Harbhajan Singh: ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ರಾಜಕೀಯಕ್ಕೆ ಬರುತ್ತಾರಾ?

ನವದೆಹಲಿ: ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ(Harbhajan Singh Retirement) ಘೋಷಿಸಿದ್ದಾರೆ. ಭಾರತ ಪರ ಟೆಸ್ಟ್‌ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಬಜ್ಜಿ ಪಂಜಾಬ್‌ನ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್(Harbhajan Singh) ರಾಜಕೀಯಕ್ಕೆ ಸೇರುತ್ತಾರೆಂಬ ಊಹಾಪೋಹಗಳು ತೀವ್ರವಾಗಿವೆ. ಮುಂಬರುವ 2022ರ ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Election) ದೃಷ್ಟಿಯಿಂದ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಮಾಡಲಾಗುತ್ತಿದೆ.

ಭಜ್ಜಿ ರಾಜಕೀಯಕ್ಕೆ ಬರುತ್ತಾರಾ?

ನಿವೃತ್ತಿ ಘೋಷಣೆಯ ನಂತರ ಹರ್ಭಜನ್ ಸಿಂಗ್ ಅವರು ರಾಜಕೀಯ(Politics)ಕ್ಕೆ ಸೇರಲು ನನಗೆ ಇಷ್ಟವಿಲ್ಲವೆಂದು ಹೇಳುವುದಿಲ್ಲ, ಆದರೆ ಇಂತಹ ಹೆಜ್ಜೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಕಷ್ಟು ಯೋಚಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷ ಮತ್ತು ಹರ್ಭಜನ್ ಅವರ ಮಾಜಿ ಭಾರತೀಯ ಸಹೋದ್ಯೋಗಿ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ‘ಸಾಧ್ಯತೆಗಳಿಂದ ತುಂಬಿರುವ ಚಿತ್ರ’ವೆಂದು ಕ್ಯಾಪ್ಶನ್ ನೀಡಲಾಗಿತ್ತು. ಇದು ಅವರ ರಾಜಕೀಯಕ್ಕೆ ಪ್ರವೇಶಿಸುವ ಊಹಾಪೋಹಗಳಿಗೆ ಕಾರಣವಾಗಿದೆ. ರಾಜಕೀಯಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲವೆಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಭವಿಷ್ಯದ ತಮ್ಮ ನಿರ್ಧಾರ ಬಗ್ಗೆ ಮಾತನಾಡಿರುವ ಅವರು, ‘ನಿಜವಾಗಿ ಹೇಳಬೇಕೆಂದರೆ, ಮುಂದೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ಯಾವ ದಿಕ್ಕಿನಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ತಿಳಿಯಲು ಎರಡು ಮೂರು ದಿನಗಳು ಬೇಕಾಗುತ್ತದೆ. ಹೌದು, ನಾನು ಮತ್ತೆ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ’ ಅಂತಾ ಹೇಳಿದ್ದರು.

ಜನರಿಗೆ ಸಹಾಯ ಮಾಡುವ ಕನಸು

ಹರ್ಭಜನ್ ಸಿಂಗ್, ‘ನಾನು ರಾಜಕೀಯಕ್ಕೆ ಸೇರಿದರೆ ಹೇಗೆ ಅಥವಾ ಯಾವ ರೀತಿಯಲ್ಲಿ ನಾನು ಈ ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ? ಏಕೆಂದರೆ ನಾನು ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದರೆ ಜನರಿಗೆ ಸಹಾಯ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ. ನಾನು ಅದನ್ನು ಮಾಡುತ್ತೇನೆ’ ಅಂತಾ ಹೇಳಿಕೊಂಡಿದ್ದರು.

 

ಪಂಜಾಬ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ?

ರಾಜಕೀಯಕ್ಕೆ ಸೇರುವ ಬಗ್ಗೆ ಹರ್ಭಜನ್ ಸಿಂಗ್ ಬಹಿರಂಗವಾಗಿ ಇನ್ನೂ ಹೇಳಿಲ್ಲ. ಆದರೆ ಅವರ ತಜ್ಞರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ. ಏಕೆಂದರೆ ಅವರಿಗಿರುವ ಕೆಲವು ಕ್ರಿಕೆಟ್ ಮತ್ತು ಮಾಧ್ಯಮ ಬದ್ಧತೆಗಳು ಅವರನ್ನು ಕಾರ್ಯನಿರತವಾಗಿರಿಸುತ್ತದೆ.

ಭಜ್ಜಿ ಕ್ರಿಕೆಟ್‌ ಸಂಬಂಧಿತ ಕೆಲಸಗಳಲ್ಲಿ ಮುಂದುವರಿಯಲಿದ್ದಾರೆ

ಹರ್ಭಜನ್ ಸಿಂಗ್, ‘ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಆಟದೊಂದಿಗೆ ಸಂಬಂಧ ಹೊಂದಿದ್ದೇನೆ. ನಾನು ಐಪಿಎಲ್(IPL 2022) ತಂಡಗಳಿಗೆ ತರಬೇತಿ ನೀಡಬಹುದು, ಯಾವುದೋ ಒಂದು ತಂಡದ ಮಾರ್ಗದರ್ಶಕನಾಗಬಹುದು ಅಥವಾ ಕೆಲವು ಅನುಭವಿ ಕ್ರಿಕೆಟ್ ಆಡಬಹುದು’ ಅಂತಾ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *