Omicron: ಇಂದು ಬೆಂಗಳೂರಿನಲ್ಲಿ ಮತ್ತೆ 5 ಹೊಸ ಓಮೈಕ್ರಾನ್ ಕೇಸ್ ಪತ್ತೆ, ಅಪಾರ್ಟ್ಮೆಂಟ್ ಸೀಲ್ಡೌನ್
Omicron in Bengaluru: ಸೋಂಕಿತರು ಕೋರಮಂಗಲ(Koramangala) ನಿವಾಸಿಗಳಾಗಿದ್ದು, ಓಮೈಕ್ರಾನ್(Omicron) ದೃಢ ಹಿನ್ನೆಲೆ ಬಿಬಿಎಂಪಿ(BBMP) ಅಪಾರ್ಟ್ಮೆಂಟ್(Apartment)ನ್ನು ಸೀಲ್ ಡೌನ್(Seal down) ಮಾಡಿದೆ. ಸೆಕೆಂಡರಿ ಕಾಂಟಾಕ್ಟ್(Secondary Contact) ನಲ್ಲಿದ್ದ 10 ಮಂದಿಗೆ ನೆಗೆಟಿವ್(Negative) ವರದಿ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಕರ್ನಾಟಕ(Karnataka)ದಲ್ಲಿ ಓಮೈಕ್ರಾನ್(Omicron) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗುತ್ತಿವೆ. ಇಂದು ಬೆಂಗಳೂರಿನಲ್ಲಿ ಮತ್ತೆ ನಾಲ್ಕು ಹೊಸ ಓಮೈಕ್ರಾನ್ ಕೇಸ್ಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಇಂದು ಯುಕೆ(UK)ಯಿಂದ ಆಗಮಿಸಿದ 26 ವರ್ಷದ ಯುವತಿ ಸೇರಿದಂತೆ ನಾಲ್ವರಿಗೆ ಓಮೈಕ್ರಾನ್ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸೋಂಕಿತ ಯುವತಿ ಡಿಸೆಂಬರ್ 12ರಂದು ನೆಗೆಟಿವ್ ವರದಿಯೊಂದಿಗೆ ಇಂಗ್ಲೆಂಡ್ನಿಂದ ಬೆಂಗಳೂರಿಗೆ ಆಗಮಿಸಿದ್ದಳು. ಈಗ ಆ 26 ವರ್ಷದ ಸೋಂಕಿತೆ ಸೇರಿ ಆಕೆಯ ಕುಟುಂಬದ ಇತರೆ ಮೂವರಿಗೂ ಓಮೈಕ್ರಾನ್ ದೃಢವಾಗಿದೆ.

ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆ, ಡಿಸೆಂಬರ್ 14ರಂದು ಖಾಸಗಿ ಆಸ್ಪತ್ರೆಯಲ್ಲಿ ಯುವತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯಲ್ಲಿ ಓಮೈಕ್ರಾನ್ ಪತ್ತೆಯಾಗಿದೆ.

ಸದ್ಯ 26 ವರ್ಷದ ಯುವತಿ ಸೇರಿದಂತೆ ಆಕೆಯ ಕುಟುಂಬ ಸದಸ್ಯರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 26 ವರ್ಷದ ಯುವತಿಯ ತಂದೆ, ತಾಯಿ ಹಾಗೂ 20 ವರ್ಷದ ತಂಗಿಗೂ ಸೋಂಕು ತಗುಲಿದೆ ಎಂಬ ಮಾಹಿತಿ ಸಿಕ್ಕಿದೆ.

ಸೋಂಕಿತರು ಕೋರಮಂಗಲ ನಿವಾಸಿಗಳಾಗಿದ್ದು, ಓಮೈಕ್ರಾನ್ ದೃಢ ಹಿನ್ನೆಲೆ ಬಿಬಿಎಂಪಿ ಅಪಾರ್ಟ್ಮೆಂಟ್ನ್ನು ಸೀಲ್ ಡೌನ್ ಮಾಡಿದೆ. ಸೆಕೆಂಡರಿ ಕಾಂಟಾಕ್ಟ್ ನಲ್ಲಿದ್ದ 10 ಮಂದಿಗೆ ನೆಗೆಟಿವ್ ವರದಿ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಒಂದೆಡೆ ರಾಜ್ಯದಲ್ಲಿ ಓಮೈಕ್ರಾನ್ ಆತಂಕ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಕೊರೋನಾ ಹೋರಾಟದಲ್ಲಿ ಕರ್ನಾಟಕ ಮತ್ತೊಂದು ಸಾಧನೆ ಮಾಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 100% ಸೆಕೆಂಡ್ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದೆ.

ಎರಡನೇ ಡೋಸ್ 100% ಹಂಚಿದ ಕರ್ನಾಟಕದ ಚೊಚ್ಚಲ ಜಿಲ್ಲೆ ಬೆಂಗಳೂರು ನಗರ ಎಂಬ ಖ್ಯಾತಿ ಪಡೆದಿದೆ. ಈಗಾಗಲೇ ಬೆಂಗಳೂರು ನಗರ 128% ಮೊದಲ ಡೋಸ್ ಕೂಡ ಪೂರೈಸಿದೆ. ಇದೀಗ ಜಿಲ್ಲಾಡಳಿತ ನಿನ್ನೆಗೆ 100% ಎರಡನೇ ಡೋಸ್ ಲಸಿಕೆ ಪೂರೈಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಲಸಿಕೆಗೆ ಅರ್ಹರ ಸಂಖ್ಯೆ 10,32,000. ಮೊದಲ ಡೋಸ್ ಸಂಖ್ಯೆ : 13,19,130 ಡೋಸ್ – 128%. ಎರಡನೇ ಡೋಸ್ ಸಂಖ್ಯೆ : 10,07,965 ಡೋಸ್ – 100%.