ದಸರಾ ಹಬ್ಬಕ್ಕೆ ಕೆಂಪು ಸೀರೆಯುಟ್ಟು ಮಿಂಚಿದ ‘ಕಾಂತಾರ’ ಲೀಲಾ; ಸಿಂಗಾರ ಸಿರಿಯೇ ಎಂದ ಫ್ಯಾನ್ಸ್

ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಖುಷಿಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ನಟ-ನಟಿಯರು ಸಹ ಹಬ್ಬಕ್ಕೆ ಚೆನ್ನಾಗಿ ರೆಡಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ಕಾಂತಾರ ನಟಿ ಸಪ್ತಮಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಫೋಟೋ ವೈರಲ್ ಆಗಿದೆ.

‘ಕಾಂತಾರ’ ಚಿತ್ರದಿಂದ ಫೇಮಸ್ ಆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಲುಕ್‌ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ, ದಸರಾ ಹಬ್ಬಕ್ಕೆ ರೆಡಿಯಾಗಿರೋ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

article_image3

ಆರೆಂಜ್ ಸೀರೆ ಹಾಗೂ ಗ್ರೇ ಕಲರ್ ಬ್ಲೌಸ್ ಧರಿಸಿರೋ ನಟಿ ಸುಂದರವಾಗಿ ಕಾಣುತ್ತಿದ್ದಾರೆ. ದೊಡ್ಡ ಜುಮುಕಿ ಹಾಕ್ಕೊಂಡು, ಕೆಂಪು ಬಳೆಗಳನ್ನು ಧರಿಸಿ, ಮಲ್ಲಿಗೆ ಮುಡಿದು ಫೋಟೋಸ್‌ಗೆ ಫೋಸ್ ನೀಡಿದ್ದಾರೆ. ಇದಕ್ಕೆ ದಸರಾ ಹಬ್ಬದ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದಾರೆ.

article_image4

ಕಾಂತಾರಾ ಲೀಲಾಳ ಟ್ರೆಡಿಶನಲ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಯೂಟಿಫುಲ್‌, ಕ್ಯೂಟ್, ಸಿಂಗಾರ ಸಿರಿಯೇ, ವಾವ್‌ ಲುಕ್‌, ಕ್ಯೂಟ್ ಬೇಬಿ, ಡಾರ್ಲಿಂಗ್‌ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋಗೆ ಸಾವಿರಾರು ಲೈಕ್‌ ಹಾಗೂ ಹಾರ್ಟ್ ಎಮೋಜಿಗಳು ಬಂದಿವೆ.

article_image5

ಕಾಂತಾರ’ ಸಿನಿಮಾ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದ ಮೂಲಕ ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಮೊದಲು ಸಿನಿಮಾ ಮಾಡಿದ್ದರೂ ಸಪ್ತಮಿ ಗೌಡ ಕ್ಲಿಕ್ ಆಗಿದ್ದು ‘ಕಾಂತಾರ’ ಚಿತ್ರದ ಮೂಲಕ. ಕಾಂತಾರ ಪಾತ್ರಕ್ಕಾಗಿ ನಟಿ ತಿಂಗಳ ಕಾಲ ವರ್ಕ್​ಶಾಪ್ ಕೂಡಾ ಎಟೆಂಡ್ ಮಾಡಿದ್ದರು.

article_image6

ಕಾಂತಾರ’ ಸಿನಿಮಾ ನಟಿ ಸಪ್ತಮಿ ಗೌಡ ಅವರು ಲೀಲಾ ಪಾತ್ರದ ಮೂಲಕ ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಮೊದಲು ಸಿನಿಮಾ ಮಾಡಿದ್ದರೂ ಸಪ್ತಮಿ ಗೌಡ ಕ್ಲಿಕ್ ಆಗಿದ್ದು ‘ಕಾಂತಾರ’ ಚಿತ್ರದ ಮೂಲಕ. ಕಾಂತಾರ ಪಾತ್ರಕ್ಕಾಗಿ ನಟಿ ತಿಂಗಳ ಕಾಲ ವರ್ಕ್​ಶಾಪ್ ಕೂಡಾ ಎಟೆಂಡ್ ಮಾಡಿದ್ದರು.

article_image7

2019-20ರಲ್ಲಿ ಜಗತ್ತಿಗೆ ಅಪ್ಪಳಿಸಿದ್ದ ಮಹಾಮಾರಿ ಕೋವಿಡ್ ವ್ಯಾಕ್ಸಿನ್ ಕುರಿತಾದ ಚಿತ್ರ ‘ದಿ ವ್ಯಾಕ್ಸಿನ್ ವಾರ್‌’ನಲ್ಲಿಯೂ ಸಪ್ತಮಿ ಗೌಡ ನಟಿಸಿದ್ದರು. ಇದು ಇತ್ತೀಚಿಗಷ್ಟೇ ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಇದನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *