ಮಾಲ್ಡೀವ್ಸ್ ಬುಕಿಂಗ್ ರದ್ದು; ಈಸ್ ಮೈ ಟ್ರಿಪ್‌ನಿಂದ ಚಲೋ ಆಯೋಧ್ಯೆ-ಲಕ್ಷದ್ವೀಪ ಆಫರ್ !

ಬೆಂಗಳೂರು(ಜ.08) ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಬೆನ್ನಲ್ಲೇ ಉರಿದು ಬಿದ್ದ ಮಾಲ್ಡೀವ್ಸ್ ಅತೀ ದೊಡ್ಡ ತಪ್ಪಸೆಗಿತ್ತು. ಮಾಲ್ಡೀವ್ಸ್ ಸಚಿವರು ಮೋದಿ ಹಾಗೂ ಭಾರತೀಯರನ್ನು ನಿಂದಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅನಾಹುತ ಅರಿತ ಮಾಲ್ಡೀವ್ಸ್ ಸರ್ಕಾರ ಮೂವರನ್ನು ವಜಾ ಮಾಡಿದೆ. ಆದರೆ ಭಾರತೀಯರ ಆಕ್ರೋಶ ಕಡಿಮೆಯಾಗಿಲ್ಲ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಭರ್ಜರಿ ಯಶಸ್ಸು ಕಂಡಿದೆ. ಸ್ವಯಂ ಪ್ರೇರಿತರಾಗಿ ಹಲವರು ತಮ್ಮ ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ. ಇದರ ನಡುವೆ ಭಾರತದ ಹಾಲಿಡೇ ಪ್ಯಾಕೇಜ್ ಸರ್ವೀಸ್ ನೀಡುವ ಈಸ್ ಮೈ ಟ್ರಿಪ್ ಆನ್‌ಲೈನ್ ಸರ್ವೀಸ್ ಕಂಪನಿ ಮಹತ್ವದ ನಿರ್ಧಾರ ಘೋಷಿಸಿದೆ. ಹಾಲಿಡೇ ಪ್ಯಾಕೇಜ್ ಮೂಲಕ ತಾನು ಗ್ರಾಹಕರಿಗೆ ಬುಕ್ ಮಾಡಿದ ಮಾಲ್ಡೀವ್ಸ್ ಪ್ಯಾಕೇಜ್‌ಗಳನ್ನು ಸಂಪೂರ್ಣ ರದ್ದು ಮಾಡಿದೆ. ಇಷ್ಟೇ ಅಲ್ಲ ಚಲೋ ಆಯೋಧ್ಯೆ- ಚಲೋ ಲಕ್ಷದ್ವೀಪ ಅಭಿಯಾನ ಆರಂಭಿಸಿದೆ.

ಪ್ರಧಾನಿ ಮೋದಿ ಹಾಗೂ ಭಾರತೀಯರನ್ನು ನಿಂದಿಸಿದ ಮಾಲ್ಡೀವ್ಸ್ ನಡೆ ವಿರುದ್ಧ ಗರಂ ಆಗಿರುವ ಈಸ್ ಮೈ ಟ್ರಿಪ್ ಕಂಪನಿ, ಈಗಾಗಲೇ ಮಾಲ್ಡೀವ್ಸ್‌ಗೆ ಬುಕಿಂಗ್ ಮಾಡಿದ್ದ ಎಲ್ಲಾ ವಿಮಾನಗಳ ಟಿಕೆಟ್ ರದ್ದು ಮಾಡಿದೆ. ಇಷ್ಟೇ ಅಲ್ಲ ಚಲೋ ಲಕ್ಷದ್ವೀಪ ಹಾಗೂ ಆಯೋಧ್ಯೆ ಟೂರ್ ಪ್ಯಾಕೇಜ್ ಅಭಿಯಾನ ಆರಂಭಿಸಿದೆ. ಭಾರತ ಹಾಗೂ ಮೋದಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಈಸ್ ಮೈ ಟ್ರಿಪ್ ಕಂಪನಿ ಸಿಇಒ ಹಾಗೂ ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ,  ನಮ್ಮದು ಸಂಪೂರ್ಣವಾಗಿ ಭಾರತದ ಕಂಪನಿಯಾಗಿದೆ. ಭಾರತ ಹಾಗೂ ಮೋದಿಯನ್ನು ನಿಂದಿಸಿದ ಮಾಲ್ಡೀವ್ಸ್ ವಿವಾದದಿಂದ ನಾವು ಮಾಲ್ಡೀವ್ಸ್‌ಗೆ ಬುಕ್ ಮಾಡಿದ ಎಲ್ಲಾ ವಿಮಾನ ಟಿಕೆಟ್ ರದ್ದುಗೊಳಿಸಿದೆ. ಇದರ ಬದಲು ಚಲೋ ಲಕ್ಷದ್ವೀಪ ಅಭಿಯಾನ ಆರಂಭಿಸಿದ್ದೇವೆ. ಇಷ್ಟೇ ಅಲ್ಲ ಆಯೋಧ್ಯೆಗೆ ವಿಶೇಷ ಟೂರ್ ಪ್ಯಾಕೇಜ್ ನೀಡುತ್ತೇವೆ ಎಂದು ನಿಶಾಂತ್ ಪಿಟ್ಟಿ ಹೇಳಿದ್ದಾರೆ.

ಭಾರತದ ಅತ್ಯಂತ ಸುಂದರ ತಾಣ ಲಕ್ಷದ್ವೀಪ, ಮಾಲ್ಡೀವ್ಸ್‌ಗಿಂತ ಕಡಿಮೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ. ನಾವು ಇದೀಗ ಲಕ್ಷದ್ವೀಪಕ್ಕೆ ವಿಶೇಷ ಆಫರ್ ನೀಡುತ್ತೇವೆ. ಲಕ್ಷದ್ವೀಪ ಹಾಗೂ ಆಯೋಧ್ಯೆಯನ್ನು ಅಂತಾರಾಷ್ಟ್ರೀಯ ಸ್ಥಳವನ್ನಾಗಿ ಮಾಡಲು ನಾವು ನಮ್ಮ ಕೈಲಾಡದ ಪ್ರಯತ್ನ ಮಾಡುತ್ತೇವೆ ಎಂದು ನಿಶಾಂತ್ ಪಿಟ್ಟಿ ಹೇಳಿದ್ದಾರೆ.

 

 

ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನದಿಂದ ಇದೀಗ ಮಾಲ್ಡೀವ್ಸ್ ಸರ್ಕಾರ ಬೆಚ್ಚಿ ಬಿದ್ದಿದೆ. ಕಾರಣ ಮಾಲ್ಡೀವ್ಸ್‌ಗೆ ಪ್ರವಾಸ ಹೋಗುವ ವಿದೇಶಗರ ಪೈಕಿ ಭಾರತೀಯರ ಸಂಖ್ಯೆ ಅತೀ ಹೆಚ್ಚು. ಪ್ರತಿ ವರ್ಷ ಸರಾಸರಿ 3 ಲಕ್ಷ ಭಾರತೀಯರು ಮಾಲ್ಡೀವ್ಸ್ ಪ್ರವಾಸ ಮಾಡುತ್ತಾರೆ. ಇದೀಗ ಈ ಸಂಖ್ಯೆ ಅರ್ಧಕ್ಕೆ ಇಳಿದರೆ ಮಾಲ್ಡೀವ್ಸ್ ಆರ್ಥಿಕತೆಗೆ ತೀವ್ರ ಹೊಡೆತ ಬೀಳಲಿದೆ. ಕಾರಣ ಮಾಲ್ಡೀವ್ಸ್ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ದೇಶ. ಆರ್ಥಿಕತೆ ಮೂಲಕ ಕೇಂದ್ರ ಪ್ರವಾಸೋದ್ಯಮ ಆಗಿದೆ. ಇದೀಗ ಭಾರತೀಯರು ಮಾಲ್ಡೀವ್ಸ್ ಬಿಟ್ಟು ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿದರೆ ಭಾರತದ ಆರ್ಥಿಕತೆ ಬಲಿಷ್ಠವಾಗಲಿದೆ. ಇತ್ತ ಮಾಲ್ಡೀವ್ಸ್ ಆರ್ಥಿಕ ಹಿಂಜರಿತ ಎದುರಿಸಲಿದೆ. ಇದನ್ನು ಅರಿತ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರ ವಜಾಗೊಳಿಸಿ ಕ್ರಮ ಕೈಗೊಂಡಿದೆ. ಆದರೆ ಭಾರತೀಯರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *