Chanakya Niti: ಹೀಗೆ ಮಾಡಿದ್ರೆ ಖಂಡಿತಾ ಶ್ರೀಮಂತರಾಗ್ತೀರಾ ಎಂದಿದ್ದಾರೆ ಚಾಣಕ್ಯ

ಮನುಷ್ಯ(Human)ಹೇಗೆ ಜೀವಿಸಬೇಕು, ಜೀವನದಲ್ಲಿ(Life)ಎಂಥ ನಿಯಮಗಳನ್ನು (Rules)ಅಳವಡಿಸಿಕೊಂಡಿರಬೇಕು ಅನ್ನೋ ಬಗ್ಗೆ ಚಾಣಕ್ಯರು(Chanakya) ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮನುಷ್ಯ ಶ್ರೀಮಂತನಾಗುವುದು(Rich) ಹೇಗೆ ಎಂದು ಹೇಳಿರುವ ಚಾಣಕ್ಯರು, ಮನುಷ್ಯನ ದಡ್ಡತನದಿಂದಲೇ ಶ್ರೀಮಂತಿಕೆಗೆ ಧಕ್ಕೆ ಅಂತಲೂ ಹೇಳಿದ್ದಾರೆ. ಮಾನವ ಜೀವನದಲ್ಲಿ ಹಣದ (Money)ಮಹತ್ವ ಮತ್ತು ಉಪಯುಕ್ತತೆಯ ಬಗ್ಗೆ ಚಾಣಕ್ಯನಿಗೆ ಚೆನ್ನಾಗಿ ತಿಳಿದಿತ್ತು. ಚಾಣಕ್ಯನಿಗೆ ಅರ್ಥಶಾಸ್ತ್ರದ ಬಗ್ಗೆ ಆಳವಾದ ಜ್ಞಾನವಿತ್ತು.ಶ್ರೀಮಂತರಾಗಬೇಕೆಂಬ ಬಯಕೆ ಇಂದಿನ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿದೆ. ಸಂಪತ್ತು ಮನುಷ್ಯನಲ್ಲ, ಬದಲಾಗಿ ಅದೊಂದು ಸಾಧನ ರೂಪವೆಂದು ಚಾಣಕ್ಯನನಿಗೆ ತಿಳದಿತ್ತು. ಇದಲ್ಲದೆ, ಭೌತಿಕ ಯುಗದಲ್ಲಿ ಜೀವನವನ್ನು ಹಣವಿಲ್ಲದೆ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದ್ದರಿಂದ, ಮನುಷ್ಯನು ಜೀವನವನ್ನು ಸುಲಭವಾಗಿ ಮತ್ತು ಆರಾಮದಾಯಕವಾಗಿಸಲು ಹೆಚ್ಚು ಹೆಚ್ಚು ಹಣವನ್ನು ಬಯಸುತ್ತಾನೆ. ಹಣ ಸಂಪಾದಿಸಲು ಮನುಷ್ಯ ಶ್ರಮಿಸುತ್ತಾನೆ. ಹಣ ಸಿಗುತ್ತದೆ ಎಂದರೆ ನಾವು ಏಳು ಸಮುದ್ರವನ್ನು ದಾಟಲು ಕೂಡ ಸಿದ್ಧರಾಗಿರುತ್ತೇವೆ. ಹಾಗಾದರೆ ಚಾಣಕ್ಯನ ಪ್ರಕಾರ, ಹಣವನ್ನು ಸಂಪಾದಿಸುವುದು ಹೇಗೆ.? ಶ್ರೀಮಂತರಾಗುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

1)ನೀವು ಮಾಡುವ ಉದ್ಯಮದ ಬಗ್ಗೆ ಉತ್ತಮ ಜ್ಞಾನವನ್ನು ನೀವು ಹೊಂದಿರಬೇಕು: ನಿಮ್ಮ ಉದ್ಯಮದ ಬಗ್ಗೆ ನಿಮಗೆ ಜ್ಞಾನವಿಲ್ಲದಿದ್ದರೆ, ಆ ಉದ್ಯಮದಿಂದ ನೀವು ಲಾಭ ಕಾಣಲು ಸಾಧ್ಯವಿಲ್ಲ. ನಿಮಗೆ ಉದ್ಯಮದ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲದೇ, ಜ್ಞಾನವಿರುವವರನ್ನು ನೀವು ಕೆಲಸಕ್ಕಿಟ್ಟುಕೊಂಡರೆ. ಅವರು ಅದರ ಲಾಭ ಪಡೆಯುತ್ತಾರೆ. ಅಲ್ಲಿಗೆ ನಿಮ್ಮ ಉದ್ಯಮ ಅರ್ಧಕ್ಕೆ ಮುಳಗಿದ ಹಾಗೆ.

2)ಕೆಟ್ಟ ಕಾರ್ಯಕ್ಕೆ ಹಣ ಬಳಕೆ ಬೇಡ: ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ ಹೇಳಿರುವಂತೆ ಹಣವು ಮನುಷ್ಯನ ಜೀವನದ ಪ್ರಮುಖ ಸಂಪನ್ಮೂಲವಾಗಿದೆ. ಇದು ಯಾವುದೇ ವ್ಯಕ್ತಿಯ ಜೀವನವನ್ನು ಬೇಕಾದರೂ ಸುಲಭಗೊಳಿಸಬಹುದು. ಆದ್ದರಿಂದ, ಇದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಹಣದ ಬಳಕೆಯ ಬಗ್ಗೆ ಅರಿವಿಲ್ಲದವರು, ಲಕ್ಷ್ಮಿ ದೇವಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಹಾಗೂ ಲಕ್ಷ್ಮಿ ದೇವಿಯು ಅಂತಹ ವ್ಯಕ್ತಿಯನ್ನು ಬಿಟ್ಟು ಹೋಗುತ್ತಾಳೆ. ಹಣ ಬಂದರೆ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸಬೇಕು. ಇತರರಿಗೆ ಹಾನಿ ಮಾಡಲು ಹಣವನ್ನು ಬಳಸುವವರು ನಂತರ ಕಷ್ಟಗಳನ್ನು ಎದುರಿಸಬೇಕಾಗುತ್ತದೆ..

3)ಗುರಿಯತ್ತ ದೃಢತೆ: ಚಾಣಕ್ಯನ ಪ್ರಕಾರ ಕೋಟ್ಯಾಧಿಪತಿ ಆಗುವ ಗುಣವೆಂದರೆ ಧೈರ್ಯ. ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯವಿಲ್ಲದ ವ್ಯಕ್ತಿಯು ಕೆಲಸ ಮಾಡುವುದನ್ನು ತಪ್ಪಿಸುತ್ತಾನೆ. ಮತ್ತು ಯಾವುದೇ ದೃಢವಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಹಿಂದೇಟಾಕುತ್ತಾನೆ. ಆದ್ದರಿಂದ ಅವನು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಸಂಪತ್ತು ಪಡಡೆಯಬೇಕೆಂದರೆ ಮುಖ್ಯವಾಗಿ ಧೈರ್ಯವನ್ನು ಹೊಂದಿರಬೇಕು. ಮತ್ತು ತನ್ನ ಗುರಿಯತ್ತ ದೃಢತೆಯನ್ನು ಹೊಂದಿರಬೇಕು.

4)ಹಣ ಉಳಿತಾಯ: ಯಾವಾಗಲೂ ಹಣವನ್ನು ಉಳಿಸಬೇಕು ಎಂದು ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳಿದ್ದಾನೆ. ಹಣವನ್ನು ಉಳಿಸುವುದರಿಂದ ಅದು ನಮ್ಮ ಕೆಟ್ಟ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ. ಚಾಣಕ್ಯನ ಪ್ರಕಾರ, ಕೆಟ್ಟ ಸಮಯದಲ್ಲಿ ಹಣವು ನಿಜವಾದ ಸ್ನೇಹಿತನ ಪಾತ್ರವನ್ನು ವಹಿಸುತ್ತದೆ. ಹಣವನ್ನು ಉಳಿಸುವುದು ಬಿಕ್ಕಟ್ಟಿನಿಂದ ಓರ್ವ ವ್ಯಕ್ತಿಯನ್ನು ರಕ್ಷಿಸುತ್ತದೆ. ಹಣವನ್ನು ಉಳಿಸಬೇಕು ಮತ್ತು ಹಣವನ್ನು ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಖರ್ಚು ಮಾಡಬೇಕು ಎಂದು ಅವನು ಹೇಳುತ್ತಾನೆ. ಹಣವಿದ್ದಾಗ ಯಾವಾಗಲೂ ಅದನ್ನು ತೋರಿಸಿಕೊಳ್ಳಲು ಹೋಗಬಾರದು ಎಂದು ಚಾಣಕ್ಯ ಹೇಳಿದ್ದಾನೆ..

5)ನಿರ್ವಹಣೆ ಸಾಮರ್ಥ್ಯ: ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಗೆ ಶಿಕ್ಷಣ, ಧೈರ್ಯ ಇದ್ದಾಗ, ಅವನು ನಿರ್ವಹಣೆಯಲ್ಲೂ ಪರಿಣಿತನಾಗಲು ಪ್ರಯತ್ನಿಸಬೇಕು. ಶ್ರೀಮಂತರಾಗಲು, ಆಹಾರದಲ್ಲಿನ ಉಪ್ಪಿನಂತೆಯೇ ಕೌಶಲ್ಯ ಮತ್ತು ಸರಿಯಾದ ನಿರ್ವಹಣೆಯನ್ನು ಹೊಂದಿರುವುದು ಬಹಳ ಮುಖ್ಯ. ದಕ್ಷ ನಿರ್ವಹಣೆ ಎಂದರೆ ಯೋಜನೆಯನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸುವುದು.

6)ಸಮಯದ ಬಳಕೆ: ಚಾಣಕ್ಯರ ಪ್ರಕಾರ, ಸಮಯವನ್ನು ಬಳಸಿಕೊಂಡು ಶ್ರೀಮಂತನಾಗಬಹುದು, ಆದ್ರೆ ಶ್ರೀಮಂತಿಕೆಯನ್ನು ಬಳಸಿಕೊಂಡು ಸಮಯ ಕೊಳ್ಳಲು ಸಾಧ್ಯವಿಲ್ಲ. ಇದು ಹಲವರ ಜೀವನದಲ್ಲಿ ಈಗಾಗಲೇ ಆಗಿರುವ ಅನುಭವ . ಚಾಣಕ್ಯರ ಪ್ರಕಾರ, ಸಮಯವನ್ನು ಬಳಸಿಕೊಂಡು ಶ್ರೀಮಂತನಾಗಬಹುದು, ಆದ್ರೆ ಶ್ರೀಮಂತಿಕೆಯನ್ನು ಬಳಸಿಕೊಂಡು ಸಮಯ ಕೊಳ್ಳಲು ಸಾಧ್ಯವಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *