ಬೆಳಗಾವಿಯಲ್ಲಿ ಸಾರ್ಥಕ ಅಧಿವೇಶನದ ನಿರೀಕ್ಷೆ: ಡಿ.4 ರಿಂದ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಸಾಧ್ಯತೆ

ಹೈಲೈಟ್ಸ್‌:

  • ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆ ಜನರದ್ದು.
  • ಈ ವರ್ಷ ಡಿ.4 ರಿಂದ 14 ರವರೆಗೆ ಅಧಿವೇಶನ ನಡೆಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗಿದೆ.
  • ಕಬ್ಬು ಬೆಳೆಯುವ ಪ್ರಮುಖ ಜಿಲ್ಲೆಯಾದ ಬೆಳಗಾವಿಯಲ್ಲಿಈ ಬಾರಿ ಕಬ್ಬಿನ ಇಳುವರಿ ಕುಸಿದಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 12 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ನಾಶವಾಗಿವೆ

ಬೆಳಗಾವಿ: ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರಕಾರ ಸಿದ್ಧತೆ ಆರಂಭಿಸಿದೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆ ಜನರದ್ದು.

ಬೆಳಗಾವಿಯಲ್ಲಿಸುವರ್ಣ ವಿಧಾನಸೌಧ ನಿರ್ಮಿಸಿದ ಉದ್ದೇಶದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡುವುದು ಪ್ರಮುಖವಾದದ್ದು. ಆದರೆ, 11 ವರ್ಷಗಳಿಂದ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗೆಗಿನ ಚರ್ಚೆಯನ್ನೇ ಕಡೆಗಣಿಸಲಾಗುತ್ತಿದೆ.

ಅಧಿವೇಶನದ ಮುಕ್ತಾಯದ ದಿನಗಳಲ್ಲಿ ಔಪಚಾರಿಕವೆಂಬಂತೆ ಒಂದೆರಡು ವಿಷಯ ಚರ್ಚೆಯಾಗುತ್ತದೆ ಹೊರತು ಗಂಭೀರವಾದ ಚರ್ಚೆ ಮತ್ತು ಸಮಸ್ಯೆಗಳ ಪರಿಹಾರದ ಪ್ರಯತ್ನ ನಡೆದೇ ಇಲ್ಲ. ಈ ಬಾರಿ ಡಿಸೆಂಬರ್‌ 4 ರಿಂದ 10 ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರವೇ ಈ ಬಾರಿಯ ಅಧಿವೇಶನದ ಆದ್ಯತೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ತೀವ್ರ ಬರ:

ಬೆಳಗಾವಿ ಜಿಲ್ಲೆಯ ಎಲ್ಲ 15 ತಾಲೂಕುಗಳು ಸೇರಿದಂತೆ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ತೀವ್ರ ಬರ ಆವರಿಸಿದೆ. ಕಬ್ಬು ಬೆಳೆಯುವ ಪ್ರಮುಖ ಜಿಲ್ಲೆಯಾದ ಬೆಳಗಾವಿಯಲ್ಲಿಈ ಬಾರಿ ಕಬ್ಬಿನ ಇಳುವರಿ ಕುಸಿದಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 12 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಬೆಳಗಾವಿ, ಖಾನಾಪುರ, ಕಿತ್ತೂರು ಮೊದಲಾದ ತಾಲೂಕುಗಳಲ್ಲಿ ಭತ್ತದ ಬೆಳೆ ನೆಲ ಕಚ್ಚಿದೆ. ಬರದ ತೀವ್ರತೆಗೆ ರೈತರು ಅಕ್ಷರಶಃ ನಲುಗಿದ್ದಾರೆ. ಉಪ ಆದಾಯಕ್ಕೆ ದಾರಿಯಾಗಿದ್ದ ಹೈನುಗಾರಿಕೆಗೂ ಹಿನ್ನಡೆಯಾಗುತ್ತಿದೆ. ಚರ್ಮ ಗಂಟು ರೋಗದಿಂದ ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸಾರಿಗೆ ಅವ್ಯವಸ್ಥೆ ಮಿತಿ ಮೀರಿದೆ. ನೀರಾವರಿ ಕಾಮಗಾರಿಗಳು ಕುಂಟುತ್ತ ಸಾಗಿವೆ.

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಿಂದ ಬೆಳಗಾವಿ ಜಿಲ್ಲೆಯ ಜನರಿಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅಧಿವೇಶನ ಪ್ರಾರಂಭವಾಗುವ 15 ದಿನ ಮೊದಲಿಂದ ಅಧಿವೇಶನ ಮುಗಿದು ಒಂದು ವಾರದವರೆಗೆ ಬೆಳಗಾವಿಯ ಸರಕಾರಿ ಕಚೇರಿಗಳು ಸಿಬ್ಬಂದಿ, ಅಧಿಕಾರಿಗಳಿಲ್ಲದೇ ಬಣಗುಡುತ್ತವೆ. ಬಹುತೇಕ ಅಧಿಕಾರಿ, ಸಿಬ್ಬಂದಿ ಅಧಿವೇಶನದ ಕರ್ತವ್ಯದಲ್ಲಿರುತ್ತಾರೆ. ಜನ ಸಾಮಾನ್ಯರ ಕಡತಗಳು ಮೂಲೆಗುಂಪಾಗಿರುತ್ತವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರವಾದರೂ ಸಿಕ್ಕರೆ ಇಂಥ ವಿಷಯಗಳು ಗೌಣವಾಗುತ್ತವೆ ಎಂದು ಜಿಲ್ಲೆಯ ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.

ಈ ವರ್ಷ ಡಿ.4 ರಿಂದ 14 ರವರೆಗೆ ಅಧಿವೇಶನ ನಡೆಯುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈಗಾಗಲೇ ಪ್ರಾಥಮಿಕ ಹಂತದ ಸಿದ್ಧತೆಗಳನ್ನು ನಡೆಸಿದ್ದೇವೆ. ಅಧಿವೇಶನಕ್ಕೆ ಬರುವ ಅತಿಥಿಗಳ ವಸತಿ ವ್ಯವಸ್ಥೆಯ ಸಲುವಾಗಿ ಹೋಟೆಲ್‌ ಮಾಲೀಕರ ಸಭೆ ನಡೆಸಲಾಗಿದೆ. ವಾಹನಗಳ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸಜ್ಜುಗೊಳಿಸಲಾಗುತ್ತಿದೆ. ಸರಕಾರದಿಂದ ಅಧಿಕೃತವಾಗಿ ಆದೇಶ ಬಂದ ಬಳಿಕ ಸಿದ್ಧತೆಯನ್ನು ಚುರುಕಾಗಿ ನಡೆಸಲಾಗುತ್ತದೆ,”ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ತಿಳಿಸಿದರು.

ಹಿಂದಿನ ಬಾರಿ ಹುಸಿ

ಕಳೆದ ವರ್ಷದ ಅಧಿವೇಶನದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಅವರು ಉತ್ತರ ಕರ್ನಾಟಕ ಭಾಗದವರಾದ ಹಿನ್ನೆಲೆಯಲ್ಲಿ ಈ ಭಾಗದ ಸಮಸ್ಯೆಗಳ ಗಂಭೀರ ಚರ್ಚೆಯಾಗುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾತ್ತು. ಈ ಬಾರಿ ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರಕಾರದಲ್ಲಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಮುಖ ಸಚಿವರಿದ್ದಾರೆ. ಉತ್ತರ ಕರ್ನಾಟಕದ ಹೆಚ್ಚಿನ ಸಂಖ್ಯೆಯ ಶಾಸಕರೂ ಸರಕಾರದಲ್ಲಿದ್ದಾರೆ. ಹೀಗಾಗಿ ಈ ವರ್ಷವಾದರೂ ಅಧಿವೇಶನದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂಬುದು ಜನರ ಆಶಯ.

ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಬೇಕು. ಬೆಂಗಳೂರಿನ ರಾಜಕೀಯವನ್ನು ಇಲ್ಲಿ ತಂದು ಗುದ್ದಾಡಿದರೆ ಬೆಳಗಾವಿಯ ಅಧಿವೇಶನಕ್ಕೆ ಏನರ್ಥವಿದೆ ? ಈ ಬಾರಿ ತೀವ್ರ ಬರಗಾಲ ಆವರಿಸಿದೆ. ಇಲ್ಲಿನ ನೀರಾವರಿ ಸಮಸ್ಯೆಗಳ ಬಗ್ಗೆ ಪ್ರಸಕ್ತ ಅಧಿವೇಶನದಲ್ಲಿ ಗಂಭೀರ ಚರ್ಚೆಯಾಗಲಿ ಎಂದು ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷಅಶೋಕ ಚಂದರಗಿ, ಹೇಳಿದ್ದಾರೆ.

ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿವೆ. ಇಲ್ಲಿನ ನದಿಗಳ ನೀರಿನ ಸದುಪಯೋಗವಾದರೆ ಬರಗಾಲ ಬಿದ್ದರೂ ತೊಂದರೆಯಾಗುವುದಿಲ್ಲ. ಆದರೆ, ಪ್ರತಿ ಬಾರಿಯೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ. ಈ ಬಾರಿ ಹಾಗಾಗದಿರಲಿ ಎಂ

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *