IPL 2022 Mega Auctionನಲ್ಲಿ ಈ ಆಟಗಾರರಿಗೆ ಖರೀದಿದಾರರೇ ಇಲ್ಲ, ಮುಗಿದೇ ಹೋಯಿತು ಇವರ ವೃತ್ತಿ ಜೀವನ

ನವದೆಹಲಿ : ಐಪಿಎಲ್ ಮೆಗಾ ಹರಾಜಿನ (IPL Mega Auction) ದಿನಾಂಕಗಳನ್ನು ಪ್ರಕಟಿಸಲಾಗಿದೆ. ಮುಂದಿನ ವರ್ಷ ಫೆಬ್ರವರಿ 7 ಮತ್ತು 8 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು (IPl Auction Date) ನಡೆಯಲಿದೆ. ಯಾವ ಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲವೋ ಆ ಆಟಗರರ ದೃಷ್ಟಿ ಇದೀಗ ಮೆಗಾ ಹರಾಜಿನತ್ತ ನೆಟ್ಟಿದೆ. ಈ ಬಾರಿ ಐಪಿಎಲ್ ಗೆ (IPL teams) ಲಕ್ನೋ ಮತ್ತು ಅಹಮದಾಬಾದ್‌ ಎಂಬ ಎರಡು ಹೊಸ ತಂಡಗಳು ಸೇರ್ಪಡೆಯಾಗುತ್ತಿವೆ. ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ದಿಗ್ಗಜ ಆಟಗಾರರನ್ನೇ ಕೈ ಬಿಟ್ಟಿವೆ. ಈ ಪೈಕಿ ಕೆಲ ಆಟಗಾರರಿಗೆ ಹರಾಜಿನಲ್ಲಿ ಖರೀದಿದಾರರು ಸಿಗುವ ನಿರೀಕ್ಷೆಗಳು ಕೂಡಾ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.

1. ಕೇದಾರ್ ಜಾಧವ್ :


ಕೇದಾರ್ ಜಾಧವ್ (Kedar Jadav) 2010 ರಿಂದ ಐಪಿಎಲ್‌ನ ಭಾಗವಾಗಿದ್ದಾರೆ. ಐಪಿಎಲ್‌ನಲ್ಲಿ ಜಾಧವ್ ಅವರ ಪ್ರದರ್ಶನ ಸಾಧಾರಣವಾಗಿತ್ತು. ಜಾಧವ್ 2018 ರಿಂದ 2020 ರವರೆಗೆ CSK ಯೊಂದಿಗೆ ಗುರುತಿಸಿಕೊಂಡಿದ್ದಾರೆ. ನಂತರ 2021 ರಲ್ಲಿ ಅವರನ್ನು  ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು. ಆದರೆ ಅವರು ನಿರೀಕ್ಷೆಗಳಿಗೆ ತಕ್ಕಂತೆಪ್ರದರ್ಶನ ನೀಡಲಿಲ್ಲ. ಐಪಿಎಲ್ 2021 ರಲ್ಲಿ, ಜಾಧವ್ 6 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದಾರೆ. ಜಾಧವ್ ಅವರ ವಯಸ್ಸು ಕೂಡ ಹೆಚ್ಚುತ್ತಿದೆ. ಹೀಗಿರುವಾಗ ಅವರನ್ನು ಖರೀದಿಸಲು ಖರೀದಿದಾರರು ಮುಂದಾಗುವುದು ಕಡಿಮೆ ಎಂದೇ ಹೇಳಲಾಗುತ್ತಿದೆ.

2. ಸುರೇಶ್ ರೈನಾ :

 


ಮಿಸ್ಟರ್ ಐಪಿಎಲ್ (IPL) ಖ್ಯಾತಿಯ ಸುರೇಶ್ ರೈನಾ (Suresh Raina)ಮೊದಲಿನಿಂದಲೂ ಸಿಎಸ್‌ಕೆ (CSK) ತಂಡದ ಭಾಗವಾಗಿದ್ದಾರೆ. ಐಪಿಎಲ್ 2021 ರಲ್ಲಿ ರೈನಾ ಫಾರ್ಮ್ ನಲ್ಲಿರಲಿಲ್ಲ. ಬ್ಯಾಟಿಂಗ್ ನಲ್ಲಿ ಅವರು ಅಬ್ಬರಿಸಲೇ ಇಲ್ಲ. ಐಪಿಎಲ್ 2021 ರ 12 ಪಂದ್ಯಗಳಲ್ಲಿ ರೈನಾ ಕೇವಲ 160 ರನ್ ಗಳಿಸಿದ್ದಾರೆ. ಕಳೆದ ಸೀಸನ್ ಫೈನಲ್‌ನಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿಯೂ ಸ್ಥಾನ ಪಡೆದಿರಲಿಲ್ಲ. ಇದೀಗ ಫೀಲ್ಡಿಂಗ್ ಅಂಥಹ ಮೋಡಿ ಕಾಣಸಿಗುತ್ತಿಲ್ಲ.

3. ದಿನೇಶ್ ಕಾರ್ತಿಕ್ :

 

ಒಂದು ಕಾಲದಲ್ಲಿ ಟೀಂ ಇಂಡಿಯಾದ (Team India) ದಿಗ್ಗಜ ಬ್ಯಾಟ್ಸ್ ಮೆನ್ ದಿನೇಶ್ ಕಾರ್ತಿಕ್ ಈಗ ಕಳಪೆ ಫಾರ್ಮ್‌ನಲ್ಲಿದ್ದಾರೆ. IPL 2021 ರಲ್ಲಿ KKR ಪರ ಆಡಿದ ದಿನೇಶ್ 17 ಪಂದ್ಯಗಳಲ್ಲಿ 223 ರನ್ ಗಳಿಸಿದ್ದಾರೆ. ಸೀಸನ್ ಪೂರ್ತಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕಾರ್ತಿಕ್ ಅವರು (Dinesh Kartik), ಟೀಮ್ ಇಂಡಿಯಾ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಆದರೆ ಈಗ ಅವರಿಗೆ ಈಗ 36 ವರ್ಷ. ಅನೇಕ ಕ್ರಿಕೆಟಿಗರು ಈ ವಯಸ್ಸಿನಲ್ಲಿ ನಿವೃತ್ತಿ ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಯಾವುದೇ ತಂಡವು ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಸುವುದು ಅನುಮಾನ ಎನ್ನಲಾಗಿದೆ.

 

4. ಚೇತೇಶ್ವರ ಪೂಜಾರ :

ಟೀಂ ಇಂಡಿಯಾದ ಟೆಸ್ಟ್ ತಂಡದ ಆಧಾರ ಸ್ತಂಭವಾಗಿರುವ ಚೇತೇಶ್ವರ್ ಪೂಜಾರ (Chetheshwar Poojar), ಬಹಳ ದಿನಗಳಿಂದ ಐಪಿಎಲ್ ಆಡುತ್ತಿದ್ದಾರೆ. ಅವರು 2014 ರಲ್ಲಿ ಪಂಜಾಬ್ ಕಿಂಗ್ಸ್ ಗಾಗಿ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು. 2021 ರಲ್ಲಿ, CSK ತಂಡವು ಅವರನ್ನು 20 ಲಕ್ಷಕ್ಕೆ ಖರೀದಿಸಿತು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿ, ಪೂಜಾರ 30 ಪಂದ್ಯಗಳಲ್ಲಿ 309 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧ ಶತಕ ಮಾತ್ರ ಸೇರಿದೆ. ಪೂಜಾರ ಯಾವಾಗಲೂ ಟೆಸ್ಟ್ ಕ್ರಿಕೆಟಿಗ ಎಂದು ಪರಿಗಣಿಸಲ್ಪಟ್ಟವರು. ಅವರಿಗೆ ಟಿ 20 ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಇದನ್ನೆಲ್ಲಾ ಗಮನಿಸಿದರೆ ಅವರ ಐಪಿಎಲ್ ವೃತ್ತಿಜೀವನ ಕೊನೆಗೊಳ್ಳುವ ಹಂತದಲ್ಲಿದೆ ಎಂದೇ ಹೇಳಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *