ಈ ಏಳು ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಆನ್ಲೈನ್ ಆಫ್ ಲೈನ್ ಎರಡರಲ್ಲೂ ಸಿಗುವುದು ಭರ್ಜರಿ ಕ್ಯಾಶ್ ಬ್ಯಾಕ್

Credit Card Cashback : ಹಬ್ಬದ ಸೀಸನ್ ಪ್ರಾರಂಭವಾದಂತೆ,  ಆಫರ್ ಗಳು ಮತ್ತು ರಿಯಾಯಿತಿಗಳು  ಕೂಡಾ ಸದ್ದು ಮಾಡುತ್ತಿವೆ.  ದೀಪಾವಳಿಗಾಗಿ ಶಾಪಿಂಗ್ ಮಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ವಾಡಿಕೆ. ನಿಮ್ಮ ನೆಚ್ಚಿನ ಗ್ಯಾಜೆಟ್ ಅಥವಾ ಹಬ್ಬದ ಬಟ್ಟೆಗಳನ್ನು ಖರೀದಿಸುವಾಗ ಎಲಿ ಆಫರ್ ಗಳಿವೆ? ಎಲ್ಲಿ ಡಿಸ್ಕೌಂಟ್ ಸೇಲ್ ಇದೆ ಎನ್ನುವುದನ್ನು ಗಮನಿಸುತ್ತೇವೆ. ಆಫರ್ ಇದ್ದಾಗ ಶಾಪಿಂಗ್ ಮಾಡಿದರೂ ಹಣ ಉಳಿಸುವುದು ಸಾಧ್ಯವಾಗುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ  ಶಾಪಿಂಗ್ ಮಾಡುವಾಗ ಕೆಲವು ಕಾರ್ಡ್ ಗಳನ್ನು ಬಳಸಿದರೆ, ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮೂಲಕ, ನಮಗೆ ಬೇಕಾದ ರೀತಿಯಲ್ಲಿ ಖರೀದಿಯೂ ಮಾಡಬಹುದು, ಹಣ ಕೂಡಾ ಉಳಿಸಬಹುದು.

ಖರೀದಿ ಮೇಲೆ ಸಿಗುವುದು ಕ್ಯಾಶ್‌ಬ್ಯಾಕ್ :
ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿ  ಖರೀದಿಸಿದಾಗ, ಆ ವಸ್ತುವಿನ ಬೆಲೆಯ ಶೇಕಡಾವಾರು ಮೊತ್ತವನ್ನು ಕ್ಯಾಶ್‌ಬ್ಯಾಕ್ ಆಗಿ ಪಡೆಯಬಹುದು. ಹೆಚ್ಚಿನ ಕ್ರೆಡಿಟ್ ಕಾರ್ಡ್ ಪೂರೈಕೆದಾರರು ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುವ ಖಾತೆಗೆ ನೀವು ಗಳಿಸಿದ ಮೊತ್ತವನ್ನು ಠೇವಣಿ ಮಾಡುತ್ತಾರೆ.

ಆನ್‌ಲೈನ್, ಆಫ್‌ಲೈನ್ ಶಾಪಿಂಗ್‌ ಮಾಡಿದರೂ ಸಿಗುವುದು ಕ್ಯಾಶ್‌ಬ್ಯಾಕ್‌: 
Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್
ಅಮೆಜಾನ್ ICICI ಕ್ರೆಡಿಟ್ ಕಾರ್ಡ್
ರಿಲಯನ್ಸ್ SBI ಕಾರ್ಡ್
ರಿಲಯನ್ಸ್ SBI ಕಾರ್ಡ್ ಪ್ರೈಮ್
Myntra Kotak ಕ್ರೆಡಿಟ್ ಕಾರ್ಡ್
Swiggy HDFC ಕ್ರೆಡಿಟ್ ಕಾರ್ಡ್
ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್

ಇದೀಗ ಹಬ್ಬದ ಹಿನ್ನೆಲೆಯಲ್ಲಿ ಬಹಳಷ್ಟು ಆನ್ಲೈನ್ ಸೈಟ್ ಗಳು ಆಫರ್ ಘೋಷಿಸಿವೆ. ಈ ಸೈಟ್ ಗಳಲ್ಲಿ ಭಾರೀ ರಿಯಾಯಿತಿಯೊಂದಿಗೆ ಖರೀದಿ ಮಾಡುವುದು ಸಾಧ್ಯವಾಗುತ್ತದೆ. ಜೊತೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡಾ ಸೇರಿಕೊಂಡರೆ ನೀವು ಖರೀದಿಸಬೇಕು ಎಂದುಕೊಂಡಿರುವ ವಸ್ತು ಅತಿ ಕಡಿಮೆ ಬೆಲೆಗೆ ನಿಮ್ಮದಾಗುವುದು ಸಾಧ್ಯವಾಗುತ್ತದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *