ಸ್ಯಾಂಡಲ್​​ವುಡ್​​ ಡ್ರಗ್ಸ್​​ ರೇವ್​​ ಪಾರ್ಟಿಯಲ್ಲಿರೋ ನಟ ನಟಿಯರು ಯಾರು ? ಇಂದ್ರಜಿತ್ ಲಂಕೇಶ್​​ ಸ್ಪೋಟಕ ಮಾಹಿತಿ !

ಚಂದನವನ ಡ್ರಗ್ಸ್ ದಂಧೆಯ ಬಗ್ಗೆ ಬಿಟಿವಿಯಲ್ಲಿ ಮಾತನಾಡಿದ ನಟ, ನಿರ್ದೇಶಕ ಇಂದ್ರಜಿತ್ ಸ್ಫೋಟಕ ಟ್ವಿಸ್ಟ್​ ನೀಡಿದ್ದಾರೆ. ಸ್ಯಾಂಡಲ್​ವುಡ್​​​ ಸೇರಿ ಬೆಂಗಳೂರಿಗೆ 18 ಡ್ರಗ್ ಡೀಲರ್ಸ್​ ಮಾದಕ ಸಪ್ಲೈ ಮಾಡ್ತಿದ್ದರು. ದಂಧೆಯಲ್ಲಿ ಸ್ಟಾರ್ ನಟಿಯರು, ಸೀರಿಯಲ್ ಆಕ್ಟರ್ಸ್, ಮಾಡೆಲ್ಸ್ ಇದ್ದಾರೆ. ರಾಜಕಾರಣಿಗಳ ಮಕ್ಕಳಿಗೂ ನಶೆಯ ನಂಟು ಇದೆ. ಕೆಪಿಎಲ್​​​ ಟೂರ್ನಿಗಳಲ್ಲೂ ಡ್ರಗ್ಸ್​ ಬಳಸಿ ಮಾಡೆಲ್ಸ್​ಗಳನ್ನು ನಶೆಯಲ್ಲಿ ತೇಲಿಸಲಾಗುತ್ತಿತ್ತು ಎಂದು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನನಗೆ ರಕ್ಷಣೆ ನೀಡಿದರೆ, ಎಲ್ಲರ ಹೆಸರು ಬಹಿರಂಗಪಡಿಸುವೆ, ನನಗೆ ಗೊತ್ತಿರುವ ವಿಷಯವನ್ನು ಪೊಲೀಸ್ ಆಫೀಸರ್​ಗಳಿಗೆ. ಕಮಿಷನರ್​ಗೆ. NCB (ಮಾದಕ ದ್ರವ್ಯ ನಿಗ್ರಹ ದಳ) ನವರಿಗೆ ತಿಳಿಸಲು ನಾನು ಸಿದ್ದನಿದ್ದೇನೆ. ಇದು ಇತ್ತೀಚೆಗಿನ ವಿಷಯವಲ್ಲ ಹಲವು ವರ್ಷಗಳಿಂದಲೇ ಈ ಮಾಫಿಯಾ ನಡೆಯುತ್ತಿದೆ ಎಂದು ತಿಳಿಸಿದ್ದಾರೆ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ದಂಧೆ ಇದೆ, ರೇವ್​ ಪಾರ್ಟಿ ಕೂಡಾ ನಡೆಯುತ್ತೆ. ಹಲವು ಸ್ಟಾರ್​ಗಳು ಗಾಂಜಾ ನಶೆಯಲ್ಲೇ ತೇಲಾಡ್ತಾರೆ. ಕೆಲ ನಟಿಯರು ಪ್ರಸ್ಟುಟ್ಯೂಶನ್​ಗೆ ಒಳಗಾಗಿದ್ದಾರೆ. ಅನೇಕ ಯಂಗ್ ಹೀರೋಯಿನ್ಸ್ ಡ್ರಗ್ಸ್ ಸೇವಿಸಿಯೇ ಶೂಟಿಂಗ್​ಗೆ ಬರ್ತಾರೆ ಇದರೆಲ್ಲರ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಚಂದನವನದ ಡ್ರಗ್ಸ್​​ ಮಾಫಿಯಾದ ರಹಸ್ಯವನ್ನ ಇಂಚಿಂಚನ್ನು ಇಂದ್ರಜಿತ್ ಬಟಾ ಬಯಲು ಮಾಡಿದ್ದಾರೆ.

ಇಡೀ ಚಿತ್ರರಂಗ ಡ್ರಗ್ ಮಾಫಿಯಾಗೆ ಒಳಗಾಗಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಇದಕ್ಕೆ ಒಳಗಾಗಿದ್ದಾರೆ. ಹಿರಿಯ ಕಲಾವಿದರ್ಯಾರು ಈ ಮಾಫಿಯಾದಲ್ಲಿಲ್ಲ. ಇರಡು ಮೂರು ಸಿನಿಮಾ ಮಾಡಿರ್ತಾರೆ. ಕೆಪಿಎಲ್​ ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರ್ತಾರೆ. ಮತ್ತು ಮಾಡ್ಲಿಂಗ್ ಮಾಡ್ಕೊಂಡು ಬಂದಿರ್ತಾರೆ. ಇಂಥಹವರು ರಾತ್ರೋರಾತ್ರಿ ಕೋಟಿ ಗಟ್ಟಲೆ ದುಡ್ಡು ಮಾಡಿ, ದೊಡ್ಡ ದೊಡ್ಡ ಅಪಾರ್ಟ್​ ಮೆಂಟ್​, ಮರ್ಸಿಡಿಸ್, ಜಾಗ್ವಾರ್ ಕಾರು ಪಡೆದಿದ್ದಾರೆ ಅಂತಹ ಕಲಾವಿದರ ಹೆಸರು ಬಹಿರಂಗವಾಗ್ಬೇಕು ಎಂದು ಹೇಳುವ ಮೂಲಕ ಇಂದ್ರಜಿತ್ ಲಂಕೇಶ್ ಪರೋಕ್ಷವಾಗಿ ಅನೇಕ ವಿಷಯಗಳನ್ನು ತೆರೆದಿಡುವ ಕೆಲಸ ಮಾಡಿದ್ದಾರೆ.

 

ಈ ಹಿಂದೆ ಕೆಪಿಎಲ್​ ಅನಿ ಟ್ರ್ಯಾಪ್ ನಲ್ಲಿ ಒಳಗಾಗಿರುವ ನಟಿಯರು ಹೆಸರು ಸುದ್ದಿಯಾಗಿತ್ತು. ಫೈವ್ ಸ್ಟಾರ್ ಹೋಟೆಲ್​ಗಳಲ್ಲಿ ರೈಡ್ ಆದಂತಹ ವೇಳೆಯಲ್ಲಿ ಯಾರೆಲ್ಲ ಅಲ್ಲಿದ್ದರು, ಮದ್ಯದ ನಶೆಯಲ್ಲಿ ಕಾರ್ ಡ್ರೈವ್ ಮಾಡಿ ಹಲವಾರು ಕಡೆ ಪೊಲೀಸರ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾರ್ ನ ಡಿಕ್ಕಿಯಲ್ಲಿ ಡ್ರಗ್ ಇರುವುದು ಸಿಕ್ಕಿ ಬಿದ್ದಿತ್ತು. ಆ ವೇಳೆ ಕಾರ್​ನಲ್ಲಿ ಯಾರೆಲ್ಲ ಇದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಮಾದ್ಯಮಗಳು ವರದಿ ಮಾಡಲಾಗಿತ್ತು. ಇವುಗಳು ಬಗ್ಗೆ ಅರಿವಿರುವವರಿಗೆ ಯಾರೆಲ್ಲ ಈ ಮಾಫಿಯಾ ನಶೆಯ ಲಿಂಕ್​ನಲ್ಲಿದ್ದಾರೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

 

ಅಲ್ಲದೆ ಈ ದಂದೆಯಲ್ಲಿ ರಾಜಕಾರಣಿಗಳು ಮಕ್ಕಳ ಸೇರಿದಂತೆ. ಹಿರಿಯ ನಟರು. ಸಂಗೀತ ನಿರ್ದೇಶಕರ ಮಕ್ಕಳು ಈ ಜಾಲದಲ್ಲಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಯಾರೆಲ್ಲ ಬೆದರಿಕೆ ಕರೆಗಳನ್ನು ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಡಿಟೇಲ್ಸ್ ನನ್ನ ಬಳಿ ಇದೆ ಎಂದು ಡ್ರಗ್ಸ್ ದಂಧೆಯ ಬಗ್ಗೆ ಹೇಳಿದ್ದು, ಸ್ಟಾರ್​​ ಡೈರೆಕ್ಟರ್​​ ಏಟಿಗೆ ಚಂದನವನದ ಮಾತ್ರೆ ನಟ-ನಟಿಯರಲ್ಲಿ ಈಗಾಗಲೇ ನಡುಕ ಉಂಟಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *