ಕೊನೆಗೂ ಸಿನಿಮಾ ಶೂಟಿಂಗ್ಗೆ ಸಿಕ್ತು ಪರ್ಮಿಷನ್..! ಯಾರ ಸಿನಿಮಾ ಮೊದಲು ತೆರೆಗೆ ಬರುತ್ತೆ ಗೊತ್ತಾ..?
ಕೊರೋನ ಹಾವಳಿಯಿಂದಾಗಿ ಮೂರ್ನಾಲ್ಕು ತಿಂಗಳ ಕಾಲ ಸಿನಿಮಾರಂಗಕ್ಕೆ ಸೂತಕ ವಕ್ಕರಿಸಿಬಿಟ್ಟಿತ್ತು. ಥಿಯೇಟರ್ಗಳಲ್ಲಂತೂ ಅದ್ಯಾವ್ಯಾವ ಜಿರಳೆ, ಹುಳ ಉಪ್ಪಟೆ ಸೇರ್ಕೊಂಡಿದಾವೊ ನೋಡ್ದವ್ರ್ಯಾರು. ಆದ್ರು ಕೇಂದ್ರ ಸಚಿವ ಪ್ರಕಾಶ ಜಾವ್ದೇಕರ್ ಇನ್ನು ಮುಂದೆ ಈ ಈ ರೂಲ್ಸ್ ಫಾಲೊ ಮಾಡ್ಕೊಂಡು ಶೂಟಿಂಗ್ ಮಾಡಿ ಅಂತ ಪರ್ಮೀಶನ್ ಕೊಟ್ಟುಬಿಟ್ಟಿದ್ದಾರೆ.
ಕೇಂದ್ರ ಸರ್ಕಾರ ಸಿನಿಮಾ ಇಂಟಸ್ಟ್ರಿಗೆ ಗೋ ಅಹೆಡ್, ಶೂಟಿಂಗ್ ಮಾಡಿ ಅಂತ ಹೇಳಿಯಾಯ್ತು. ನಿಜಕ್ಕೂ ಸಿನಿಮಾರಂಗಕ್ಕಿದು ಸಂತೋಷದ ವಿಷಯ. ಆದ್ರೆ ಶೂಟಿಂಗ್ ಮಾಡಿ ಸಿನಿಮಾನೆ ರಿಲೀಸಾಗ್ತಿಲ್ವಲ್ಲ ಏನ್ ಮಾಡೋದು ಅನ್ನೋ ಪ್ರಶ್ನೆ ಒಂದು ಕಡೆ. ಹಾಗೊಮ್ಮೆ ಥಿಯೇಟರ್ಗೆ ಪರ್ಮೀಶನ್ ಸಿಕ್ರೆ ಮೊದಲು ಯಾರ್ ಸಿನಿಮಾ ರಿಲೀಸಾಗುತ್ತೆ, ಥಿಯೇಟರ್ಗೆ ಜನ ಬರ್ತಾರಾ ಅನ್ನೋದು ಮತ್ತೊಂದು ದೊಡ್ಡ ಪ್ರಶ್ನೆ.
ಶೂಟಿಂಗ್ ಮಾಡ್ಕೊಳ್ಳೋಕೆ ಪರ್ಮೀಶನ್ ಏನೊ ಸಿಕ್ಕಾಗಿದೆ. ಈಗಾಗ್ಲೆ ಬೆರಳೆಣಿಕೆಯಷ್ಟು ಚಿತ್ರಗಳು ಸುರಕ್ಷತಾ ಕ್ರಮಗಳೊಂದಿಗೆ ಶೂಟಿಂಗ್ ಆರಂಭಿಸಿಯೂ ಆಗಿವೆ. ಆದ್ರೆ ಹೀಗೆ ಶೂಟಿಂಗ್ ಮುಗ್ಸಿ ಎಲ್ಲಾ ಸಿನಿಮಾಗಳು ಸ್ಟಾಕಾದ್ರೆ, ವಾರಕ್ಕೆ ಮತ್ತೆ ಹತ್ತು ಹದಿನೈದು ಚಿತ್ರಗಳು ಬಂದ್ರೆ ನಿರ್ಮಾಪಕರಿಗೆ ಮತ್ತು ಪ್ರೇಕ್ಷಕರಿಗೆ ಲಾಸ್ ಆಗೋದಿಲ್ವಾ ?
ಇಂಡಸ್ಟ್ರಿಯ ಕೆಲವು ಹಿರೀತಲೆಗಳ ಪ್ರಕಾರ. ಯಾರಾದ್ರು ದೊಡ್ಡ ನಟರ ಸಿನಿಮಾಗಳು ಥಿಯೇಟರ್ಗೆ ಬಂದ್ರೇನೆ ಜನ ಕೊರೋನಾ ಭಯಬಿಟ್ಟು ಚಿತ್ರಮಂದಿರಗಳಿಗೆ ಬರ್ತಾರೆ. ಇಲ್ಲಾಂದ್ರೆ ಸಣ್ಣಪುಟ್ಟ ಸಿನಿಮಾಗಳೇನಾದ್ರು ರಿಲೀಸಾದ್ರೆ ಅಯ್ಯೊ ಬಿಡು ಟೀವಿಲೊ ಮೊಬೈಲ್ನಲ್ಲೊ ನೋಡ್ಕೊಳೋಣ ಅಂತ ಸುಮ್ನಾಗ್ತಾರೆ. ಆಗ ಥಿಯೇಟರ್ ಮಾಲೀಕರಿಗೂ ಲಾಸು, ಥಿಯೇಟರ್ ಬಾಡಿಗೆ ಕಟ್ಟೊ ನಿರ್ಮಾಪಕರಿಗೂ ಲಾಸು.
ಇನ್ನು ಇಷ್ಟೆಲ್ಲಾ ಟೆನ್ಶನ್ಗಳ ನಡುವೆ ಮತ್ತೊಂದು ಬಿಗ್ ಕ್ವೆಶ್ಚನ್ ಅಂದ್ರೆ ಅಕಸ್ಮಾತ್ ಥಿಯೇಟರ್ಗೆ ದೊಡ್ಡ ಸಿನಿಮಾನೆ ಬಂದ್ರು. ಬರೊ ಜೋಡಿಗಳನ್ನ ದೂರ್ ದೂರ ಕೂರಿಸಿದ್ರೆ ಸುಮ್ನಿರ್ತಾರಾ. ಜೊತೇಲಿ ಕೂತು ಸಿನಿಮಾ ನೋಡೋಕೆ ಬರ್ತಿದ್ದ ಕುಟುಂಬಗಳನ್ನ ನೀವಿಲ್ಲಿ ಕೂತ್ಕೊಳಿ ನೀವ್ ಅಲ್ಲಿ ಕೂತ್ಕಳಿ, ಡಿಸ್ಟೆನ್ಸ್ ಮೇಂಟೈನ್ ಮಾಡಿ ಅಂದ್ರೆ ಕೇಳ್ತಾರಾ, ಕೊರೋನಾ ಭಯದಿಂದ ಥಿಯೇಟರ್ಗೆ ಬರ್ತಾರಾ ಅನ್ನೋದೆ ಡೌಟು.