Electricity Bill: ವಿದ್ಯುತ್​​​​ ಬಿಲ್​ ಕಡಿಮೆ ಬರಬೇಕಾ? ಹಾಗಿದ್ರೆ ನೀವು ಮೊದಲೇನು ಮಾಡ್ಬೇಕು ಗೊತ್ತಾ?

ವಿದ್ಯುತ್ ಬಿಲ್ (Electricity Bill) ಯಾವಾಗಲೂ ಮಾಸಿಕ ವೆಚ್ಚಗಳ ಪ್ರಮುಖ ಭಾಗವಾಗಿದೆ. ಇದನ್ನು ಕಡಿಮೆ ಮಾಡಲು ದಿನನಿತ್ಯ ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ವಿಪರೀತ ವಿದ್ಯುತ್​ ಬಳಕೆಯಿಂದಾಗಿ ಅದರ ವೆಚ್ಚವು ಅಧಿಕವಾಗುತ್ತದೆ. ಆದರೆ ವಿದ್ಯುತ್​ ಬಿಲ್ ಕಡಿಮೆ ಬರುವಂತೆ ಮಾಡಬಹುದಾಗಿದೆ. ಕೆಲವೊಂದು ಗ್ಯಾಜೆಟ್ (Gadgets)​ ಮೂಲಕ ಮನೆಯ ವಿದ್ಯುತ್​ ಬಿಲ್ ಅನ್ನು ಕಡಿತಗೊಳಿಸಲು ಸಾಧ್ಯ. ಈ ಬಗ್ಗೆ ಮಾಹಿತಿ ಇಲ್ಲಿದೆ..

ಸಣ್ಣ ಬದಲಾವಣೆಯು ದೊಡ್ಡ ಲಾಭವನ್ನು ತರುತ್ತದೆ

ಸಾಮಾನ್ಯವಾಗಿ ಚಳಿಗಾಲದಲ್ಲಿ (Winter) ವಿದ್ಯುತ್ ಬಿಲ್ ಗಣನೀಯವಾಗಿ ಹೆಚ್ಚಾಗುವುದು ಕಂಡುಬರುತ್ತದೆ. ವಿದ್ಯುತ್ ಬಿಲ್ ಹೆಚ್ಚಳವಾದರೆ ಬಜೆಟ್​ನಲ್ಲಿ ಕೊಂಚ ವ್ಯತ್ಯಾಸ ಉಂಟಾಗುತ್ತದೆ. ಒಂದು ವೇಳೆ ನೀವು ಹೆಚ್ಚಿನ ವಿದ್ಯುತ್ ಬಿಲ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಮನೆಯಲ್ಲಿರುವ ಕೆಲವು ಉಪಕರಣಗಳನ್ನು ಬದಲಾಯಿಸಬೇಕಾಗುತ್ತದೆ.

ಸಾಮಾನ್ಯ ಬಲ್ಬ್ (Bulb) ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ

ಹಳೆಯ ಬಲ್ಬ್‌ಗಳನ್ನು ಬಳಸುತ್ತಿದ್ದರೆ, ಇದರಿಂದ ವಿದ್ಯುತ್​ ಬಿಲ್​ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಲ್ಬ್‌ಗಳು ವಿದ್ಯುತ್ ಬಿಲ್ ಅನ್ನು ವೇಗವಾಗಿ ಹೆಚ್ಚಿಸುತ್ತವೆ. ಅದರೆ ಅದನ್ನು ತೆಗೆದು ಆ ಜಾಗಕ್ಕೆ ಎಲ್​ಇಡಿ ಬಲ್ಬ್​ಗಳನ್ನು ಹಾಕಿದರೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು. ಎಲ್ಇಡಿ ಬಲ್ಬ್ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ದೊಡ್ಡ ಬಿಲ್​ಗಳಿಂದ ನಿಮ್ಮನ್ನು ಉಳಿಸಬಹುದು.

ಹೀಟರ್ ಬಳಸುವುದನ್ನು ತಪ್ಪಿಸಿ

ಚಳಿ ಅಥವಾ ಶೀತದ ಸಮಯದಲ್ಲಿ ಹೀಟರ್‌ಗಳ ಬಳಕೆ ಸಾಮಾನ್ಯವಾಗಿದೆ. ನೀವು ಹೆಚ್ಚಿನ ಸಾಮರ್ಥ್ಯದ ಹೀಟರ್ ಅನ್ನು ಬಳಸುತ್ತಿದ್ದರೆ, ತಕ್ಷಣವೇ ಅದನ್ನು ತೆಗೆದುಹಾಕಿ. ಹೆಚ್ಚಿನ ಸಾಮರ್ಥ್ಯದ ಶಾಖೋತ್ಪಾದಕಗಳು ಸಾಕಷ್ಟು ವಿದ್ಯುತ್ ಅನ್ನು ಬಳಸುತ್ತವೆ ಮತ್ತು ಅದರ ನೇರ ಪರಿಣಾಮವು ಬಿಲ್​ನಲ್ಲಿ ಗೋಚರಿಸುತ್ತದೆ. ಹೀಟರ್ ಬದಲಿಗೆ ಬ್ಲೋವರ್ ಅನ್ನು ಬಳಸುವುದು ಆರ್ಥಿಕವಾಗಿದೆ. ಬ್ಲೋವರ್ ಸುರಕ್ಷಿತ ಹಾಗೂ ಕಡಿಮೆ ವಿದ್ಯುತ್ ಬಳಸುತ್ತದೆ.

ಹಳೆಯ ಶೈಲಿಯ ಗೀಸರ್

ಹಳೆಯ-ಶೈಲಿಯ ಗೀಸರ್‌ಗಳನ್ನು ಇನ್ನೂ ಅನೇಕ ಮನೆಗಳಲ್ಲಿ ನೀರನ್ನು ಬಿಸಿಮಾಡಲು ಬಳಸಲಾಗುತ್ತದೆ. ಇವು ಸಾಕಷ್ಟು ವಿದ್ಯುತ್ ಅನ್ನು ಬಳಸುತ್ತವೆ. ಹೆಚ್ಚುವರಿ ವಿದ್ಯುತ್ ಬಳಕೆ ಬಿಲ್ ಮಾತ್ರ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಇಂದು ಹಳೆಯ ಕಾಲದ ಗೀಸರ್ ಬದಲಿಗೆ ಸುಧಾರಿತ ಗೀಸರ್ ಅನ್ನು ಮನೆಗೆ ತನ್ನಿ. ನಿಮ್ಮ ಹೊಸ ಗೀಸರ್ 5 ಸ್ಟಾರ್ ರೇಟಿಂಗ್ ಹೊಂದಿದ್ದರೆ ಒಳ್ಳೆಯದು. 5 ಸ್ಟಾರ್ ರೇಟಿಂಗ್ ಹೊಂದಿರುವ ಗೀಸರ್‌ಗಳು ಕಡಿಮೆ ವಿದ್ಯುತ್ ಅನ್ನು ಬಳಸುತ್ತವೆ ಇದರಿಂದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.

ಇವಿಷ್ಟು ಮಾತ್ರವಲ್ಲ, ಹಳೆಯ ವಸ್ತುಗಳು ವಿದ್ಯುತ್​ ಅನ್ನು ಹೆಚ್ಚು ತೆಗೆದುಕೊಳ್ಳುತ್ತದೆ. ಅಂತಹ ವಸ್ತುಗಳನ್ನು ಬದಲಾಯಿಸುವುದು ಸೂಕ್ತ. ಅದರಲ್ಲೂ ಹಳೆಯ ಕಾಲ ಐರನ್ ಬಾಕ್ಸ್​ ಮತ್ತು ಹಳೆಯ ಪ್ಯಾನ್​ಗಳು ಹೆಚ್ಚು ವಿದ್ಯುತ್​ ಅನ್ನು ತೆಗೆದುಕೊಳ್ಳುತ್ತದೆ. ಒಂದು ವೇಳೆ ಕಡಿಮೆ ರೀತಿಯಲ್ಲಿ ವಿದ್ಯುತ್​​ ಹೋಗಬೇಕು ಮತ್ತು ಕಡಿಮೆ ಬಿಲ್​ ಬರಬೇಕು ಎನ್ನುವವರು ಮನೆಯಲ್ಲಿರುವ ಹಳೆಯ ಗ್ಯಾಜೆಟ್​ಗಳನ್ನು ಬದಲಾಯಿಸುವುದು ಸೂಕ್ತ.

ವಿದ್ಯುತ್​ ಬಿಲ್​ ಕಡಿಮೆ ಬರಬೇಕಾದರೆ ಸೋಲರ್​ ಲೈಟ್​ಗಳನ್ನು ಬಳಸಬಹುದಾಗಿದೆ. ಇದರ ಮೂಲಕ ಪ್ರಕಾಶಮಾನವಾದ ಲೈಟ್​ಗಳನ್ನು ಬಳಸುಬಹುದು. ಮಾತ್ರವಲ್ಲದೆ  ಒಂದು ಬಾರಿ ಹಣ ಖರ್ಚು ಮಾಡಿ ಸೋಲಾರ್​ ಲೈಟ್​ಗಳು ಹಾಕಿಸಿಕೊಂಡರೆ ಸಾಕು. ವಿದ್ಯುತ್​ ಬಳಸದೆಯೇ ಸೋಲಾರ್​ ಬಳಸಬಹುದಾಗಿದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಚಾರ್ಜ್​ ಕೂಡ ಮಾಡಬಹುದಾಗಿದೆ.

ವಿದ್ಯುತ್​ ಬೆಲೆ ಅಧಿಕವಾಗಿ ಬಂದರೆ ತಲೆ ಕೆಡಿಸುವವರು ಅನೇಕ ಮಂದಿ ಇದ್ದಾರೆ. ಅದರಲ್ಲೂ ನಗರ ಪ್ರದೇಶದಲ್ಲಿ ವಿದ್ಯುತ್​ ಬೆಲೆ ಜಾಸ್ತಿ ಬರುತ್ತದೆ. ಇನದನ್ನು ಕಡಿಮೆ ಮಾಡಲು ನಾನಾ ಪ್ರಯತ್ನ ಪಡುತ್ತಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *