Dandeli: ಹೊಸ ವರ್ಷಾಚರಣೆಗೆ ದಾಂಡೇಲಿಯತ್ತ ಹೊರಟ ಪ್ರವಾಸಿಗರು

ವರ್ಷಾಂತ್ಯಕ್ಕೆ ದಾಂಡೇಲಿ(Dandeli)ಯತ್ತ ಪ್ರವಾಸಿಗರು (Tourist) ದೌಡಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ (Night Curfew) ಜಾರಿಯಾಗುತ್ತಿದೆ. ಹೀಗಾಗಿ ಹೊಸ ವರ್ಷ ಆಚರಣೆಗೆ (New Year Celebration) ಬೆಂಗಳೂರಿನ ಜನರು ಗೋವಾ(Goa), ಕಾರವಾರ(Karwar), ದಾಂಡೇಲಿ(Dnadeli)ಯತ್ತ ಹೊರಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವರ್ಷಾಂತ್ಯಕ್ಕೂ ವಾರ ಮೊದಲೇ ದಾಂಡೇಲಿ ಹಾಗೂ ಜೋಯಿಡಾ ಪ್ರವಾಸಿಗರಿಂದ ತುಂಬಿಕೊಂಡಿದ್ದು, ವಸತಿಗೆ ಕೊಠಡಿಗಳು ಲಭ್ಯವಾಗದೇ ಪ್ರವಾಸಿಗರು ಟೆಂಟ್ ಹಾಗೂ ಡಾರ್ಮೆಟರಿಗಳನ್ನು ಅವಲಂಬಿಸಿ ಉಳಿದುಕೊಳ್ಳುವಂತಾಗಿದೆ. ದಾಂಡೇಲಿ ಈಗ ಪ್ರವಾಸಿಗರ ಸ್ವರ್ಗವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಜೋಯಿಡಾದಲ್ಲಿ ಸುಮಾರು 200ಕ್ಕೂ ಹೆಚ್ಚು ರೆಸಾರ್ಟ್ ಹಾಗೂ ಹೋಮ್ ಸ್ಟೇಗಳಿವೆ.

ಇಲ್ಲಿಯ ರೆಸಾರ್ಟ್, ಹೋಮ್ ಸ್ಟೇಗಳ ಜೊತೆಗೆ ಅರಣ್ಯ, ಪರಿಸರ ಸೌಂದರ್ಯ, ಪ್ರಾಣಿಪಕ್ಷಿಗಳ, ಪ್ರವಾಸಿ ತಾಣಗಳು, ಜಂಗಲ್ ಸಫಾರಿ ಹಾಗೂ ಜಲ ಸಾಹಸ ಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಾರಾಂತ್ಯದಲ್ಲಂತೂ ದಾಂಡೇಲಿ-ಜೋಯಿಡಾದ ರೆಸಾರ್ಟ್ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ದಂಡೇ ಇರುತ್ತದೆ.

ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖ

ಪ್ರತಿವರ್ಷದ ಕೊನೆಯ ದಿನದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರು ದಾಂಡೇಲಿಯನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದಿಷ್ಟು ವಿದೇಶಿಗರ ಆಗಮನವಿರುತ್ತಿತ್ತು. ಆದರೆ ಈ ವರ್ಷ ಕೋವಿಡ್ ಕಾರಣಕ್ಕೆ ವಿದೇಶಿಗರ ಸಂಖ್ಯೆ ಕಡಿಮೆಯಾಗಿದೆ. ಆದರೆ ದೇಶಿಯ  ಪ್ರವಾಸಿಗರ ಸಂಖ್ಯೆಯಲ್ಲಿ ಕೊರತೆ ಕಂಡು ಬಂದಿಲ್ಲ.

ಈ ‌ಹಿನ್ನಲೆಯಲ್ಲಿ ದಾಂಡೇಲಿ ದೇಶಿಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಎಲ್ಲಡೆ ಪ್ರವಾಸಿಗರ ಗರ್ದಿ ಜೋರಾಗಿದೆ. ರೂಂ‌, ಕಾಟೇಜ್ ಸಿಗದೆ ಇದ್ರೂ ಪರವಾಗಿಲ್ಲ ಕನಿಷ್ಠ ಪಕ್ಷ ಟೆಂಟ್ ಕೊಡಿ ಉಳಿದು ಹೋಗುತ್ತೇವೆ ಅಂತಿದ್ದಾರಂತೆ ಪ್ರವಾಸಿಗರು. ಜಲಸಾಹಸ ಕ್ರೀಡೆಯನ್ನ ಮೆಚ್ಚಿಕೊಂಡ ಪ್ರವಾಸಿಗರು ಗಣೇಶ ಗುಡಿಯತ್ತ ಕಾಳಿ ನದಿ‌ ದಡದಲ್ಲಿ ಬೀಡು ಬಿಟ್ಟಿದ್ದಾರೆ.

ಜಲ ಸಾಹಸ ಕ್ರೀಡೆಗಳೂ ಹೌಸ್‌ಫುಲ್

ದಾಂಡೇಲಿಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಾಗಿ ಆಕರ್ಷಿಸುವುದು ಗಣೇಶ ಗುಡಿ ಕಾಳಿ ನದಿಯಲ್ಲಿ ನಡೆಯುವ ರ‍್ಯಾಫ್ಟಿಂಗ್, ಕಯಾಕಿಂಗ್, ಬೋಟಿಂಗ್ ಸೇರಿದಂತೆ ಹಲವು ರೀತಿಯ ಜಲ ಸಾಹಸ ಕ್ರೀಡೆಗಳು. ಗಣೇಶ ಗುಡಿಯ ಜಲಸಾಹಸ ಚಟುವಟಿಕೆ ಕೇಂದ್ರಗಳೂ ಸಹ ಭರ್ತಿಯಾಗಿವೆ.

ರೆಸಾರ್ಟ್, ಹೋಂ ಸ್ಟೇನವರು ಜಲಸಾಹಸ ಚಟುವಟಿಕೆಗಳನ್ನು ಪ್ಯಾಕೇಜ್ ರೂಪದಲ್ಲಿ ನೀಡುವುದರಿಂದ ಜಲಸಾಹಸ ಕ್ರೀಡೆ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ದಾಂಡೇಲಿ ನಗರದಲ್ಲಿ ಪ್ರವಾಸಿಗರು ತುಂಬಿಕೊಂಡು ಜನ ಜಾತ್ರೆಯೇ ಆದಂತಾಗಿದೆ.

ಪ್ರತಿ ವರ್ಷದ ಕೊನೆಯ ದಿನದಂತೆಯೇ ಈ ವರ್ಷವೂ ಕೂಡ ದಾಂಡೇಲಿಯಲ್ಲಿ ವಸತಿ ವ್ಯವಸ್ಥೆ ಸಿಗದೇ ಸಾಕಷ್ಟು ಜನರು ಬಸ್ ನಿಲ್ದಾಣ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಉಳಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದೇ ಹೇಳಲಾಗುತ್ತಿದೆ.

ಆಶಾದಾಯಕ ಸಂಗತಿ

ಕೋವಿಡ್ ಕಾರಣದಿಂದ ಈ ಭಾಗದ ಪ್ರವಾಸೋದ್ಯಮ ಒಂದಿಷ್ಟು ನಷ್ಟಕ್ಕೊಳಗಾಗಿತ್ತು. ಅದನ್ನೇ ನಂಬಿಕೊಂಡಿದ್ದವರು ಸಂಕಷ್ಟಕ್ಕೊಳಗಾಗಿದ್ದರು. ಆದರೆ ಈಗ ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿರುವುದು ಹಾಗು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರು ಈ ಭಾಗಕ್ಕೆ ಆಗಮಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ನೈಟ್ ಕರ್ಪ್ಯೂ ಸಮಸ್ಯೆ

ಸರಕಾರ ಹೊಸ ವರ್ಷಾಚರಣೆಗೆ ನೈಟ್ ಕರ್ಪ್ಯೂ ಹೇರಿರುವುದು ಕೊಂಚ ಬೇಸರ ತಂದಿದೆ ಈಗಾಗಲೇ ನಿಧಾನಗತಿಯಲ್ಲಿ ಚುರುಕುಗೊಂಡ ಪ್ರವಾಸೋದ್ಯಮಕ್ಕೆ ಮತ್ತೆ ಬ್ರೇಕ್ ಬೀಳುವ ಸಾದ್ಯತೆ ಇದೆ.

ಹೊಸ ವರ್ಷ ಆಚರಣೆ (New Year Celebration) ಮತ್ತು ಓಮೈಕ್ರಾನ್ (Omicron Viraint) ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ (Night Curfew) ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *