ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನ ಪ್ರಕರಣ: ಅಸಲಿ ಆರೋಪಿಗಳ ಗುರುತು ಪತ್ತೆ
ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ (Sangolli Rayanna Statue) ಭಗ್ನ ಪ್ರಕರಣವನ್ನ ಬೆಳಗಾವಿ ಪೊಲೀಸರು (Belagavi Police) ಭೇದಿಸಿದ್ದಾರೆ. ರಾಜ್ಯದಲ್ಲಿ ಬೆಂಕಿ ಹಚ್ಚುವ ಕೃತ್ಯ ನಡೆಸಿದ್ದ ನಾಲ್ವರು ಅಸಲಿ ಆರೋಪಿಗಳ ಗುರುತು ಪತ್ತೆಯಾಗಿದೆ. ನಾಲ್ವರ ಪೈಕಿ ಇಬ್ಬರನ್ನ ಬಂಧಿಸಿದ್ದು, ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದ (Belagavi Winter Session) ಮೊದಲ ದಿನವೇ ಎಂಇಎಸ್ (MES) ಪುಂಡರು ಪುಂಡಾಟ ನಡೆಸಿ ಗಲಾಟೆ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದ ನಾಡದ್ರೋಹಿಗಳು ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿನ ರಾಯಣ್ಣ ಮೂರ್ತಿಯನ್ನೆ ಭಗ್ನಗೊಳಿಸಿದ್ದರು. ನಾಲ್ವರು ಆರೋಪಿಗಳು ತಡ ರಾತ್ರಿ ರಾಯಣ್ಣ ಮೂರ್ತಿಯ ಮೂಖವನ್ನ ವಿರೂಪಗೊಳಿಸಿದ್ದರು. ಇದರೊಂದಿಗೆ ರಾಯಣ್ಣ ಕತ್ತಿ ಹಿಡಿದಿರುವ ಮತ್ತು ಗುರಾಣಿ ಹಿಡಿರಿದುವ ಕೈ ಮುರಿದು ಅಟ್ಟಹಾಸ ಪ್ರದರ್ಶಿಸಿದ್ದರು.
ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಪ್ರಕರಣದ ತನಿಖೆಯನ್ನ ಬೆಳಗಾವಿ ಪೊಲೀಸ್ ಕಮೀಷನರ್ ತ್ಯಾಗರಾಜನ್ ಡಿಸಿಪಿ ವಿಕ್ರಮ್ ಆಮಟೆ ನೇತೃತ್ವದಲ್ಲಿ ತಂಡಕ್ಕೆ ಒಪ್ಪಿಸಿದ್ದರು. ಕೃತ್ಯ ಎಸಗಿದ್ದ ನಾಲ್ವರು ಮುಸುಕುದಾರರ ಸುಳಿವು 10 ದಿನಗಳ ಬಳಿಕ ಪೊಲೀಸರ ತಂಡ ಪತ್ತೆ ಮಾಡಿದೆ. ಇದರಲ್ಲಿ ಈಗಾಗಲೇ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಳಿದಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅರೆಸ್ಟ್ ಆದ ಇಬ್ಬರಲ್ಲಿ ಓರ್ವನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಓರ್ವ ಅಪ್ರಾಪ್ತ ಬಾಲಕನ ವಿರುದ್ಧವೂ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗಿದೆ.
ಬೆಳಗಾವಿ ಪೊಲೀಸರು ತಡವಾದ್ರೂ ಆರೋಪಿಗಳ ಗುರುತು ಪತ್ತೆ ಮಾಡಿದ್ದಾರೆ. ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಸುಳಿವು ಈವರೆಗೂ ಪೊಲೀಸರು ಬಹಿರಂಗ ಪಡಿಸಿಲ್ಲ. ಅರೆಸ್ಟ್ ಆದ ಕಿರಾತಕರು ನಾಡದ್ರೋಹಿ ಎಂಇಎಸ ಪುಂಡರು ಅಂತಾ ಹೇಳಲಾಗುತ್ತಿದೆ.
38 ಆರೋಪಿಗಳು ಹಿಂಡಲಗಾ ಜೈಲಿನಲ್ಲಿ
ಈಗಾಗಲೇ ಅಧಿವೇಶನದ ಮೊದಲ ದಿನ ಕಲ್ಲು ತೂರಾಟ ನಡೆಸಿದ 38 ಆರೋಪಿಗಳು ಹಿಂಡಲಗಾ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಈ ಎಂಇಎಸ್ ಪುಂಡರ ವಿರುದ್ಧ ಕಠಿಣ ವಾದ ಸೆಕ್ಷನ್ ಹಾಕಿದ್ದರಿಂದ ಜಾಮೀನು ಸಿಗದೇ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಎಸಿಪಿ ಮಟ್ಟದ ಅಧಿಕಾರಿಗಳ ಪೊಲೀಸರ ತಂಡ ಗಲಾಟೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಇಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ. ಗಲಾಟೆ ಪ್ರಕರಣದಲ್ಲೂ ಇನ್ನಷ್ಟು ಆರೋಪಿಗಳ ಬಂಧಿಸುವ ಕಾರ್ಯ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿರುವ ಪುಂಡರ
ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ. ಈ ಎಂಇಎಸ್ ಪುಂಡರ ವಿರುದ್ಧ ಗುಂಡಾ ಕಾಯ್ದೆಯಂತಹ ಕೇಸ್ ದಾಖಲಿಸುವ ಕಾರ್ಯವನ್ನ ಬೆಳಗಾವಿ ಪೊಲೀಸರು ಮಾಡಬೇಕಿದೆ. ಈ ಮೊದಲೇ ಆರೋಪಿಗಳ ಬಂಧನವಾಗಿದೆ. ಇನ್ನೂ ಅನೇಕ ಪುಂಡರು ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದಾರೆ.
ಈ ವಿಚಾರ ಸಂಬಂಧ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಬಂದ್ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಅಪಸ್ವರ ಕೇಳಿ ಬಂದಿದೆ. ಬಂದ್ ಬದಲಾಗಿ ಸರ್ಕಾರ ಮೇಲೆ ಒತ್ತಡ ಹೇರಿ ಎಂಬ ಕೂಗು ಕೇಳಿ ಬಂದಿದೆ. ಈಗಾಗಲೇ ನೈಟ್ ಕರ್ಪ್ಯೂ ನಿಂದ ವ್ಯಾಪಾರ, ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಜತಗೆ ಬಂದ್ ಮಾಡಿದ್ರೆ ಅನೇಕರಿಗೆ ಸಂಕಷ್ಟ ಎದುರಾಗಲಿದೆ.
ನಾಡದ್ರೋಹಿ ಕೃತ್ಯಗಳನ್ನು ನಡೆಸುವ ಎಂಇಎಸ್ ಸಂಘಟನೆ (Maharashtra Ekikaran Samiti) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವ (Ban on MES) ಬಗ್ಗೆ ಸರ್ಕಾರದ ಮೇಲೆ ಅನೇಕ ಸಂಘಟನೆಗಳು ಒತ್ತಡ ಹೇರಿವೆ. ಈ ವಿಚಾರ ಸಂಬಂಧ ಡಿಸೆಂಬರ್ 31 ರಂದು ಕರ್ನಾಟಕ ಬಂದ್ (Karnataka Bandh) ಕರೆ ನೀಡಲಾಗಿದೆ.
ಏಕಪಕ್ಷೀಯ ನಿರ್ಧಾರದ ವಿರುದ್ಧ ಅಸಮಾಧಾನ
ಬೆಳಗಾವಿಯಲ್ಲಿ ನಡೆದ ವಿದ್ಯಮಾನಗಳ ಸಂಬಂಧ ಕರೆಕೊಡಲಾದ ಕರ್ನಾಟಕ ಬಂದ್ಗೆ ಬೆಳಗಾವಿಯಲ್ಲೇ ಅಪಸ್ವರ ವ್ಯಕ್ತವಾಗಿದೆ. ಬಂದ್ಗೆ ನಮ್ಮ ಬೆಂಬಲ ಇಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ (Ashok Chandaragi) ಹೇಳಿದ್ದಾರೆ. ಅಷ್ಟೇ ಅಲ್ಲದೇ ವಾಟಾಳ್ ನಾಗರಾಜ ಏಕಪಕ್ಷೀಯ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ