Vaccine for Kids:ಮಕ್ಕಳಿಗೆ ಲಸಿಕೆ ಹಾಕಿಸ್ಬೇಕಾ? Arogya Setu App ಮೂಲಕ ಹೀಗೆ ರಿಜಿಸ್ಟರ್ ಮಾಡಿ
ಕೋವಿಡ್-19 ವೈರಸ್ ಹಾವಳಿ (Covid-19 virus) ಈಗ ಕೊಂಚ ತಗ್ಗುತ್ತಿದೆ ಎಂದು ಹೇಳುವಷ್ಟರಲ್ಲಿಯೇ ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ (Rise) ಕಾಣುತ್ತಿರುವುದು ಬಹುತೇಕ ರಾಜ್ಯದ ಸರ್ಕಾರಗಳ (State Governments) ನಿದ್ದೆ ಕೆಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಆದರೆ ಮೊದಲಿನ ಎರಡು ಅಲೆಗಳಲ್ಲಿ ನಮ್ಮ ದೇಶದಲ್ಲಿ ಅಷ್ಟೊಂದು ಜನರು ಲಸಿಕೆ ತೆಗೆದುಕೊಂಡಿರಲಿಲ್ಲ, ಆದರೆ ಈಗ ಬಹುತೇಕರು (Majority ) ಕೋವಿಡ್ ಲಸಿಕೆ (Vaccinated) ತೆಗೆದುಕೊಂಡಿದ್ದು, ರೋಗದ ತೀವ್ರತೆ ಕಡಿಮೆ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.
ಮಕ್ಕಳ ಲಸಿಕೆ ಆಯ್ಕೆ
ಇದೆಲ್ಲದರ ಮಧ್ಯೆ ಈಗ ಕೇಂದ್ರ ಸರಕಾರ 15 ರಿಂದ 18 ವರ್ಷ ವಯಸ್ಸಿನ ಮಕ್ಕಳು ಭಾರತದಲ್ಲಿ ಕೋವಿಡ್ -19 ಲಸಿಕೆಗೆ ಅರ್ಹರಾಗಿದ್ದಾರೆ ಎಂದು ಹೇಳಿದ್ದು, ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ಝೈಡಸ್ ಕ್ಯಾಡಿಲಾ ಲಸಿಕೆಗಳ ನಡುವೆ ಮಕ್ಕಳು ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯೂಸ್18 ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿತ್ತು. ಆದರೆ ಈ ಸಮಯದಲ್ಲಿ ಮೊದಲನೆಯ ಲಸಿಕೆ ಮಾತ್ರ ಲಭ್ಯವಿದ್ದು, ನೋಂದಣಿ ಪ್ರಕ್ರಿಯೆಯು ಜನವರಿ 1 ರಿಂದ ಪ್ರಾರಂಭವಾಗಿದ್ದು, ಮತ್ತು ಇನಾಕ್ಯುಲೇಶನ್ ಡ್ರೈವ್ ಜನವರಿ 3 ರಂದು ಪ್ರಾರಂಭವಾಗಿದೆ.
ಕೋವಿಡ್-19 ಲಸಿಕೆಯ ಸ್ಲಾಟ್
ವಯಸ್ಕರ ಲಸಿಕೆ ಡ್ರೈವ್ನಂತೆಯೇ, ಅರ್ಹ ನಾಗರಿಕರು ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಉಮಂಗ್ ಅಪ್ಲಿಕೇಶನ್ನಲ್ಲಿ ಸಂಯೋಜಿಸಲ್ಪಟ್ಟ ಕೋವಿನ್ ಪೋರ್ಟಲ್ ಮೂಲಕ ತಮ್ಮ ಲಸಿಕೆ ಸ್ಲಾಟ್ಗಳನ್ನು ಬುಕ್ ಮಾಡಬಹುದು. ಈ ಸಮಯದಲ್ಲಿ ಪೇಟಿಎಂ, ಹೆಲ್ಥಿಫೈಮೀ ಮತ್ತು ಹೆಚ್ಚಿನವುಗಳಂತಹ ಥರ್ಡ್ ಪಾರ್ಟಿಯ ಅಪ್ಲಿಕೇಶನ್ಗಳು ಕೋವಿಡ್-19 ಲಸಿಕೆಯ ಸ್ಲಾಟ್ ಅನ್ನು ಮಕ್ಕಳಿಗಾಗಿ ಕಾಯ್ದಿರಿಸಲು ಇನ್ನೂ ಈ ಆಯ್ಕೆಯನ್ನು ಅವುಗಳಲ್ಲಿ ಸೇರಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ.
ಹದಿಹರೆಯದವರು ವೈಯಕ್ತಿಕವಾಗಿ ಆನ್ಲೈನ್ನಲ್ಲಿ ನೋಂದಾಯಿಸಬಹುದು, ಅಥವಾ ವಯಸ್ಕರು ಈಗಾಗಲೇ ಪ್ಲಾಟ್ ಫಾರ್ಮ್ನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಅವರನ್ನು ಫಲಾನುಭವಿಯಾಗಿ ಸೇರಿಸಬಹುದು. ಅವರು ಆಧಾರ್ ಕಾರ್ಡ್ ಹೊರತುಪಡಿಸಿ ನೋಂದಣಿಗಾಗಿ ತಮ್ಮ ವಿದ್ಯಾರ್ಥಿ ಐಡಿ ಕಾರ್ಡ್ ಅನ್ನೂ ಬಳಸಬಹುದು. ಆರೋಗ್ಯ ಸೇತು ಆ್ಯಪ್ ಮೂಲಕ ನೀವು ಕೋವಿಡ್-19 ಲಸಿಕೆಗೆ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ ನೋಡಿ.
1. ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿ ಕೋವಿನ್ ಆಯ್ಕೆಯನ್ನು ಮಾಡಿ.
2. ಲಸಿಕೆಗಳನ್ನು ಆಯ್ಕೆ ಮಾಡಿ (ಲಾಗಿನ್/ನೋಂದಣಿ) ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ.
3. ನೀವು ಹೊಸ ಬಳಕೆದಾರರಾಗಿದ್ದರೆ, ನೀವು ‘ಬುಕ್ ಸ್ಲಾಟ್’ ಅನ್ನು ಆಯ್ಕೆ ಮಾಡಬಹುದು ಅಥವಾ ಫಲಾನುಭವಿಯಾಗಿ ಸೇರಿಸಬಹುದು.
4. ಫೋಟೋ ಐಡಿ ಪ್ರಕಾರ (ನೀವು ವಿದ್ಯಾರ್ಥಿಗಳ ಫೋಟೋ ಐಡಿ ಕಾರ್ಡ್ ಆಯ್ಕೆ ಮಾಡಬಹುದು), ಫೋಟೋ ಐಡಿ ಸಂಖ್ಯೆ, ಮತ್ತು ಫೋಟೋ ಐಡಿ ಕಾರ್ಡ್ ಪ್ರಕಾರ ಫಲಾನುಭವಿ ಹೆಸರನ್ನು ಒಳಗೊಂಡಿರುವ ವಿವರಗಳನ್ನು ಒದಗಿಸಿ.
5. ಲಿಂಗ ಮತ್ತು ಹುಟ್ಟಿದ ವರ್ಷವನ್ನು ಆಯ್ಕೆ ಮಾಡಿ.
6. ಒಮ್ಮೆ ನೀವು ವಿವರಗಳನ್ನು ಸಲ್ಲಿಸಿದ ನಂತರ, ಅದು ನಿಮ್ಮನ್ನು ಫಲಾನುಭವಿ ಪುಟಕ್ಕೆ ಕರೆದೊಯ್ಯುತ್ತದೆ ಮತ್ತು ಹೊಸದಾಗಿ ಸೇರಿಸಲಾದ ಫಲಾನುಭವಿಯ ಹೆಸರಿನ ಪಕ್ಕದಲ್ಲಿ ಕ್ಯಾಲೆಂಡರ್ ಐಕಾನ್ ಆಯ್ಕೆ ಮಾಡುತ್ತದೆ.
7. ಪಿನ್ ಕೋಡ್ ಮತ್ತು ದಿನಾಂಕವನ್ನು ನಮೂದಿಸಿ. ಹೆಚ್ಚಿನ ಕೇಂದ್ರಗಳನ್ನು ಹುಡುಕಲು ಬಳಕೆದಾರರು ಉಚಿತ ಮತ್ತು ಪಾವತಿಸಿದ ಆಯ್ಕೆಗಳ ನಡುವೆ ಸೆಲೆಕ್ಟ್ ಮಾಡಬಹುದು.
8. ಒಮ್ಮೆ ನೀವು ಕೇಂದ್ರವನ್ನು ಆಯ್ಕೆ ಮಾಡಿದ ನಂತರ, ಅಪ್ಲಿಕೇಶನ್ ಲಭ್ಯತೆ ಮತ್ತು ದಿನಾಂಕದ ಆಧಾರದ ಮೇಲೆ ಫಲಿತಾಂಶಗಳನ್ನು ತೋರಿಸುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿದ ಹೊಸ ಮಾರ್ಗಸೂಚಿಗಳು “2007ನೇ ಇಸವಿಯಲ್ಲಿ ಜನಿಸಿದ ಮಕ್ಕಳು ಮತ್ತು ಅದಕ್ಕೂ ಮೊದಲು ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ” ಎಂದು ನಿರ್ದಿಷ್ಟಪಡಿಸಿದೆ.