Aditi Prabhudeva ಮನ ಗೆದ್ದ ರೈತನ ಮಗ.. ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ ಸ್ಯಾಂಡಲ್ವುಡ್ ನಟಿ!
ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ವುಡ್(Sandalwood) ಸಿನಿಮಾಗಳಲ್ಲಿ ನಟಿಸುವ ಪರಿಸ್ಥಿತಿ ಆಗ ಇತ್ತು. ಈಗ ನಮ್ಮ ಕನ್ನಡ ನಟಿಯರದ್ದೇ ಹವಾ.. ಅದರಲ್ಲೂ ಮೊನ್ನೆ ‘ಪುಷ್ಪ’(Pushpa) ಎದುರು ಧೈರ್ಯವಾಗಿ ತನ್ನ ಸಿನಿಮಾ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಅದಿತಿ ಪ್ರಭುದೇವ(Aditi Prabhudeva )ಅವರ ಬಗ್ಗೆ ಹೇಳಲೇ ಬೇಕು.. ಕನ್ನಡ ಅಂದರೆ ಅವರಿಗೆ ಪಂಚ ಪ್ರಾಣ. ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಅದಿತಿ ಪ್ರಭುದೇವ. ಬೇರೆ ಭಾಷೆಯಿಂದ ಆಫರ್ ಬಂದರೂ ಎಲ್ಲವನ್ನೂ ತಿರಸ್ಕರಿಸ ಕೇವಲ ಕನ್ನಡ(Kannada) ಸಿನಿಮಾದಲ್ಲಿ ಮಾತ್ರ ನಟಿಸುತ್ತೇನೆ ಎಂದು ಹೇಳಿದ ಏಕೈಕ ನಟಿ ಅಂದರೆ ಅದು ನಮ್ಮ ಆದತಿ ಪ್ರಭುದೇವ ಇರಬೇಕು. ಇದೀಗ ಈ ನಟಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಗುಡ್ನ್ಯೂಸ್(Good News) ಕೊಟ್ಟಿದ್ದಾರೆ. ಶಾನೆ ಟಾಪಾಗವಳೆ ಎಂದು ಕನ್ನಡಿಗರನ ಮನ ಗೆದ್ದಿದ್ದ ದಾವಣಗೆರೆಯ ಸುಂದರಿ ಅದಿತಿ ಪ್ರಭುದೇವ ಎಂಗೇಜ್(Engage) ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೆ ಅದೇ ಸುದ್ದಿ… ಕನ್ನಡದ ನಟಿ ಹಸೆಮಣೆ ಏರುವುದು ಫಿಕ್ಸ್ ಆಯ್ತಾ? ಹುಡುಗ ಯಾರು? ಯಾವಾಗ ಮದುವೆ? ಅಭಿಮಾನಿಗಳಿಂದ ನೂರಾರು ಪ್ರಶ್ನೆ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಈ ವಿಚಾರ ಇದೀಗ ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಕಾಫಿ ತೋಟದ ಮಾಲೀಕನ ಜೊತೆ ಎಂಗೇಜ್ಮೆಂಟ್!
ಹೌದು, ಅದಿತಿ ಫ್ರಭುದೇವ ಅವರು ಎಂಗೇಜ್ಮೆಂಟ್ ಆಗಿದ್ದಾರೆ. ಅದು ರೈತನ ಮಗ ಜೊತೆ ನಿಶ್ಚಿಥಾರ್ತ ಮಾಡಿಕೊಂಡಿದ್ದಾರೆ. ಕಾಫಿ ತೋಟದ ಮಾಲೀಕರಾದ ಯಶಸ್ ಜೊತೆ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಖುದ್ದು ಅದಿತಿ ಅವರೇ ತಿಳಿಸಿದ್ದಾರೆ. ತನ್ನ ಭಾವಿ ಪತಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿ ಅದಿತಿ ಸದಾ ಕನ್ನಡ ಚಿತ್ರಗಳನ್ನು ಬೆಂಬಲಿಸಿಕೊಂಡು ಬಂದವರು, ಬೆಳಗಾವಿಯಲ್ಲಿ ಎಂಇಎಸ್ ಪುಂಟಾಟಕ್ಕೂ ವಿರೋಧ ವ್ಯಕ್ತಪಡಿಸಿದ್ದರು . ಕನ್ನಡಕ್ಕೆ ಅವಮಾನ ಆಗುತ್ತಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.
ಹೊಸ ವರ್ಷಕ್ಕೆ ಗುಡ್ನ್ಯೂಸ್ ಕೊಟ್ಟ ಅದಿತಿ!
ನಟಿ ಹೆಚ್ಚಿನ ವಿಚಾರ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಸಿನಿಮಾಗಳು ಕೈಯಲ್ಲಿದೆ. ಇದೆಲ್ಲವನ್ನು ಮುಗಿಸಿ ನಿಮಗೆಲ್ಲ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ಅಭಿಮಾನಿಗಳಿಗೆ ಹೊಸ ವರ್ಷಕ್ಕೂ ಮುನ್ನ ಶುಭ ಸುದ್ದಿ ನೀಡಿದ್ದಾರೆ. ಮುಂದಿನ ವರ್ಷ ಅಂದರೆ 2022ರ ಮಧ್ಯತಂರ ವೇಳೆ ಅದಿತಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೈಲೆಂಟ್ ಆಗಿ ಉದ್ಯಮಿಯ ಜೊತೆಗೆ ಸ್ಯಾಂಡಲ್ವುಡ್ ನಟಿ ಎಂಗೇಜ್ ಆಗಿದ್ದಾರೆ. ಅದಿತಿ ಶೇರ್ ಮಾಡಿಕೊಂಡಿರುವ ಪೋಸ್ಟ್ಗೆ‘ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಉಂಗುರವನ್ನು ಹೈಲೈಟ್ ಆಗಿ ತೋರಿಸಿರುವ ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.
ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ?
ಮೂಲಗಳ ಪ್ರಕಾರ ಅದಿತಿ ಅವರು ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನವಿತ್ತು. ದಾವಣಗೆರೆ ಮೂಲದ ಉದ್ಯಮಿಯ ಜೊತೆಗೆ ನಟಿ ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಿಟ್ಟರೆ, ಈ ಬಗ್ಗೆ ಅದಿತಿ ಪ್ರಭುದೇವ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಹಲವುರು ಇಬರಿಬ್ಬರು ತುಂಬಾ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.