ಭದ್ರಾವತಿಯ ದೇವಾಲಯದಲ್ಲಿನ ಹುಂಡಿ ಕದ್ದಿದ್ದ ನಾಲ್ವರಿಗೆ 4 ವರ್ಷ ಜೈಲು!

ಭದ್ರಾವತಿ : ತಾಲೂಕಿನ ಶಂಕರಘಟ್ಟದ ಮನೆಯೊಂದರ ಕಳ್ಳತನಕ್ಕೆ ವಿಫಲ ಯತ್ನ ಮತ್ತು ವೀರಾಪುರದ ಗುಡಿ ಬಂಡೆ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಮತ್ತು ಆಭರಣ ಕಳವು ಮಾಡಿದ್ದ ನಾಲ್ವರು ಅಪರಾಧಿಗಳಿಗೆ ನಗರದ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಮಿಲನಾ ಅವರು, 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ನೆಲಮಂಗಲದ ವಾಸಿ ರಘು ಯಾನೆ ಬೆಂಗಳೂರು ರಘು, ಭದ್ರಾವತಿ ತಾಲೂಕಿನ ಸಿರಿಯೂರಿನ ಆನಂದ ಯಾನೆ ದೊಡ್ಡ ಆನಂದ, ಆನಂದ ಯಾನೆ ಚಿನ್ನ ಆನಂದ ಹಾಗು ಚನ್ನಗಿರಿ ತಾಲೂಕು ದೊಡ್ಡಘಟ್ಟದ ರಘು ಯಾನೆ ಚಿನ್ನು ಶಿಕ್ಷೆಗೊಳಗಾದವರು.

2017ರಲ್ಲಿಶಂಕರಘಟ್ಟದ ಮನೆಯೊಂದರ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಇವರು, 2018ರಲ್ಲಿ ವೀರಾಪುರದ ಗುಡಿ ಬಂಡೆ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಹೊಡೆದು ಹಣ ಮತ್ತು ದೇವರ ಆಭರಣಗಳನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಮಂಜುನಾಥ್‌ ಮತ್ತು ಅವರ ತಂಡ ನಾಲ್ವರನ್ನು ಬಂಧಿಸಿ, ಕದ್ದ ಮಾಲನ್ನು ವಶಪಡಿಸಿಕೊಂಡಿದ್ದು, ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಪರ ಎಪಿಪಿ ಸಿ.ಮಂಜುನಾಥ್‌ ವಾದಿಸಿದ್ದರು.

ದೇಗುಲ ಹುಂಡಿ ಕಳವು
ಸೋಮವಾರಪೇಟೆ: ದೇವಾಲಯದ ಹುಂಡಿಯನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ. ದೇವಾಲಯದ ಹೊರಗಡೆ ಹುಂಡಿಯನ್ನು ಭದ್ರವಾಗಿ ಇಡಲಾಗಿತ್ತು. ಇಬ್ಬರು ಕಳ್ಳರು ಸೋಮವಾರ ಮಧ್ಯಾಹ್ನ ಆಗಮಿಸಿ ಹುಂಡಿ ಡಬ್ಬವನ್ನು ತೆಗೆದುಕೊಂಡು, ಬೈಕ್‌ನಲ್ಲಿಗ್ರಾಮದ ಮುಖ್ಯ ರಸ್ತೆಯಲ್ಲೇ ಅಬ್ಬೂರುಕಟ್ಟೆ ಕಡೆಗೆ ತೆರಳಿದ್ದಾರೆ.

ಆರ್‌ಸಿಸಿ ಮೇಲೆ ಕಾಫಿ ಕೆಲಸ ಮಾಡುತ್ತಿದ್ದ ಸ್ವರ್ಣಗೌರಿ ದೇವಾಲಯ ಸಮಿತಿ ಅಧ್ಯಕ್ಷ ವೀರೇಶ್‌ ನೋಡಿದ್ದಾರೆ. ಆದರೆ ಅನುಮಾನ ಬಂದಿರಲಿಲ್ಲ. ಸಂಜೆ ಅರ್ಚಕರು ದೇವಾಲಯಕ್ಕೆ ಹೋದಾಗ ಕಳ್ಳತನ ಬೆಳೆಕಿಗೆ ಬಂದಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿ.ಸಿ.ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿ, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹಣ ತೆಗೆದುಕೊಂಡು ಹುಂಡಿಯನ್ನು ಅಬ್ಬೂರುಕಟ್ಟೆಯ ರಸ್ತೆ ಬದಿಯಲ್ಲಿಎಸೆದು ಹೋಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಖಾಲಿ ಹುಂಡಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಶನಿವಾರ ಸೋಮೇಶ್ವರ ದೇವಾಲಯದ ಹೆಂಚು ತೆಗೆದು ಒಳಗಿದ್ದ ಹುಂಡಿಯನ್ನು ಒಡೆದು ಹಣವನ್ನು ಕಳ್ಳತನ ಮಾಡಲಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *