ರಜನಿಕಾಂತ್ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ಪಡೆದ ಮೊದಲ ಸಂಬಳ ಎಷ್ಟು?

Rajinikanth salary as bus conductor : ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಶುರು ಮಾಡಿದ ಈ ಸೂಪರ್ ಸ್ಟಾರ್ ತಮ್ಮ ಅಭಿನಯದಿಂದ ಮತ್ತೆ ಮತ್ತೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಲೈವಾ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್‌ ಚಲನಚಿತ್ರೋದ್ಯಮಕ್ಕೆ ಸೇರುವ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಡಿಸೆಂಬರ್ 12, 1950 ರಂದು ಬೆಂಗಳೂರಿನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದರು. ರಜನಿ ಬೆಂಗಳೂರು ನಗರದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು. ದಿವಂಗತ ತಮಿಳು ನಿರ್ದೇಶಕ ಕೆ ಬಾಲಚಂದರ್ ಅವರ ಕಲೆಯನ್ನು ಗುರುತಿಸಿದರು. ಶಿವಾಜಿ ರಾವ್ ಗಾಯಕ್ವಾಡ್ ಅವರಿಗೆ ರಜನಿಕಾಂತ್ ಎಂದು ನಾಮಕರಣ ಮಾಡಿ ಸಿನಿಲೋಕಕ್ಕೆ ಪರಿಚಯಿಸಿದರು. 1975 ರಲ್ಲಿ ಅಪೂರ್ವ ರಾಗಂಗಲ್ ಎಂಬ ಹಿಟ್ ಚಿತ್ರದ ಮೂಲಕ ರಜನಿ ಸಿನಿ ಜರ್ನಿ ಶುರುವಾಯಿತು. ನಂತರ, ನಟ ಭಾರತೀಯ ಚಿತ್ರರಂಗದ ಮಹಾನ್‌ ನಾಯಕನಾಗಿ ಬೆಳೆದರು. ಅವರು ಮಾಡಿದ ಹಲವಾರು ಸಿನಿಮಾಗಳು ಸೂಪರ್‌ ಹಿಟ್‌ ಆದವು. ಸೂಪರ್‌ ಸ್ಟಾರ್‌ ಎಂಬ ಬಿರುದು ಪಡೆದರು.

ರಜನಿಕಾಂತ್‌ ಸದ್ಯ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು. ನಟ ಇತ್ತೀಚೆಗೆ ಬಿಡುಗಡೆಯಾದ ಜೈಲರ್‌ಗಾಗಿ 210 ಕೋಟಿ ಸಂಭಾವನೆ ಪಡೆದಿದ್ದಾರೆ. ಅಲ್ಲದೇ ರಜನಿಕಾಂತ್‌ 430 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ.

ಇಷ್ಟೆಲ್ಲ ಐಷಾರಾಮಿ ಜೀವನ ನಡೆಸುವ ರಜನಿಕಾಂತ್‌  ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ಅವರ ಸಂಬಳ ಎಷ್ಟಿತ್ತು ಎಂದು ತಿಳಿದರೆ ನೀವು ನಿಜಕ್ಕೂ ಶಾಕ್‌ ಆಗುವಿರಿ. ಇತ್ತೀಚೆಗಷ್ಟೆ ತಲೈವಾ ಬೆಂಗಳೂರಿಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟು ಜಯನಗರ, ಚಾಮರಾಜಪೇಟೆ, ಗಾಂಧಿ ಬಜಾರ್‌ನಲ್ಲಿ ಓಡಾಡಿ ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿದರು. ಜಯನಗರ ಬಸ್ ಡಿಪೋ-4ಕ್ಕೆ ಭೇಟಿ ಕೊಟ್ಟು ಸಿಬ್ಬಂದಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ರಜನಿಕಾಂತ್ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಮಾರ್ಕೆಟ್‌ನಿಂದ ಶ್ರೀನಗರ ಮಾರ್ಗವಾಗಿ ಓಡಾಡುತ್ತಿದ್ದ 10A ಸಂಖ್ಯೆಯ ಬಸ್‌ನಲ್ಲಿ ಕಂಡಕ್ಟರ್‌ ಆಗಿ ರಜನಿ ಕೆಲಸ ಮಾಡಿದ್ದಾರೆ.  ರಜನಿಕಾಂತ್ ಬಸ್ ಕಂಡೆಕ್ಟರ್ ಆಗಿದ್ದಾಗ ಪಡೆದ ಮೊದಲ ಸಂಬಳ 700 ರೂಪಾಯಿ ಅಂತೆ. ಈ ವಿಚಾರವನ್ನು ರಜನಿಕಾಂತ್‌ ಅವರ ಸಹೋದರ ಸತ್ಯ ನಾರಾಯಣ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ರಜನಿಕಾಂತ್ ಈಗ ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುವರು. ಜೀರೋ ಟು ಹೀರೋ ಎಂಬ ಪದಕ್ಕೆ ರಜನಿ ನಿಜವಾದ ಉದಾಹರಣೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *