ಈಗಿನ ಪರಿಸ್ಥಿತಿಯಲ್ಲಿ ಅವಧಿಗೆ ಮುನ್ನವೇ ಕಾಂಗ್ರೆಸ್​ ಸರ್ಕಾರ ಢಮಾರ್: ಮುರುಗೇಶ್ ನಿರಾಣಿ ಭವಿಷ್ಯ

ಬಾಗಲಕೋಟೆ (ಡಿ.25): ಅವಧಿಗೆ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಢಮಾರ್ ಆಗಲಿದೆ ಎಂದು ನೂತನ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅವಧಿಗೆ ಮುನ್ನವೇ ಕಾಂಗ್ರೆಸ್​ ಸರ್ಕಾರ ಢಮಾರ್ ಅನ್ನೋ ಸ್ಥಿತಿಯಲ್ಲಿದೆ. ಇವರೇನು ಇನ್ನು ಐದಾರು ತಿಂಗಳೂ ಸಹ ಹೋಗೋದಿಲ್ಲ. ಸರ್ಕಾರ ಬಿದ್ದು ಹೋಗುತ್ತೇ. ಹಾಗೇನಾದ್ರೂ ಎಲೆಕ್ಷನ್​ ಪರಿಸ್ಥಿತಿ ಬಂದ್ರೆ ನಿಶ್ಚಿತವಾಗಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತೆ. ರಾಜ್ಯದ ಜನ ಕಾಂಗ್ರೆಸ್​ಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ. ಕೊಟ್ಟ ಭರವಸೆ ಈಡೇರಿಸಲಿ ಎಂದು ನಿರಾಣಿ ಹೇಳಿದರು.

 

ಮತ್ತೇ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿ ನಾವೇನು ಹೇಳೋದು ಅಂದ್ರೆ, ಇಲ್ಲಿ ಅವರಾಗಿಯೇ ಬಿದ್ದು ಹೋಗ್ತಾರೆ. ಕೋಮಾದಲ್ಲಿ ಇರೋರಿಗೆ ಪೈಪ್​ ತೆಗೆದು ನಾವ್ಯಾಕೆ ಪಾಪ ಕಟ್ಟಿಕೊಳ್ಳೋಣ ಎಂದರು. ಯಡಿಯೂರಪ್ಪ & ವಿಜಯೇಂದ್ರ ವಿರುದ್ದ ಯತ್ನಾಳ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಅವರೇನು ಮಾತನಾಡ್ತಾರೆ ಅನ್ನೋದು. ಅವರಿಗೆ ಗೊತ್ತಾಗುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಇವತ್ತು ಅವರ ಬಗ್ಗೆ ನಾವೇನು ಮಾತನಾಡಲು ಹೋಗೋದಿಲ್ಲ. ಯಡಿಯೂರಪ್ಪನವರು ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟಿದವರು. ಯಡಿಯೂರಪ್ಪನವರು ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ.

ಆದ್ರೆ ಈಗ ವಿಜಯೇಂದ್ರ ಯಡಿಯೂರಪ್ಪನವರ ಮಗ ಅಂತ ಹೇಳಿ ರಾಜ್ಯಾಧ್ಯಕ್ಷನನ್ನ ಮಾಡಿಲ್ಲ. ಈ ಹಿಂದೆ ವಿಜಯೇಂದ್ರಗೆ ಕೊಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವಿಜಯೇಂದ್ರ & ಯಡಿಯೂರಪ್ಪನವರ ಬಗ್ಗೆ ಮಾತಾಡೋದು ವಿಜಯಪುರದವರಿಗೆ (ಯತ್ನಾಳ) ಶೋಭೆ ತರೋದಲ್ಲ. ಅವರಿಗೆ ಯಾವುದೇ ರೀತಿಯಲ್ಲಿ ಉತ್ತರ ಕೊಡೋಕೆ ಹೋಗೋದಿಲ್ಲ. ಅವರ ಸುತ್ತಮುತ್ತದಲ್ಲಿರೋರೆ ಇವರ ಮಾತು ಕೇಳಿ ನಮಗೆ ನಾಚಿಕೆ ಬರ್ತಿದೆ ಅಂತಿದ್ದಾರೆ. ನಾವು ಬಾಗಲಕೋಟೆ ವಿಜಯಪುರ ಜನರಿಗೆ ಏನು ಮಾಡಬೇಕು ಅನ್ನೋದನ್ನ ಗಮನ ಹರಿಸಬೇಕಿದೆ. ಯಾರಾದ್ರೂ ಹಾದಿ ಬೀದಿಯಲ್ಲಿ ಮಾತನಾಡೋರಿಗೆ ಉತ್ತರ ಕೊಡೋಕೆ ಆಗೋಲ್ಲ. ಇಂತವರಿಗೆ ನಾವು ಉತ್ತರ ಕೋಡೋಕೆ ಹೋಗಲ್ಲ ಎಂದರು.

ಬಿಜೆಪಿಯಲ್ಲಿದ್ದುಕೊಂಡೇ ಪಕ್ಷದವರ ಬಗ್ಗೆ ಮಾತನಾಡುವ ಯತ್ನಾಳ ಹೇಳಿಕೆ ವಿಚಾರವಾಗಿ ನಾನು ಲಾಸ್ಟ್​ ಟೈಮನಲ್ಲೇ ಹೇಳಿದ್ದೇನೆ. ದೀಪ ಆರೋವಾಗ ಜಾಸ್ತಿ ಗಾಳಿಗೆ ಆರುತ್ತೇ ಅಂತ ಹೇಳಿದ್ದೇ. ಆ ಕಾಲ ಇವತ್ತು ಬಂದಿದೆ. ಇವರ ಮಾತನ್ನ ಯಾರೂ ಸಹ ಸೀರಿಯಸ್​ ಆಗಿ ತೆಗೆದುಕೊಳ್ಳೋದಲ್ಲ. ಒಬ್ಬ ಸಣ್ಣ ಹುಡುಗನ ತರಹ ಮಾತನಾಡ್ತಿದ್ದಾರೆ. ನಾವು ಕಮೆಂಟ್​ ಮಾಡೋದಿಲ್ಲ. ನಾನಾಗಲಿ, ನಮ್ಮ ಪಕ್ಷದ ಹಿರಿಯರಾಗಲಿ ಮಾತನಾಡಬಾರದು ಎಂದಿದ್ದಾರೆ. ಅವರ ಮಾತನ್ನ ನೆಗ್ಲೆಟ್​ ಮಾಡೋ ಕಡೆ ಗಮನ ಕೊಡ್ತೇವೆ ಎಂದು ನಿರಾಣಿ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *