ಯಾವುದೇ ಮ್ಯಾಚ್ ಮಿಸ್ ಮಾಡೋಲ್ಲ ಬಿಲಿಯನೇರ್‌ ಅಂಬಾನಿ ಫ್ಯಾಮಿಲಿ, ಕ್ರಿಕೆಟ್‌ ಜೊತೆ ಇರೋ ನಂಟೇನು?

ಭಾರತದ ಪಾಲಿಗೆ ಕ್ರಿಕೆಟ್ ಎಂಬುದು ಕೇವಲ ಆಟವಲ್ಲ. ಬದಲಿಗೆ ಭಾವನೆಯಾಗಿದೆ. ಅದರಲ್ಲೂ ವಿಶ್ವಕಪ್‌ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುವಂತೆ ಮಾಡಿದೆ. ಪ್ರತಿ ಮ್ಯಾಚ್‌ಗಳಲ್ಲಿ ನಾವು ಅಂಬಾನಿ ಕುಟುಂಬ ಸದಸ್ಯರನ್ನು ನೋಡಬಹುದು. ಇಷ್ಟಕ್ಕೂ ಅಂಬಾನಿ ಫ್ಯಾಮಿಲಿಗೆ ಕ್ರಿಕೆಟ್‌ ಜೊತೆ ಇರೋ ನಂಟೇನು?

article_image1

ವಿಶ್ವಕಪ್ ಪಂದ್ಯಾವಳಿಗಾಗಿ  ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರತಿ ವಿಜಯವನ್ನು ವೈಯಕ್ತಿಕ ಮೈಲಿಗಲ್ಲಿನಂತೆ ಆಚರಿಸುತ್ತಿದ್ದಾರೆ. ಜನಸಾಮಾನ್ಯರಿಂದ ತೊಡಗಿ ಸಿನಿಮಾ ನಟ-ನಟಿಯರು, ಕ್ರೀಡಾ ತಾರೆಯರು, ಉದ್ಯಮಿಗಳು ಸಹ ಮ್ಯಾಚ್‌ಗಳಲ್ಲಿ ಕಾಣಿಸಿ ಕೊಳ್ಳುತ್ತಾರೆ. ಹೀಗೆ ಪ್ರತಿ ಮ್ಯಾಚ್‌ಗಳಲ್ಲಿ ನಾವು ಅಂಬಾನಿ ಕುಟುಂಬ ಸದಸ್ಯರನ್ನು ನೋಡಬಹುದು.

article_image2

ನೀತಾ ಅಂಬಾನಿ ‘ನಮ್ಮದು ಕ್ರಿಕೆಟ್ ಗೀಳಿನ ಕುಟುಂಬ’ ಎಂದು ಹೇಳುತ್ತಾ, ತನ್ನ, ಆಕಾಶ್ ಮತ್ತು ಶ್ಲೋಕಾ ಮೆಹ್ತಾಗೆ ಕ್ರಿಕೆಟ್‌ ಆಟದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೊವೊಂದರಲ್ಲಿ, ನೀತಾ ಅಂಬಾನಿ, ತಮ್ಮ ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಸೇರಿದಂತೆ ಅವರ ಕುಟುಂಬದ ಸದಸ್ಯರಿಗೆ ಕ್ರಿಕೆಟ್ ಬಗ್ಗೆ ಕ್ರೇಜ್‌ ಇರುವುದನ್ನು ಒಪ್ಪಿಕೊಂಡಿದ್ದಾರೆ.

article_image3

ಬಿಲಿಯನೇರ್‌ ಅಂಬಾನಿ ಕುಟುಂಬವು ಈಗಾಗಲೇ ಎಲ್ಲಾ ರೀತಿಯ ವ್ಯವಹಾರಗಳಲ್ಲಿ ತೊಡಗಿದೆ. ಪೆಟ್ರೋಕೆಮಿಕಲ್ಸ್, ನೈಸರ್ಗಿಕ ಅನಿಲ, ಚಿಲ್ಲರೆ ವ್ಯಾಪಾರ, ದೂರಸಂಪರ್ಕ, ಸಮೂಹ ಮಾಧ್ಯಮ ಮತ್ತು ಜವಳಿಯಲ್ಲಿ ಛಾಪು ಮೂಡಿಸಿದೆ. ಹೀಗಾಗಿ, ಭಾರತೀಯ ಸಂಸ್ಕೃತಿ ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ಹೆಜ್ಜೆ ಹಾಕುವ ಮೂಲಕ, ಅಂಬಾನಿಗಳು ನಿಜವಾಗಿಯೂ ದೊಡ್ಡ ಕೆಲಸವನ್ನು ಮಾಡುತ್ತಿದ್ದಾರೆ.

article_image4

ಇದಲ್ಲದೆ, ಪದೇ ಪದೇ, ಅವರು ತಮ್ಮ ಸುತ್ತ ನಡೆಯುವ ವಿವಿಧ ಘಟನೆಗಳ ಬಗ್ಗೆ ತಮ್ಮ ಅಪಾರ ಆಸಕ್ತಿಯನ್ನು ತೋರಿಸಿದ್ದಾರೆ. ಅವುಗಳಲ್ಲಿ ಒಂದು ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅವರ ಉಪಸ್ಥಿತಿ. ಕ್ರೀಡೆಯ ಮೇಲಿನ ಅವರ ಪ್ರೀತಿಯನ್ನು ಸಾಬೀತುಪಡಿಸುತ್ತದೆ.

article_image5

ಅಂಬಾನಿ ಫ್ಯಾನ್ಸ್ ಪೇಜ್‌ವೊಂದರಲ್ಲಿ ನೀತಾ ಅಂಬಾನಿ ಕ್ರಿಕೆಟ್‌ ಕ್ರೇಜ್‌ ಬಗ್ಗೆ ಹೇಳಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಅವರು ತಮ್ಮ ಕುಟುಂಬದ ಕ್ರಿಕೆಟ್ ಗೀಳಿನ ಬಗ್ಗೆ ಮಾತನಾಡಿದ್ದಾರೆ.

article_image6

ವೀಡಿಯೊದ ಆರಂಭದಲ್ಲಿ, ನೀತಾ ಅವರು ಆರಂಭದಲ್ಲಿ, ಅವರು ಮತ್ತು ಅವರ ಹಿರಿಯ ಮಗ ಆಕಾಶ್ ಅಂಬಾನಿ ಮಾತ್ರ ಕ್ರೀಡೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದರು. ಆದರೆ ನಂತರದ ದಿನಗಳಲ್ಲಿ ಪತಿ ಮುಕೇಶ್ ಅಂಬಾನಿ ಕೂಡ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.

article_image7

ಇದಲ್ಲದೆ ನೀತಾ ಅಂಬಾನಿ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಸಹ ಯಾವುದೇ ಮ್ಯಾಚ್‌ನಲ್ಲಿ ಭಾಗವಹಿಸುವುದನ್ನು ಮಿಸ್ ಮಾಡುವುದಿಲ್ಲ. ಪತಿ ಆಕಾಶ್ ಜೊತೆಗೆ ಪಂದ್ಯಕ್ಕೆ ಹಾಜರಾಗಿರುತ್ತಾರೆ. .

article_image8

ಇತ್ತೀಚಿಗೆ ರಣಬೀರ್‌ ಕಪೂರ್, ಜಾನ್‌ ಅಬ್ರಹಾಂ ಮೊದಲಾದವರೊಂದಿಗೆ ಕುಳಿತು ಮ್ಯಾಚ್ ನೋಡುವ, ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಂವಾದ ಮಾಡುವ ವೀಡಿಯೋ ವೈರಲ್ ಆಗಿತ್ತು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *