ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ್ ಮುಲ್ಕ್ ಟ್ರಸ್ಟ್ ಅಧ್ಯಕ್ಷರಾಗಿ ಮೀರಾಸಾಬ (ಬಾಬುಲಾಲ್)ಮುಜಾವರ್ ಪುನರಾಯ್ಕೆ
ಅಫಜಲಪುರ ತಾಲೂಕಿನ ಗಡಿಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ್ ಮುಲ್ಕ್ ಟ್ರಸ್ಟ್ ಅಧ್ಯಕ್ಷರಾಗಿ ಮೀರಾಸಾಬ (ಬಾಬುಲಾಲ್)ಮುಜಾವರ್ ಪುನರಾಯ್ಕೆ ಆಗಿದ್ದಕ್ಕೆ ಅಫಜಲಪುರ ತಾಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಸನ್ಮಾನಿಸಿದರು,ಗಡಿಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ಹೈದ್ರಾ ಗ್ರಾಮದ ಸುಪ್ರಸಿದ್ಧ ಖಾಜಾ ಸೈಫನ್ ಮುಲ್ಕ್ ದರ್ಗಾದ ಟ್ರಸ್ಟ್ ಅಧ್ಯಕ್ಷರಾಗಿ ಮೀರಾಸಾಬ (ಬಾಬುಲಾಲ್) ಮುಜಾವರ್ ಪುನರಾಯ್ಕೆ ಆಗಿದ್ದಕ್ಕೆ ಅಫಜಲಪುರ ತಾಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಬೃಹತ್ ಹೂವಿನ ಹಾರ ಹಾಕುವ ಮೂಲಕ ಎಲ್ಲಾ ಟ್ರಸ್ಟ್ ಸದಸ್ಯರನ್ನು ಸನ್ಮಾನಿಸಿದರು. ರವಿವಾರದಂದು ಹಜರತ್ ಖಾಜಾ ಸೈಫನ್ ಮುಲ್ಕ್ ದರ್ಗಾದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಮೀರಾಸಾಬ (ಬಾಬುಲಾಲ್) ಮುಜಾವರ್ ಪುನರಾಯ್ಕೆಗೊಂಡರು.ಉಪಾಧ್ಯಕ್ಷರಾಗಿ ರಫೀಕ್ ಮುಜಾವರ, ಪ್ರಧಾನ ಕಾರ್ಯದರ್ಶಿಯಾಗಿ ಶಕೀಲ್ ಮುಜಾವರ್, ಸದಸ್ಯರಾಗಿ ರೌಫ್ ಮುಜಾವರ್, ವಕೀಲ್ ಮುಜಾವರ್, ಅಮ್ಮದಸಾಬ್ ಮುಜಾವರ್ ಆಯ್ಕೆ ಮಾಡಲಾಯಿತು.ನಂತರ ಅಫಜಲಪುರ ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ ಇಡೀ ಭಾರತದಲ್ಲಿ ಸುಪ್ರಸಿದ್ಧ ದೇವಸ್ಥಾನವಾಗಿರುವ ಹಜರತ್ ಖಾಜಾ ಸೈಫನ್ ಮುಲ್ಕ್ ಟ್ರಸ್ಟ್ ಮತ್ತಿತರೆ ಟ್ರಸ್ಟ್ ಗಳಿಗೆ ಮಾದರಿಯಾಗುವ ರೀತಿಯಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡಬೇಕು.ಬೇಡಿದ್ದೆಲ್ಲ ನೀಡುವ ನಡೆದಾಡುವ ದೇವರು ನಮ್ಮೆಲ್ಲರಿಗೂ ಸಿಕ್ಕಿರುವುದು ಇದಕ್ಕಿಂತ ಪುಣ್ಯ ಮತ್ತೊಂದಿಲ್ಲ.ದಿನ ಬೆಳಗಾದರೆ ಸಾಕು ಈ ದೇವಸ್ಥಾನಕ್ಕೆ ಬೇರೆಬೇರೆ ರಾಜ್ಯಗಳಿಂದ ಸಾವಿರಾರು ಭಕ್ತರು ಬರುತ್ತಾರೆ ಹೀಗಾಗಿ ಬಂದಿರುವ ಭಕ್ತರಿಗೆ ಖಾಜಾ ಸೈಫನ ಮುಲ್ಕ್ ದೇವರ ಆಶೀರ್ವಾದ ಇದ್ದೇ ಇರುತ್ತದೆ.ಆದರೆ ಬಂದಿರುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮ-ನಿಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಮೀರಾಸಾಬ ಮುಜಾವರ ಬಹಳಷ್ಟು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ ಹೀಗಾಗಿ ಅವರು ಮತ್ತೊಮ್ಮೆ ಪುನರಾಯ್ಕೆ ಆಗಲು ಸಾಧ್ಯವಾಯಿತು.ನಾನು ಸಹ ಈ ದೇವಸ್ಥಾನದ ಭಕ್ತನಾಗಿದ್ದು ನನ್ನ ಕೈಲಾದಷ್ಟು ದೇವಸ್ಥಾನದ ಅಭಿವೃದ್ಧಿಗಾಗಿ ಸಹಾಯ-ಸಹಕಾರ ನೀಡಲು ಸದಾ ಸಿದ್ಧನಾಗಿರುತ್ತಾನೆ ಎಂದು ತಿಳಿಸಿದರು.
ನಂತರ ಮಾತನಾಡಿದ ಹಜರತ್ ಖಾಜಾ ಸೈಫನ್ ಮುಲ್ಕ್ ಟ್ರಸ್ಟ್ ಅಧ್ಯಕ್ಷರಾದ ಮೀರಾಸಾಬ (ಬಾಬುಲಾಲ್)ಮುಜಾವರ್ ಅವರು
ಹಜರತ್ ಖಾಜಾ ಸೈಫನ್ ಮುಲ್ಕ್ ದೇವಸ್ಥಾನವೂ ಇಡೀ ಜಗತ್ತಿಗೆ ಮಾದರಿ ಆಗುವಂತೆ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತೇನೆ.ದೇವಸ್ಥಾನಕ್ಕೆ ಬಂದಿರುವ ಭಕ್ತರಿಗೆ ಮೂಲಸೌಕರ್ಯ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಸಿಗುವಂತೆ ಮಾಡಲಾಗುವುದು.ನನ್ನ ಮೇಲೆ ಭರವಸೆಯಿಟ್ಟು ಪುನರಾಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಸವರಾಜ ಬಿರಾದಾರ,ಮಂಜುನಾಥ ತೇಲಿ,ಚಾಂದಸಾಬ ಮುಲ್ಲಾ,ಹಜರತ್ ಫುಲಾರಿ, ಇಸ್ಮಾಯಿಲ್ ಮುಜಾವರ,ಚೀದಾನಂದ ತಳವಾರ, ಸುಭಾಸ ಜಾಧವ,ಕೃಷ್ಣಪ್ಪ ಬಂಡಿವಡ್ಡರ,ಸುಖದೇವ್ ವಠಾರ, ರಮೇಶ ಕ್ಷತ್ರಿಯ,ಸಿದ್ದು ಖೇಡ,ಪುನ್ನಪ್ಪ ಡಾಳೆ,ಶ್ರೀಶೈಲ್ ಸುತ್ತಾನಪುರ,ಸಂಜುಕುಮಾರ ಡಾಳೆ,ಬಸವರಾಜ್ ಶೇಷಗಿರಿ,ಜಾನು ಮುಲ್ಕ್ ಚೌಧರಿ,ಶರಣು ನಾಯ್ಕೋಡಿ,ರಮಜಾನ್ ಸೇರಿದಂತೆ ಇನ್ನಿತರು ಇದ್ದರು.