ದೇಶದಲ್ಲಿ ಮುಂದುವರಿದ ಒಮಿಕ್ರಾನ್ ವೈರಾಣುವಿನ ಓಟ : 415ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಹೈಲೈಟ್ಸ್‌:

  • ದೇಶದಲ್ಲಿ 415ಕ್ಕೆ ತಲುಪಿದ ಸೋಂಕಿತರ ಸಂಖ್ಯೆ
  • ದೇಶದಲ್ಲಿ ಮುಂದುವರಿದ ಒಮಿಕ್ರಾನ್ ವೈರಾಣುವಿನ ಓಟ
  • ಮಹಾರಾಷ್ಟ್ರದಲ್ಲಿ ಈವರೆಗೆ 108 ಕೇಸ್ ಪತ್ತೆ

ಹೊಸದಿಲ್ಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಸೋಂಕು ಹೆಚ್ಚುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಮನವಿ ಮಾಡುತ್ತಿದೆ. ಈ ಮಧ್ಯೆ, ಕೇಂದ್ರ ಆರೋಗ್ಯ ಇಲಾಖೆ ಕಳೆದ ೨೪ ಗಂಟೆಯಲ್ಲಿ ಒಮಿಕ್ರಾನ್ ದೃಢಪಟ್ಟಿರುವ ಮಾಹಿತಿ ನೀಡಿದೆ. ಇಲಾಖೆ ಮಾಹಿತಿ ಪ್ರಕಾರ, ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ 57 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ಈ ಮೂಲಕ ದೇಶದಲ್ಲಿ ಒಟ್ಟು 415 ಒಮಿಕ್ರಾನ್ ಸೋಂಕು ದೃಢಪಟ್ಟಂತೆ ಆಗಿದೆ. ಈ ನಡುವೆ ಒಮಿಕ್ರಾನ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು 115 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ 108 ಕೇಸ್ ಪತ್ತೆಯಾಗುವ ಮೂಲಕ, ಮೂರಂಕಿ ದಾಟಿದೆ. ಇನ್ನು, ದೆಹಲಿ 79, ಗುಜರಾತ್ 43, ತೆಲಂಗಾಣ 38, ಕೇರಳ 37, ತಮಿಳುನಾಡು34, ಕರ್ನಾಟಕದಲ್ಲಿ 31 ಕೇಸ್ ದೃಡಪಟ್ಟಿದೆ.

ಜನರಿಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ
‘ಕೊರೊನಾ ರೂಪಾಂತರಿ ‘ಡೆಲ್ಟಾ’ಧಿಧಿಗಿಂತಲೂ ಅತ್ಯಂತ ವೇಗವಾಗಿ ಪ್ರಸರಿಸುತ್ತಿರುವ ‘ಓಮಿಕ್ರಾನ್‌’ ರೂಪಾಂತರಿ ವೈರಾಣು ಜಗತ್ತಿನಾದ್ಯಂತ ಕೊರೊನಾ ನಾಲ್ಕನೇ ಅಲೆಯ ಸೃಷ್ಟಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿನಾವು ಕೊಂಚ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ,’’ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ದೇಶಾದ್ಯಂತ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಸಂಭ್ರಮ ಬಿರುಸು ಪಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ದೇಶದ ಜನತೆಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದೆ.

ಜಗತ್ತು ನಾಲ್ಕನೇ ಅಲೆಯನ್ನು ಎದುರಿಸುತ್ತಿದ್ದರೂ, ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯಿಂದ ಭಾರತದಲ್ಲಿಮೂರನೇ ಅಲೆಯೂ ಆರಂಭವಾಗಿಲ್ಲ. ಈ ಹಂತದಲ್ಲಿಸ್ವಲ್ಪ ಮೈಮರೆತರೂ ಓಮಿಕ್ರಾನ್‌ ಅತ್ಯಂತ ವೇಗವಾಗಿ ಪ್ರಸರಣ ಹೊಂದುವ ಅಪಾಯ ಇದೆ,’’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *