ಮುಂಬೈನಲ್ಲಿ ಒಟ್ಟಾಗಿ ಡಿನ್ನರ್​ ಮಾಡಿದ ವಿಜಯ್​ ದೇವರಕೊಂಡ-ರಶ್ಮಿಕಾ; ಮತ್ತೆ ಹುಟ್ಟಿತು ಅನುಮಾನ

ವಿಜಯ್​ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಬೆಸ್ಟ್ ಫ್ರೆಂಡ್ಸ್​​. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಇವರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡ ಉದಾಹರಣೆ ಕೂಡ ಇದೆ. ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಮುಂಬೈ ಹೋಟೆಲ್​ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಒಂದು ಕಡೆ ಸೇರಿದ್ದಾರೆ. ಇಬ್ಬರೂ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

‘ಗೀತ ಗೋವಿಂದಂ’ ಸಿನಿಮಾ ರಿಲೀಸ್​ಗೂ ಮುನ್ನ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತು ಹರಿದಾಡಿತ್ತು. ಆದರೆ, ನಾವು ಬೆಸ್ಟ್​ ಫ್ರೆಂಡ್ಸ್​ ಎನ್ನುವುದನ್ನು ಇಬ್ಬರೂ ಸ್ಪಷ್ಟಪಡಿಸಿದ್ದರು. ಈಗ ಇವರಿಬ್ಬರ ನಡುವೆ ಮತ್ತೆ ಹೊಸ ಗಾಸಿಪ್​ ಹರಿದಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಕೂಡ ಆಗುತ್ತಿದೆ. ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ಹೋಟೆಲ್​ನಿಂದ ಹೊರ ಬಂದು ಒಂದೇ ಕಾರಿನಲ್ಲಿ ತೆರಳಿದ್ದಾರೆ. ಇದು ಕೂಡ ಸಾಕಷ್ಟು ಚರ್ಚೆ ಆಗುತ್ತಿದೆ.

 

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಎರಡೇ ದಿನಕ್ಕೆ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 116 ಕೋಟಿ ಗಳಿಕೆ ಮಾಡಿತ್ತು. ಇದಲ್ಲದೆ, ‘ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’, ‘ಸಿದ್ದಾರ್ಥ್​ ಮಲ್ಹೋತ್ರಾ ಜತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದ ಕೆಲಸಗಳಿಗಾಗಿ ರಶ್ಮಿಕಾ ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *