RRI Recruitment: ಮಾಸಿಕ ವೇತನ ₹ 23,500, ಬೆಂಗಳೂರಿನ ರಾಮನ್​ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ

RRI Recruitment 2021: ರಾಮನ್​ ಸಂಶೋಧನಾ ಸಂಸ್ಥೆ(Raman Research Institute)- ಬೆಂಗಳೂರಿ(Bengaluru)ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಂದು ಟೆಕ್ನಿಕಲ್ ಅಸಿಸ್ಟೆಂಟ್(Technical Assistant) ಹುದ್ದೆ ಖಾಲಿ ಇದ್ದು, ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​​ಸೈಟ್ www.rri.res.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ರಾಮನ್​ ಸಂಶೋಧನಾ ಸಂಸ್ಥೆ- ಬೆಂಗಳೂರು
ಹುದ್ದೆಯ ಹೆಸರು ಟೆಕ್ನಿಕಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು 01
ವಿದ್ಯಾರ್ಹತೆ ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ
ಉದ್ಯೋಗದ ಸ್ಥಳ ಬೆಂಗಳೂರು
ವೇತನ ಮಾಸಿಕ ₹ 23,500
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2022

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2022

ವಿದ್ಯಾರ್ಹತೆ:
ರಾಮನ್​ ಸಂಶೋಧನಾ ಸಂಸ್ಥೆ ನೇಮಕಾತಿಯ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ ಪಾಸಾಗಿರಬೇಕು.

ಉದ್ಯೋಗದ ಸ್ಥಳ:
ರಾಮನ್​ ಸಂಶೋಧನಾ ಸಂಸ್ಥೆ ನೇಮಕಾತಿಯ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ರಾಮನ್​ ಸಂಶೋಧನಾ ಸಂಸ್ಥೆ ನೇಮಕಾತಿಯ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 23,500 ವೇತನ ನೀಡಲಾಗುತ್ತದೆ.

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *