇಂದು ಮಾರುಕಟ್ಟೆಯಲ್ಲಿ ಆಟೋಮೊಬೈಲ್‌ಗಳು, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್‌ಗಳು ಮತ್ತು ಮೈಕ್ರೋ ಟ್ರಕ್‌ಗಳ ಅಬ್ಬರ ಹೆಚ್ಚಾಗಿದೆ. ಇದರ ನಡುವೆ ಭಾರತದಲ್ಲಿ ಎಲೆಕ್ಟ್ರಿಕಲ್ ಕ್ರಾಂತಿ ಮಾಡಲು ಮತ್ತೊಂದು ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡುವುದಾಗಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
5. Gold Price Today: ಚಿನ್ನ ಖರೀದಿಸುವ ಹೆಣ್ಮಕ್ಕಳಿಗೆ ಗುಡ್ನ್ಯೂಸ್, ಇಂದು ಬೆಲೆ ಕಡಿಮೆಯಾಗಿದೆ ನೋಡಿ
Gold Rate on Dec 20, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,690 ರೂ. ಇತ್ತು. ಇಂದು 10 ರೂ. ಇಳಿಕೆಯಾಗಿದ್ದು 47,680 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,690 ರೂ. ಇತ್ತು. ಇಂದು 10 ರೂ. ಇಳಿಕೆಯಾಗಿದ್ದು, 48,680 ರೂ. ಆಗಿದೆ.ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 49,850 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 45,700 ರೂ. ಇದೆ. ಹಾಗೆಯೇ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.