International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ ಜಮಾಯತ್ ಮುಖ್ಯಸ್ಥ
ಲಾಹೋರ್: ಮೊನ್ನೆಯಷ್ಟೇ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ (Pakistan Prime Minister) ಜನಾಬ್ ಇಮ್ರಾನ್ ಖಾನ್ ಫರ್ಮಾನು ಹೊರಡಿಸಿ, ನಗೆಪಾಟಲಿಗೀಡಾದ್ದರು. ಇದೀಗ ಜಮಾತ್ ಎ ಇಸ್ಲಾಮಿ ಪಾಕಿಸ್ತಾನದ ನೂತನ ‘ಅರ್ಥಶಾಸ್ತ್ರಜ್ಞ’ ಜನಾಬ್ ಇಮ್ರಾನ್ ಖಾನ್ರನ್ನು ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನದ ಹಣಕಾಸು ಸಂಕಷ್ಟಗಳು ಬೆಟ್ಟದಷ್ಟು ಮಿತಿಮೀರಿದ್ದು ಪ್ರಧಾನಿ ಇಮ್ರಾನ್ ಖಾನ್ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು (international beggar) ಜರಿದಿದೆ. ಅಷ್ಟೇ ಆತ (Imran Khan) ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕುವುದು ಎಂದೂ ಜಮಾಯತ್ ಮುಖ್ಯಸ್ಥ ವ್ಯಾಖ್ಯಾನಿಸಿದ್ದಾರೆ.
ಲಾಹೋರ್ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಜಮಾಯತ್ (Jamat-e-Islami) ಮುಖ್ಯಸ್ಥ ಸಿರಾಜುಲ್ ಹಕ್ (Sirajul-Haq) ಪಾಕಿಸ್ತಾನದ ಸಮಸ್ಯೆಗಳೆಲ್ಲ ಪರಿಹಾರವಾಗಬೇಕೆಂದರೆ ಇಮ್ರಾನ್ ಖಾನ್ ನಿರ್ಗಮನವೊಂದೇ ದಾರಿ ಎಂದಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (International Monetary Fund -IMF) ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲ ಪಡೆಯುತ್ತಿರುವುದನ್ನು ನೋಡಿದರೆ ಆತ (ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್) ನಿಜಕ್ಕೂ ಅಂತಾರಾಷ್ಟ್ರೀಯ ಭಿಕ್ಷುಕನೇ ಸರಿ ಎಂದು ಜಮಾಯತ್ ವ್ಯಾಖ್ಯಾನಿಸಿದೆ. ಪಾಕಿಸ್ತಾನದ ಆರ್ಥಿಕತೆ ಸುಸ್ಥಿಗೆ ತರಲು ಹಿಂದಿನ ಕಿಚಡಿ ಸರ್ಕಾರದಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ತಾನು ಆರ್ಥಿಕತೆಯ ಚಾಂಪಿಯನ್ ಎಂದು ಡಾಯಿ ಕೊಚ್ಚಿಕೊಮಡು ಅಧಿಕಾರಕ್ಕೆ ಬಂದ ಪಿಟಿಐ ನೇತೃತ್ವದಲ್ಲಿ ಇಮ್ರಾನ್ ಖಾನ್ಗೂ ಸಹ ಏನೂ ಮಾಡಲು ಆಗಲಿಲ್ಲ ಎಂದು ಜಮಾತೆ ನಾಯಕರು ಬಣ್ಣಿಸಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ದುಸ್ಥಿತಿ ಹೇರಳವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಈಗಾಗಲೇ ಎರಡು ಮಿನಿ ಬಜೆಟ್ಗಳನ್ನು ಮಂಡಿಸಲಾಗಿದೆ. ದೇಶದ ವ್ಯಾಪಾರ ಕೊರತೆ ತಾಳತಪ್ಪಿದೆ. ಹಣದುಬ್ಬರ ಉಬ್ಬುತ್ತಲೇ ಇದೆ. ಇದನ್ನೆಲ್ಲಾ ಸರಿದೂಗಿಸಲು ಶತಕೋಟಿ ಡಾಲರ್ ಸಾಲ ಎತ್ತುವಳಿ ಪ್ರೋಗ್ರಾಂ ಹಾಕಿಕೊಳ್ಳುವ ಮೂಲಕ ತಾನು ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರೂವ್ ಮಾಡಿದಂತಾಗಿದೆ ಎಂದು ಜಮಾಯತ್ ಹೇಳಿದೆ.