ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗುವ ಬಗ್ಗೆ ಮಹತ್ವದ ಮಾಹಿತಿ!
ಬಿಜೆಪಿ 5 ರಾಜ್ಯಗಳ ಚುನಾವಣೆ ಅಖಾಡದಲ್ಲಿ ಭರ್ಜರಿ ಗೆಲುವು ಸಾಧಿಸಿದೆ, ಈ ಸಂದರ್ಭದಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗುತ್ತಾರಾ? ಅನ್ನೋ ಪ್ರಶ್ನೆ ಕೂಡ ಸಂಚಲನ ಸೃಷ್ಟಿ ಮಾಡಿತ್ತು. ಅದ್ರಲ್ಲೂ ನಿನ್ನೆ ಹುಬ್ಬಳ್ಳಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದರು. ಈಗ ಸ್ವತಃ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಒಂದ್ಕಡೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಎಲೆಕ್ಷನ್ ಎದುರಾಗಿತ್ತು. ಇನ್ನೊಂದ್ಕಡೆ ಮತ್ತೊಬ್ಬರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕನಿಷ್ಠ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು. ಹೀಗೆ ಸಾಲು ಸಾಲು ವಿವಾದದ ನಡುವೆ ಬಿಜೆಪಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಹೀನಾಯ ಸೋಲು ಕಂಡಿತ್ತು. ಹೀಗಿದ್ದಾಗಲೇ ಮತ್ತೆ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಬರ್ತಾರೆ ಅನ್ನೋ ಸುದ್ದಿ ಹಬ್ಬಿದ್ದು, ತಾವು ಬಿಜೆಪಿಗೆ ವಾಪಸ್ ಹೋಗುವ ಬಗ್ಗೆ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ವಾಪಸ್?
ಹೌದು, ಇಂದು ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಬಿಜೆಪಿಯ ಮಾಜಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ತಾವು ಬಿಜೆಪಿಗೆ ವಾಪಸ್ ಹೋಗುತ್ತಿರುವ ಮಾತುಗಳಿಗೆ ಉತ್ತರ ನೀಡಿದ್ದಾರೆ. ಇದೇ ಸಮಯದಲ್ಲಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೂ ತಿರುಗೇಟು ನೀಡಿದ್ದಾರೆ. ಈ ಮೂಲಕ ಲೋಕಸಭೆ ಸಮಯದಲ್ಲೇ ಈಗ ಕರ್ನಾಟಕ ಬಿಜೆಪಿಗೆ ಮತ್ತೊಂದು ಶಾಕ್ ಕೂಡ ಎದುರಾಗಿದೆ. ಹಾಗಾದರೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ…
ತಮ್ಮ ಬಿಜೆಪಿ ವಾಪಸ್ ಬಗ್ಗೆ ಮಾತನಾಡಿರುವ ಜಗದೀಶ್ ಶೆಟ್ಟರ್ ಕಡ್ಡಿ ತುಂಡು ಮಾಡಿದ ರೀತಿ ಹೇಳಿಕೆ ನೀಡಿದ್ದಾರೆ. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಲ್ಲ ಎಂದಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್. ಈ ಮೂಲಕ ಈಶ್ವರಪ್ಪ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ಹಾಗೆ ನನ್ನನ್ನ ಕೆ.ಎಸ್. ಈಶ್ವರಪ್ಪ ಭೇಟಿ ಆಗೋ ಅವಶ್ಯಕತೆ ಇಲ್ಲ. ಈವರೆಗೂ ನನ್ನ ಅವರು ಭೇಟಿ ಮಾಡಿಲ್ಲ ಭೇಟಿ ಆಗೋ ಅವಶ್ಯಕತೆ ಇಲ್ಲ. ಹೀಗೆ ಮಾತನಾಡಿ ಪಕ್ಷ ಬಿಟ್ಟು ಹೋಗೋರನ್ನ ಅವರು ಕನ್ಫ್ಯೂಸ್ ಮಾಡುತ್ತಿದ್ದಾರೆ ಅಂತಾ ಈಶ್ವರಪ್ಪ ವಿರುದ್ಧ ಜಗದೀಶ್ ಶೆಟ್ಟರ್, ಆಕ್ರೋಶ ಕೂಡ ಹೊರಹಾಕಿದರು.

ನಾನು ಅಪಮಾನದಿಂದ ಹೊರಗೆ ಬಂದಿದ್ದೇನೆ
ಹಾಗೆ ತಮ್ಮ ಮಾತು ಮುಂದುವರಿಸಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್, ನಾನು ಅಪಮಾನದಿಂದ ಹೊರಗೆ ಬಂದಿದ್ದೇನೆ. ಒಂದು ಸಣ್ಣ MLA ಟಿಕೆಟ್ ಅಂತಾ ಅವರೆಲ್ಲಾ ಹೇಳುತ್ತಾರೆ, ಆದರೆ ಒಂದು ಸಣ್ಣ ಎಂಎಲ್ಎ ಟಿಕೆಟ್ ಕೊಡಸೋದಕ್ಕೆ ಕೂಡ ನಿಮ್ಮ ಕೈಲಿ ಆಗಲಿಲ್ಲ. ಹಾಗೆ ನಿಮಗೂ ಟಿಕೆಟ್ ಸಿಗ್ಲಿಲ್ಲ ಅಂತ ಕೆ.ಎಸ್. ಈಶ್ವರಪ್ಪಗೆ, ಶೆಟ್ಟರ್ ತಿರುಗೇಟು ನೀಡಿದರು. ಅಲ್ಲದೆ ಅಡ್ವಾಣಿ ಹಾಗೂ ವಾಜಪೇಯಿ ಅವರ ಕಾಲದ ಬಿಜೆಪಿ ಇದೀಗ ಉಳಿದಿಲ್ಲ. ಹೀಗಾಗಿ ಸಿದ್ಧಾಂತ ಮಾತಾಡೋದನ್ನು ಈಶ್ವರಪ್ಪ ಬಿಟ್ಟು ಬಿಡಲಿ ಅಂತಾ ಶೆಟ್ಟರ್ ಹೇಳಿದರು.
ಯಡಿಯೂರಪ್ಪ & ಬೊಮ್ಮಾಯಿ ಮಾತನಾಡಲಿ
ಮಾತು ಮುಂದುವರಿಸಿ ‘ಕರ್ನಾಟಕ ಬಿಜೆಪಿ ಉದ್ದಾರ ಆಗೋಕೆ ಸಾಧ್ಯ ಇಲ್ಲ. ದಿನಕ್ಕೆ ಒಬ್ಬರು ಮಾತಾನಾಡ್ತಾ ಇದ್ದಾರೆ. ಬಿಜೆಪಿ ರಿಪೇರಿ ಆಗೋಕೆ ಆಗಲ್ಲ. ಯಡಿಯೂರಪ್ಪ, ಬೊಮ್ಮಾಯಿ ಈಗ ಮಾತಾಡಬೇಕು. ಸೋಲಿಸೋದಕ್ಕೆ ಹಣ ಕೊಟ್ಟಿದಾರೆ ಮತ್ತು ಬ್ಲಾಕ್ ಮೇಲ್ ಮಾಡಿದ್ದರು ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಯಾಕೆ ಯಡಿಯೂರಪ್ಪ & ಬೊಮ್ಮಾಯಿ ಮಾತಾಡ್ತಿಲ್ಲ? ವೈಯಕ್ತಿಕ ಹಿತಾಸಕ್ತಿ ಕಾರಣಕ್ಕಾಗಿ ನನಗೂ ಟಿಕೆಟ್ ತಪ್ಪಿಸಿದ್ದರು ಯಾರದ್ದೋ ಹಿತಾಸಕ್ತಿಗೋಸ್ಕರ ನನಗೆ ಟಿಕೆಟ್ ತಪ್ಪಿಸಿ ಬಿಟ್ಟರು. ನಾನು ಕಾಂಗ್ರೆಸ್ ಬಿಟ್ಟು, ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್.