ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ
ITR Filing: ಆದಾಯ ತೆರಿಗೆ ರಿಟರ್ನ್ ಅಂದರೆ ITR ದಾಖಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ITR ದಾಖಲಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಕೂಡ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಲ್ಲುತ್ತಿದೆ. ಇಂತಹುದೇ ಒಂದು ವಿಧಾನವನ್ನು ಘಾರತ ಸರ್ಕಾರದ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಳವಡಿಸಿಕೊಂಡಿದೆ.
ಈ ಸಚಿವಾಲಯದ ಅಡಿ ಬರುವ ಸಾಮಾನ್ಯ ಸೇವಾ ಕೇಂದ್ರಗಳು (Common Services Centres) ಕೊಡುಗೆಯೊಂದನ್ನು ಆರಂಭಿಸಿದೆ. ಈ ಕೊಡುಗೆಯ ಅಡಿಯಲ್ಲಿ, ಡಿಸೆಂಬರ್ 31, 2021 ರೊಳಗೆ 1000 ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಥವಾ VLEಗಳಿಗೆ (Village Level Entrepreneur) ITR ದಾಖಲಿಸಲು ಸೂಚಿಸಲಾಗಿದೆ.