Bengaluru Crime: ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಕಾಲಿಗೆ ಫೈರಿಂಗ್

ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದ ಘಟನೆ ಕೋಣನಕುಂಟೆಯ ನಾರಾಯಣ ನಗರದಲ್ಲಿ ನಡೆದಿದೆ. ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು ಅರೆಸ್ಟ್ ಮಾಡಿದ್ದಾರೆ.

ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ರಾಹುಲ್ ಬಂಧಿಸಲು ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಪೊಲೀಸರು ತೆರಳಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಮೇಲೆ ಡ್ಯಾಗರ್‌ನಿಂದ ಹಲ್ಲೆಗೆ ಯತ್ನಿಸಿ ಎಸ್ಕೆಪ್ ಆಗಲು ರೌಡಿಶೀಟರ್ ರಾಹುಲ್ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಹನುಮಂತನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಪಾಟೀಲ್ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ರೌಡಿ ಶೀಟರ್ ಕುಳ್ಳು ರಿಜ್ವಾನ್ ಸಹಚರನಾಗಿರುವ ಸ್ಟಾರ್ ರಾಹುಲ್, ಪೊಲೀಸರಿಗೆ 19 ಕೇಸ್ನಲ್ಲಿ ಬೇಕಾಗಿದ್ದ ಆರೋಪಿ. ನಗರದ ದಕ್ಷಿಣ ವಿಭಾಗದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧ ವಾರೆಂಟ್ ಸಹ ಜಾರಿ ಆಗಿತ್ತು. ಈ ಹಿನ್ನಲೆ ಈತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಳಿಗ್ಗೆ ಕೊಣನಕುಂಟೆ ಬಳಿ ಇರೋ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೇದೆ ನಿಂಗಪ್ಪ ಮೇಲೆ ಹಲ್ಲೆ ಮಾಡಿ ಎಸ್ಕೆಪ್ ಆಗಲು ಯತ್ನಿಸಿದ್ದಾನೆ. ಆಗ ತಡೆಯಲು ಹೋದ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಪಾಟೀಲ್ ಮೇಲೆ ಕೂಡ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆಂದು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇತ್ತೀಚೆಗೆ ಪತ್ತೆಯಾದ 200 ಕೆಜಿ ಗಾಂಜಾ ಕೇಸ್ನಲ್ಲಿ ಸಹ ಇತನ ಹೆಸರು ಕೇಳಿ ಬಂದಿತ್ತು. ನಗರದಲ್ಲಿ ಸದ್ದಿಲ್ಲದೇ ನಡೆಯುತಿದ್ದ ಗಾಂಜಾ ದಂಧೆಯಲ್ಲಿ ಈತನ ಹೆಸರು ಕೇಳಿ ಬಂದಿದೆ.

ಸಿಮಿಮಾ ಸ್ಟೈಲ್ನಲ್ಲಿ ಪೊಲೀಸರಿಗೆ ಅವಾಜ್
ಪೊಲೀಸರಿಗೆ ನಮ್ಮನ್ನ ಹಿಡಿಯೋಕೆ ಆಗಲ್ಲ ಅಂತ ಆರೋಪಿ ರಾಹುಲ್ ಅವಾಚ್ಯ ಶಬ್ದಗಳಲ್ಲಿ ಅವಾಜ್ ಹಾಕಿದ್ದ. ಜೊತೆಗೆ ಬೇಕರಿ ರಘು ಹತ್ಯೆ ಮಾಡಿಯೇ ಸೆರೆಂಡರ್ ಆಗುವುದು ಅಂತ ತನ್ನ ಬರ್ತಡೇ ದಿನ ಇಸ್ಟಾಗ್ರಾಂ ನಲ್ಲಿ ವಿಡಿಯೋ ಮಾಡಿ ಪೊಲೀಸರಿಗೆ ಓಪನ್ ಚಾಲೆಂಜ್ ಹಾಕಿದ್ದ. ಸೈಕಲ್ ರವಿ ಮತ್ತು ಬೇಕರಿ ರಘು ಇಬ್ಬರ ಅಪೋಸಿಟ್ ಗ್ಯಾಂಗ್ ನಲ್ಲಿ ರಾಹುಲ್ ಇದ್ದ. ಪೊಲೀಸ್ ಸಿಬ್ಬಂದಿ ವಿಡಿಯೋ ನೊಡುತ್ತಿರುವಾಗ್ಲೇ ನಾವು ಕಾಣ್ಸಲ್ಲ ನಮ್ಮ ಆಡಿಯೋ ಮಾತ್ರ ಕೇಳ್ತಾ ಇರ್ಬೇಕು. ಪೊಲೀಸರು ನಮ್ಮನ್ನ ಹಿಡಿಯೋಕೆ ಆಗಲ್ಲ ಅಂತ ಆರೋಪಿ ರಾಹುಲ್ ಪೊಲೀಸರಿಗೆ ಹೇಳಿದ್ದ. ಆರು ತಿಂಗಳ ಹಿಂದೆ ಬೇಕರಿ ರಘು ಹತ್ಯೆಗೆ ಯತ್ನ ಮಾಡಿ ಫೇಲ್ ಆಗಿ ಎಸ್ಕೆಪ್ ಆಗಿದ್ದ. ಸದ್ಯ ಈಗ ಆರೆಸ್ಟ್ ಆಗಿದ್ದಾನೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *