BBK 10: ಕಿಚನ್ ಏರಿಯಾದಲ್ಲಿ ಕಾರ್ತಿಕ್-ಸಂಗೀತಾ ಮಧ್ಯೆ ಮತ್ತೆ ಕಿರಿಕ್! ದೊಡ್ಮನೆಯಲ್ಲಿ ನಡೆದಿದ್ದೇನು?
Sangeetha And Karthik: ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ವಿನಯ್ ಗೌಡ ಜೊತೆಗೆ ಇದ್ದು ತಮ್ಮ ಆಟವನ್ನು ಮರೆತಿದ್ದಾರೆ. ಚೆನ್ನಾಗಿ ಆಡುತ್ತಿದ್ದ ಕಾರ್ತಿಕ್ ಈಗ ಮೌನವಾಗಿದ್ದಾರೆ ಅಂತ ಸಂಗೀತಾ ಹೇಳಿದ್ದರು. ಇದಕ್ಕೆ ಕಾರ್ತಿಕ್‌ಗೆ ಸಿಟ್ಟು ಬಂದು ಸಂಗೀತಾಗೆ, ನಿನ್ನ ವಿಚಾರಕೋನವೇ ಮೂರ್ಖತನ, ನಾನು ಎಲ್ಲರ ಜೊತೆ ಚೆನ್ನಾಗಿದ್ದೇನೆ, ಚೆನ್ನಾಗಿರೋಣ ಅಂತ ಅಂದುಕೊಂಡಿದ್ದೇನೆ ಎಂದು ಹೇಳಿದರೂ ಕೂಡ ಸಂಗೀತಾ ಅರ್ಥ ಮಾಡಿಕೊಳ್ತಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಒಂದಷ್ಟು ಚರ್ಚೆ ನಡೆದಿದ್ದು, ಆಗ ಕಾರ್ತಿಕ್ ಸಂಗೀತಾಗೆ ಸ್ಟುಪ್ಪಿಡ್ ಎಂದು ಬೈದಿದ್ದಾರೆ. ಇನ್ನು ಡ್ರೋನ್ ಪ್ರತಾಪ್ ಬಳಿ ಸಂಗೀತಾ ಪದೇ ಪದೇ ಕಾರ್ತಿಕ್, ತನಿಷಾ ಬಗ್ಗೆಯೇ ಮಾತನಾಡಿದ್ದಾರೆ.
ಸಂಗೀತಾ “ಮುಂಚೆ ನಾನು ನೋಡುತ್ತಿದ್ದ ಕಾರ್ತಿಕ್‌ಗೂ, ಈಗ ಕಾಣ್ತಿರೋ ಕಾರ್ತಿಕ್‌ಗೂ ತುಂಬ ವ್ಯತ್ಯಾಸ ಆಗ್ತಿದೆ. ನೀವು ನಿಮ್ಮ ತನವನ್ನು ಬಿಡುತ್ತಿದ್ದೀರಿ. ವಿನಯ್ ಅವರ ಹಿಂದೆ ಹೋಗುತ್ತಿದ್ದೀರಿ” ಎಂದು ಹೇಳಿದ್ದಾರೆ. ಅದಕ್ಕೆ ಕಾರ್ತಿಕ್ “ಎಲ್ಲವೂ ಜೊತೆ ಚೆನ್ನಾಗಿದ್ದಾಗ ಚೆನ್ನಾಗಿಯೇ ಇರಲಿ ಅಂತ ನಾನು ಅಂದುಕೊಳ್ತೀನಿ. ಸಮಸ್ಯೆ ಆದಾಗ ಅದರ ಬಗ್ಗೆ ಮಾತಾಡ್ತೀನಿ. ಅವರ ಕಡೆಯಿಂದ ನನಗೆ ಸಮಸ್ಯೆ ಆದಾಗ ಹೇಳ್ತೀನಿ. ಬಹುತೇಕ ಟೈಮ್ ನೀನು ಟಾಂಟ್ ಮಾಡುತ್ತಿರುವಾಗ ಏನೋ ವಿಷಯ ಹೇಳೋಕೆ ಬಂದಾಗ ಏನೋ ಅರ್ಥ ಮಾಡಿಕೊಳ್ತೀಯಾ” ಅಂತ ಹೇಳಿದರು.
ಬಳಿಕ ಕಾರ್ತಿಕ್, “ಇಬ್ಬರು ಚೆನ್ನಾಗಿ ಮಾತಾಡ್ತಿದ್ದರೆ ಅದಿಕ್ಕೆ ಉರಿದುಕೊಂಡರೆ ಏನು ಮಾಡಲಿ? ನಿನಗೆ ಆಗಲ್ಲ ಅಂತ ಅಂದರೆ ನಾನು ಮಾತನಾಡಬಾರದಾ?” ಎಂದು ಹೇಳಿದರು. ಆಗ ತನಿಷಾ “ಮಹತ್ವ ಕಮ್ಮಿ ಆಗ್ತಿದೆ ಅಂತ ಅಷ್ಟೇ” ಎಂದಿದ್ದಾರೆ. ಅದಕ್ಕೆ ಕಾರ್ತಿಕ್ “ನನಗೆ ಇಷ್ಟ ಆಗಿಲ್ಲ ಅಂದರೆ ಇಷ್ಟ ಆಗಿಲ್ಲ ಅಷ್ಟೇ. ಕೆಲವು ಕೆಲಸಗಳು ನನಗೆ ಇಷ್ಟ ಆಗಲ್ಲ, ಮಹತ್ವವನ್ನು ಕೊಡಲ್ಲ. ಹಾಗಂದ ಮಾತ್ರಕ್ಕೆ ನಾನು ಬೇರೆಯವರಿಗೆ ಮಹತ್ವ ಕೊಡ್ತೀನಿ ಅಂತ ಅರ್ಥ ಅಲ್ಲ” ಎಂದು ಹೇಳಿದ್ದಾರೆ. ಸಂಗೀತಾ ತಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಲು ಈಗ ಡ್ರೋನ್ ಪ್ರತಾಪ್ ಒಬ್ಬರೇ ಉಳಿದುಕೊಂಡಿದ್ದು, ಹಾಗಾಗಿ ಪ್ರತಿ ವಿಷಯವನ್ನು ಪ್ರತಾಪ್ ಬಳಿ ಚರ್ಚೆ ಮಾಡ್ತಿದ್ದಾರೆ.
ಸಂಗೀತಾ “ನನ್ನ ಜೊತೆ ಕಾರ್ತಿಕ್ ಕೆಟ್ಟದಾಗಿ ಮಾತಾಡ್ತಾರೆ. ಸ್ಟುಪ್ಪಿಡ್ ಅಂತ ಹೇಳಿದ್ರು. ನಾನು ಜಗಳ ಮಾಡದೆ ಸುಮ್ಮನೆ ಬಂದರೆ ಜಾಸ್ತಿ ಬೇಸರ ಆಗತ್ತೆ. ಕಾರ್ತಿಕ್, ತನಿಷಾ ಅವರು ಮಾತೆತ್ತಿದ್ದರೆ ಜಗಳಕ್ಕೆ ಬರುತ್ತಾರೆ. ಅವರಿಗೆ ಏನು ಸಮಸ್ಯೆ ಇದೆ? ಕಾರ್ತಿಕ್ ಅವರು ನನ್ನ ಮಾತನ್ನು ಬೇರೆ ಥರ ತಗೊಳ್ತಾರೆ. ನಾನು ಏನೇ ಹೇಳಿದ್ರೂ ಕಾರ್ತಿಕ್‌ಗೆ ಅರ್ಥ ಆಗಲ್ಲ, ಅವರಿಗೆ ಸಿರಿ ಮೇಡಂ ಹೇಳಿದರೆ ಮಾತ್ರ ಅರ್ಥ ಆಗತ್ತೆ. ನಾನು ಏನಾದರೂ ಹೇಳೋಕೆ ಬಂದರೆ ಡಾಮಿನೇಟ್ ಥರ ಕಾಣಸ್ತೀನಿ. ವಿನಯ್ ಗೌಡ ಅವರು ತಮ್ಮ ತಂತ್ರದ ಪ್ರಕಾರವೇ ಹೋಗ್ತಿದ್ದಾರೆ. ಎಲ್ಲಿ ಏನೇ ಆದರೂ ವಿನಯ್ ಅವರು ಇದ್ದೇ ಇರುತ್ತಾರೆ. ವಿನಯ್ ಜೊತೆ 5-6 ಜನರು ಇದ್ದಾರೆ. ವಿನಯ್ ಅವರು ಒಬ್ಬರಿಲ್ಲ ಅಂದರೆ ಆ ಜಾಗದಲ್ಲಿ ಇನ್ನೊಬ್ಬರನ್ನು ಇಟ್ಕೊಳ್ತಾರೆ. ಇದನ್ನು ಅವರು ಚೆನ್ನಾಗಿ ಆಡ್ತಿದ್ದಾರೆ. ಕಾರ್ತಿಕ್ ಅವರು ವಿನಯ್ ಹಿಂದೆ ಹೋಗ್ತಿರೋದಿಕ್ಕೆ ಅವರು ಈ ವಾರ ಜಸ್ಟ್ ಪಾಸ್” ಎಂದು ಪ್ರತಾಪ್ ಬಳಿ ಹೇಳಿದ್ದಾರೆ. ಆಗ ಪ್ರತಾಪ್ “ಯಾರು ಏನೇ ಮಾಡಲಿ ಅದು ಜನರಿಗೆ ಬಿಟ್ಟ ವಿಷಯ. ಕೊನೆಯದಾಗಿ ನಿರ್ಣಯ ಮಾಡೋದು ಜನರು” ಎಂದು ಸಂಗೀತಾಗೆ ಸಮಾಧಾನ ಮಾಡಿದ್ದಾರೆ.