Film Chamber : ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ..!
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕಾರಗಳು ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಫಿಲಂ ಚೇಂಬರ್ ಎರಡು ಪ್ರಮುಕ ವಿಚಾರಗಳ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತಿಳಿಸೋಕೆ ರೆಡಿಯಾಗಿದೆ. ಒಂದು ವೀಕೆಂಡ್ ನಲ್ಲಿ ಥಿಯೇಟರ್ ಗಳಿಗೆ ಅವಕಾಶ ನೀಡೋಕೆ ಮನವಿ ಮಾಡಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೇಟಿ ಮಾಡಿ ಮನವಿ ಮಾಡೋಕೆ ಚೇಂಬರ್ ರೆಡಿಯಾಗಿದೆ.
ಜೊತೆಗೆ ಮೇಕೆ ದಾಟು ಪಾದಯಾತ್ರೆಗೆ ಸ್ಯಾಂಡಲ್ ವುಡ್(Sandalwood) ಸಾಥ್ ನೀಡೋ ಬಗ್ಗೆ ಮಹತ್ವದ ನಿರ್ಧಾರ ತಿಳಿಸಲಿದೆ ಎಂದು ತಿಳಿದು ಬಂದಿದೆ. ಇತ್ತಿಚಗೆ ಮೆಕೆದಾಟು ಹೋರಾಟಕ್ಕೆ ಸಾಥ್ ನೀಡುವಂತೆ ಡಿಕೆ ಶಿವಕುಮಾರ್ ಫಿಲಂಚೇಂಬರ್ ಗೆ ಹೋಗಿ ಮನವಿ ಮಾಡಿದ್ರು. ಹೀಗಾಗಿ ಸದ್ಯ ಫಿಲಂ ಚೇಂಬರ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ.
ಕಲಾವಿದರು ಮೆಕೆ ದಾಟು ಪಾದಯಾತ್ರೆ ಬಗ್ಗೆ ತೆಗೆದುಕೊಂಡಿರೋ ನಿರ್ಧಾರದ ಬಗ್ಗೆಯೂ ನಿರ್ಧಾರ ಇಂದು ಹೊರ ಬೀಳಲಿದೆ. ಮಧ್ಯಾಹ್ನದ ಒಳಗೆ ಫಿಲಂ ಚೇಂಬರ್(Film Chamber) ನಿರ್ಧಾರ ಪ್ರಕಟಿಸಲಿದೆ.