Rachita Ram: ಅಪ್ಪು,ಕಿಚ್ಚನ ಸ್ಟೈಲ್ನಲ್ಲಿ `ಮೀಟ್ ಮಾಡೋಣ’ ಅಂತಿದ್ದಾರೆ ಡಿಂಪಲ್ ಕ್ವೀನ್ ರಚಿತಾ!
‘ಏಕ್ ಲವ್ ಯಾ’( Ek Love Ya ) ಜೋಗಿ ಪ್ರೇಮ್(Prem) ನಿರ್ದೇಶನದ ಸಿನಿಮಾ.. ರಕ್ಷಿತಾ ಪ್ರೇಮ್ ಬಂಡವಾಳ ಹಾಕಿರುವ ಸಿನಿಮಾ. ರಕ್ಷಿತಾ ಪ್ರೇಮ್(Raksitha Prem) ಅವರ ತಮ್ಮ ರಾಣಾ(Raana) ಅಭಿನಯದ ಸಿನಿಮಾ. ಜೊತೆಗೆ ಈ ಸಿನಿಮಾಗೆ ಇಬ್ಬರು ನಾಯಕಿಯರು. ಅದರಲ್ಲಿ ಒಬ್ಬರು ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್(Dimple Queen Rachitha Ram).ಸ್ಯಾಂಡಲ್ವುಡ್ ನಲ್ಲಿ ಅತ್ಯಂತ ಬ್ಯುಸಿಯಾಗಿರೋ ನಟಿಮಣಿ ಅಂದ್ರೇ ರಚಿತಾ ರಾಮ್. ಅಜಯ್ ರಾವ್ ರಿಂದ ಆರಂಭಿಸಿ ಅಪ್ಪು ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ, ಈ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ. ಏಕ್ ಲವ್ ಯಾ ಸಿನಿಮಾದ ಟೀಸರ್ನಲ್ಲಿ ರಚಿತಾ ರಾಮ್ ಅವರ ಪಾತ್ರ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದಾದ ಬಳಿಕ ಏಕ್ ಲವ್ ಯಾ ಸಿನಿಮಾದ ಹಾಡುಗಳ ಮೂಲಕ ಈಗಾಗಲೇ ಎಲ್ಲರಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಎಣ್ಣೆ ಸಾಂಗ್ ಸಖತ್ ಫೇಮಸ್ ಆಗಿದೆ. ಜೊತೆಗೆ ಈ ಸಾಂಗ್ ವೇಳೆ ಪುನೀತ್ ರಾಜ್ಕುಮಾರ್(Puneeth Rajkumar) ಫೋಟೋ ಮುಂದೆ ಅಗೌರವ ತೋರಿದ ಘಟನೆಯೂ ನಡೆದಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮೀಟ್ ಮಾಡೋಣ.. ಇಲ್ಲ ಡೇಟ್ ಮಾಡೋಣ ಎಂದ ರಚಿತಾ!
ಏಕ್ ಲವ್ ಯಾ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ ಅನ್ನುತ್ತಿದ್ದಾರೆ ರಚಿತಾ ರಾಮ್.ಏಕ್ ಲವ್ ಯಾ ಸಿನಿಮಾದ ಐದನೇ ಹಾಡು “ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ” ರಿಲೀಸ್ ಆಗಿದ್ದು, ವಾವ್ ರಚ್ಚೂ ಅಂತಿದ್ದಾರೆ ಅಭಿಮಾನಿಗಳು. ಈ ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಐಶ್ವರ್ಯ ರಂಗರಾಜನ್ ಅವರ ಅದ್ಭೂತ ಧ್ವನಿ ಕೇಳುಗರನ್ನು ಮತ್ತೆ ಹಾಡು ಕೇಳುವಂತೆ ಮಾಡುತ್ತದೆ.
ಅಪ್ಪು, ಕಿಚ್ಚನ ಸ್ಟೈಲ್ನಲ್ಲಿ ಕಾಣಿಸಿಕೊಂಡ ರಚಿತಾ!
ಇನ್ನೂ ಈ ಹಾಡಿನ ಕೆಲ ದೃಶ್ಯಗಳು ಕೂಡ ರಿಲೀಸ್ ಆಗಿದೆ. ಈ ಹಾಡಿನಲ್ಲಿ ತುಂಬಾ ಗೆಟಪ್ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ರಚಿತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಮೋಹನ್ ಕೊರಿಯೋಗ್ರಫಿ ಮಾಡಿದ್ದಾರೆ. ವಿಶೇಷವಾಗಿ ರಚಿತಾ ಸ್ಟೆಪ್ಸ್ ಮಾತ್ರವಲ್ಲದೆ, ಕೆಲ ಹೀರೋಗಳ ಸಿನಿಮಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.ವಿಶೇಷ ಅಂದರೆ, ಅಪ್ಪು ಅವರ ರಾಜ್ ಸಿನಿಮಾದ ಗೆಟಪ್ ಹಾಗೂ ಕಿಚ್ಚ ಅವರ ವಿಲನ್ ಸಿನಿಮಾದ ಲುಕ್ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಅವರ ಗೆಟಪ್ನಲ್ಲಿ ‘ಮೀಟ್ ಮಾಡೋಣ.. ಇಲ್ಲ ಡೇಟ್ ಮಾಡೋಣ‘ ಅಂತ ರಚಿತಾ ಹಾಡಿದ್ದಾರೆ. ಡಿಫ್ರೆಂಟ್ ಗೆಟಪ್ನಲ್ಲಿ ರಚಿತಾ ಅವರನ್ನು ಕಂಡ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ಡಿಂಪಲ್ ಕ್ವೀನ್!
ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್ ಗಟ್ಟಲೆ ವ್ಯೂವ್ ಪಡೆದು ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದೇ ಡಿಸೆಂಬರ್ 31 ಕ್ಕೆ ರಚಿತಾ ರಾಮ್ ನಟನೆಯ ಲವ್ಯೂ ಸಿನಿಮಾ ರಿಲೀಸ್ ಆಗುತ್ತಿದೆ.