Deepika Padukone: ಮದುವೆಗೂ 4 ವರ್ಷ ಮುನ್ನವೇ ಗುಟ್ಟಾಗಿ ರಿಂಗ್ ಬದಲಿಸಿಕೊಂಡಿದ್ರಂತೆ ಡಿಪ್ಪಿ- ರಣವೀರ್!
ದೀಪಿಕಾ ಪಡುಕೋಣೆ(Deepika Padukone).. ಕನ್ನಡದ ಐಶ್ವರ್ಯ(Aishwarya) ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟವರು. ಇಂದು ಬಾಲಿವುಡ್(Bollywood)ನ ನಂಬರ್ ಒನ್ ನಟಿ.ಕನ್ನಡ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ನಂತರ ಬಾಲಿವುಡ್‌ಗೆ ಹಾರಿದ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ ಹುಟ್ಟುಹಬ್ಬ(Birthday)ವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಅವರು 36ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳು ಸೇರಿದಂತೆ ಅನೇಕ ನಟ-ನಟಿಯರು ದೀಪಿಕಾ ಪಡುಕೋಣೆ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ದೀಪಿಕಾಗೆ ಸ್ಯಾಂಡಲ್‌ವುಡ್(Sandalwood) ಮಂದಿ ಕೂಡ ಬರ್ತಡೇ ಶುಭಾಶಯ ತಿಳಿಸುತ್ತಿದ್ದಾರೆ. ಈ ವೇಳೆ ದೀಪಿಕಾ ಅವರ ಸಿಕ್ರೇಟ್(Secret) ಒಂದು ರಿವೀಲ್ ಆಗಿದೆ. ಇಷ್ಟು ದಿನ ಯಾರ ಬಳಿಯೂ ಹೇಳದ ಒಂದು ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಷಯ ತಿಳಿದ ಅಭಿಮಾನಿಗಳು(Fans) ಇದನ್ನು ನಂಬಲು ಹಿಂದೇಟು ಹಾಕುತ್ತಿದ್ದಾರೆ. ಇದು ನಡೆದಿದೆ ಎಂದು ನಂಬುತ್ತಿಲ್ಲ. ಆದರೂ, ಇದು ನಿಜ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಇಬ್ಬರಿಗೆ ಸಂಬಂಧಿಸಿದ ವಿಚಾರ ಭಾರೀ ಚರ್ಚೆ ಹುಟ್ಟುಹಾಕಿದೆ.
ಗುಟ್ಟಾಗಿ ನಿಶ್ವಿತಾರ್ಥ ಮಾಡಿಕೊಂಡಿದ್ದರಂತೆ ಡಿಪ್ಪಿ-ರಣವೀರ್!
2012 ರಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ರಾಮ್-ಲೀಲಾ ಚಿತ್ರದ ಶೂಟಿಂಗ್ ಸಮಯದಲ್ಲಿ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ನಡುವೆ ಪ್ರೀತಿಯಾಗಿತ್ತು. 6 ವರ್ಷಗಳ ನಂತರ ಈ ಜೋಡಿ 2018ರಲ್ಲಿ ಮದುವೆಯಾಗಿದ್ದರು. ಇಂದು ದೀಪಿಕಾ ಅವರಿಗೆ ಜನ್ಮದಿನದ ಸಂಭ್ರಮ. ಇದೇ ವೇಳೆ ಅವರು ಸಂದರ್ಶನವೊಂದರಲ್ಲಿ ತಮ್ಮ ನಿಶ್ಚಿತಾರ್ಥ ಗುಟ್ಟಾಗಿ ನಡೆದಿತ್ತು ಎಂದು ಹೇಳಿರುವ ವಿಚಾರ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಚಾರ ಇದುವರೆಗೂ ಯಾರುಗೂ ತಿಳಿದಿರಲಿಲ್ಲ. ಕೇವಲ ಕುಟುಂಬಸ್ಥರು, ಆಪ್ತ ಸ್ನೇಹಿತರಿಗಷ್ಟೆ ತಿಳಿದಿತ್ತು. ಇದೀಗ ಈ ವಿಚಾರ ಬಹಿರಂಗಗೊಂಡಿದೆ. ಮದುವೆಗೂ 4 ವರ್ಷ ಮುನ್ನ ಅಂದರೆ 2014ರಲ್ಲಿ ಈ ಜೋಡಿ ಗುಟ್ಟಾಗಿ ರಿಂಗ್ ಬದಲಾಯಿಸಿದ್ದರಂತೆ.
ದೀಪಿಕಾ ಪಡುಕೋಣೆಗೆ ಸಖತ್ ಡಿಮ್ಯಾಂಡ್!
‘ರಿಯಲ್ ಸ್ಟಾರ್’ ಉಪೇಂದ್ರ ನಟನೆಯ ‘ಐಶ್ವರ್ಯಾ’ ಸಿನಿಮಾದಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದ್ದ ದೀಪಿಕಾ ಆಮೇಲೆ ಬಾಲಿವುಡ್‌ಗೆ ಹಾರಿದರು. ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ನಟಿಸಿದ್ದು ಅವರಿಗೆ ದೊಡ್ಡ ಬ್ರೇಕ್ ನೀಡಿತು. ಮಾಡೆಲ್, ಕ್ರೀಡಾಪಟು ಆಗಿದ್ದ ದೀಪಿಕಾಗೆ ಬಾಲಿವುಡ್‌ನಲ್ಲಿ ಆರಂಭದ ಕೆಲವು ದಿನಗಳು ನಿಜಕ್ಕೂ ಕಷ್ಟಕರವಾಗಿದ್ದವು. ಆದರೆ ಇಂದು ಭಾರತದ ಬಹುಬೇಡಿಕೆಯ ನಟಿಯಾಗಿ ದೀಪಿಕಾ ಪಡುಕೋಣೆ ಹೊರಹೊಮ್ಮಿದ್ದಾರೆ. ಹಾಲಿವುಡ್ನಲ್ಲೂ ತಮ್ಮ ಖದರ್ ತೋರಿದ್ದಾರೆ ದೀಪಿಕಾ ಪಡುಕೋಣೆ.
ದೀಪಿಕಾಗೆ ಸಿಕ್ಕ ಪಾತ್ರವೆಲ್ಲವೂ ಅದ್ಭುತ!
ಇಲ್ಲಿಯವರೆಗೆ ದೀಪಿಕಾಗೆ ಅತ್ಯದ್ಭುತ ಪಾತ್ರಗಳು ಸಿಕ್ಕಿವೆ. ಈ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಸ್ವತಃ ದೀಪಿಕಾ ಅವರೇ ಹೇಳಿಕೊಂಡಿದ್ದರು. ‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿ’ ‘ಪದ್ಮಾವತ್’ ಯಂತಹ ಪಾತ್ರಗಳು ನಿಜಕ್ಕೂ ದೀಪಿಕಾ ವೃತ್ತಿ ಬದುಕು ಇನ್ನಷ್ಟು ಉತ್ತುಂಗವಾಗಲು ಸಹಾಯ ಮಾಡಿವೆ ಎಂದು ಹೇಳಬಹುದು. ಎಷ್ಟೋ ಕಲಾವಿದರು ದೀಪಿಕಾ ಪಡುಕೋಣೆ ನಿಭಾಯಿಸಿದಂತಹ ಪಾತ್ರ ಮಾಡಲು ತುಂಬ ಇಷ್ಟ ಇದೆ ಎಂದು ಸಂದರ್ಶನಳಲ್ಲಿ, ಪ್ರಶಸ್ತಿ ಸಮಾರಂಭಗಳಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ 83 ಸಿನಿಮಾದಲ್ಲಿ ಪತಿ ರಣವೀರ್ ಜೊತೆ ದೀಪಿಕಾ ಪಡುಕೋಣೆ ನಟಿಸಿದ್ದರು.