ಭಾರತದಲ್ಲಿ 24ಗಂಟೆಯಲ್ಲಿ 90,928 ಕೊರೊನಾ ಕೇಸ್​ಗಳು ದಾಖಲು, ನಿನ್ನೆಗಿಂತಲೂ ಶೇ.56ರಷ್ಟು ಹೆಚ್ಚು; 325 ಮಂದಿ ಸಾವು

ಭಾರತದಲ್ಲಿ ಇಂದು 24 ಗಂಟೆಯಲ್ಲಿ ಬರೋಬ್ಬರಿ 90,928 ಕೊರೊನಾ ಕೇಸ್​(Corona Cases In India)ಗಳು ದಾಖಲಾಗಿದ್ದು, ನಿನ್ನೆಗಿಂತಲೂ ಇಂದು ಶೇ.56.5ರಷ್ಟು ಅಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,51,09,286 ಕ್ಕೆ ಏರಿಕೆಯಾಗಿದೆ. ಹಾಗೇ 24ಗಂಟೆಯಲ್ಲಿ 325 ಜನರು ಮೃತಪಟ್ಟಿದ್ದಾರೆ. ಅಲ್ಲಿಗೆ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ದರ ಶೇ.6.43ಕ್ಕೆ ಏರಿಕೆಯಾಗಿದೆ. ಹಾಗೇ, ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401ಕ್ಕೆ ತಲುಪಿದೆ. ಅಂದಹಾಗೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 2630ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 955ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವಾರದ ಪಾಸಿಟಿವಿಟಿ ದರ ಶೇ.3.47ರಷ್ಟಿದೆ. 24 ಗಂಟೆಯಲ್ಲಿ 19,206ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಅಲ್ಲಿಗೆ ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 3,43,41,009ಕ್ಕೆ ತಲುಪಿದೆ. ಆದರೆ ಒಂದು ದಿನದಲ್ಲಿ ಪತ್ತೆಯಾಗುವ ಕೊವಿಡ್​ 19 ಹೊಸ ಸೋಂಕಿತರ ಸಂಖ್ಯೆಗೂ, ಚೇತರಿಸಿಕೊಂಡು ಡಿಸ್​ಚಾರ್ಜ್ ಆಗುತ್ತಿರುವವರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ ಇದೆ.  ಒಟ್ಟಾರೆ ದಾಖಲಾದ 90 ಸಾವಿರಕ್ಕೂ ಅಧಿಕ ಪ್ರಕರಣದಲ್ಲಿ 26,538 ಕೊರೊನಾ ಕೇಸ್​ಗಳು ಮಹಾರಾಷ್ಟ್ರದಲ್ಲಿಯೇ ದಾಖಲಾಗಿದೆ. ಅದರಲ್ಲೂ ಮುಂಬೈನಲ್ಲಿ 15,166 ಪ್ರಕರಣಗಳು ಪತ್ತೆಯಾಗಿವೆ. ಹಾಗೇ, ದೆಹಲಿಯಲ್ಲಿ 10,665 ಕೇಸ್​ಗಳು 24ಗಂಟೆಯಲ್ಲಿ ದಾಖಲಾಗಿವೆ. ಇದು ನಿನ್ನೆಗಿಂತಲೂ ಎರಡುಪಟ್ಟು ಹೆಚ್ಚು.

30 ರೆಸಿಡೆಂಟ್ ವೈದ್ಯರಿಗೆ ಕೊರೊನಾ ಸೋಂಕು
ಮುಂಬೈನ ಸಿಯೋನ್​ ಆಸ್ಪತ್ರೆಯಲ್ಲಿ ಮತ್ತೆ 30 ರೆಸಿಡೆಂಟ್​ ವೈದ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲಿಗೆ ಮಹಾರಾಷ್ಟ್ರದಲ್ಲಿ ಒಟ್ಟು 260 ರೆಸಿಡೆಂಟ್ ವೈದ್ಯರು ಕೊರೊನಾಕ್ಕೆ ಒಳಗಾದ ಹಾಗೆ ಆಗಿದೆ. ಚಂಡಿಗಢ್​ನ ಪಿಜಿಐ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಸೇರಿ 146 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.  ಸದ್ಯ ಇವರೆಲ್ಲರಲ್ಲೂ ಕೊರೊನಾದ ಸೌಮ್ಯ ಲಕ್ಷಣಗಳಿದ್ದು, ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಒಮಿಕ್ರಾನ್​ ಕೂಡ ಮಹಾರಾಷ್ಟ್ರದಲ್ಲೇ ಹೆಚ್ಚು
ಇನ್ನು ಒಮಿಕ್ರಾನ್ ಸೋಂಕಿತರ ಸಂಖ್ಯೆ  ಕೂಡ ಮಹಾರಾಷ್ಟ್ರದಲ್ಲಿಯೇ ಹೆಚ್ಚು. ಅಲ್ಲಿ ಸೋಂಕಿತರ ಸಂಖ್ಯೆ 797ಕ್ಕೆ ಏರಿದೆ. ಎರಡನೇ ಸ್ಥಾನದಲ್ಲಿ ದೆಹಲಿಯಿದ್ದು, ಒಮಿಕ್ರಾನ್ ಸೋಂಕಿತರ ಸಂಖ್ಯೆ 465ಕ್ಕೆ ತಲುಪಿದೆ. ರಾಜಸ್ಥಾನ, ಕೇರಳ, ಕರ್ನಾಟ, ಗುಜರಾತ್​​ ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 200ರ ಗಡಿದಾಟಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *