SSLC ಹಾಗೂ PUC ಪರೀಕ್ಷೆ ದಿನಾಂಕ ಪ್ರಕಟ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ

ಎಸ್ ಎಸ್ ಎಲ್ ಸಿ (SSLC) ಹಾಗೂ ದ್ವಿತೀಯ ಪಿಯುಸಿ  (PUC) ಪರೀಕ್ಷೆ ಹಿನ್ನೆಲೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಟಿ ಮಾಡಿ ವೇಳಾಪಟ್ಟಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಆ ಪ್ರಕಾರ ನಿಖರ ಮಾಹಿತಿಯನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ. ದ್ವಿತೀಯ ಪಿಯುಸಿ ಪರೀಕ್ಷೆ 1/03/24 ರಿಂದ 22/03/24 ರವರೆಗೆ ನಡೆಯುತ್ತೆ. SSLC 25/03/24 ರಿಂದ 6/4/ 24 ವರೆಗೆ ನಡೆಯುತ್ತೆ

ಪಿಯುಸಿ ಪರೀಕ್ಷೆಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ,
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8,96,271 ವಿದ್ಯಾರ್ಥಿಗಳು ನೋಂದಣಿ ನೋಂದಣಿ ಮಾಡಿಕೊಂಡಿದ್ದಾರೆ. ಪಿಯುಸಿಗೆ 1124 ಪರೀಕ್ಷಾ ಕೇಂದ್ರಗಳು ಇರಲಿದೆ.
SSLC ಗೆ 2747 ಪರೀಕ್ಷಾ ಕೇಂದ್ರಗಳು ಇರಲಿದೆ.

ಎಲ್ಲ ಪರೀಕ್ಷೇಗೆ ನೋಂದಣಿ ಮಾಡಿಕೊಳ್ಳಲೇಬೇಕು. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಮೂರರಲ್ಲಿ ಯಾವುದಾದ್ರೂ ಒಂದು ಪರೀಕ್ಷೆಗೆ ಹಾಜರಾಗಬೇಕು
ಮೂರು ಎಕ್ಸಾಂನಲ್ಲಿ ಮೊದಲು ಅಥವಾ ಎರಡು ಯಾವ ಪರೀಕ್ಷೆಯನ್ನು ಬೇಕಿದ್ರೆ ಆಯ್ಕೆ ಮಾಡಬಹುದು. ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಟಾಪ್ ಮಾರ್ಕ್ಸ್ ಪರಿಗಣನೆ ಮಾಡಲಾಗುತ್ತದೆ.  ಹೆಚ್ಚು ಅಂಕ ಪಡೆದಿರುವ ಮಾರ್ಕ್ಸ್ ಮಾತ್ರ ತೆಗೆದುಕೊಳ್ಳಲಾಗುವುದು.

SSLC ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಲಿಖಿತ ಪರೀಕ್ಷೆ
20 ಅಂಕಗಳಿಗೆ ಅಂತರಿಕ ಪ್ರಯೋಗಿಕ ಪರೀಕ್ಷೆ ಒಳಗೊಂಡು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ

ಆಯಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ತುರ್ತಾಗಿ ಅಂಕಪಟ್ಟಿ ಅಗತ್ಯವಿದ್ದಲ್ಲಿ
ಡಿಜಿ ಲಾಕರ್ ನಿಂದ ಪಡೆಯಬಹುದಾಗಿರುತ್ತದೆ

SSLC ಪರೀಕ್ಷೆಯ ವೇಳಾಪಟ್ಟಿ ದಿನಾಂಕ

25-03-2024 ರ ಸೋಮವಾರ ಪ್ರಥಮ ಭಾಷೆ ಪರೀಕ್ಷೆ
-ಕನ್ನಡ,ತೆಲುಗು ,ಹಿಂದಿ,ಮರಾಠಿ, ತಮಿಳು,ಉರ್ದು,ಇಂಗ್ಲಿಷ್, +ಇಂಗ್ಲಿಷ್NCERT)

27-03-2024 ರಂದು ಸಮಾಜ ವಿಜ್ಞಾನ ಪರೀಕ್ಷೆ

30-03-2024 ರಂದು ,ವಿಜ್ಞಾನ ,ರಾಜ್ಯಶಾಸ್ತ್ರ, ಪರೀಕ್ಷೆ

02-04-2024 ರಂದು ಗಣಿತ,ಸಮಾಜ ಶಾಸ್ತ್ರ ಪರೀಕ್ಷೆ

03-04-2024 ಅರ್ಥಶಾಸ್ತ್ರ ಪರೀಕ್ಷೆ

ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯಲಿರೋ ಪರೀಕ್ಷೆ

ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ದಿನಾಂಕ

01-03-2024 ರ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ

ಜಾಹೀರಾತು

04-03-2024 ಸೋಮವಾರ ಗಣಿತ ಪರೀಕ್ಷೆ

05-03-2024 ರಂದು ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ

06-03-2024 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್,ಪರೀಕ್ಷೆ

07-03-2024 ರಂದು ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ

09-03-2024 ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ ಪರೀಕ್ಷೆ

11-03-2024 ರಂದು ತರ್ಕಶಾಸ್ತ್ರ,ವ್ಯವಹಾರ ಅಧ್ಯಯನ ಪರೀಕ್ಷೆ

13-03-2024 ರಂದು ಇಂಗ್ಲಿಷ್ ಪರೀಕ್ಷೆ

15-03-2024 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ ಪರೀಕ್ಷೆ

16-03-2024 ರಂದು ಅರ್ಥಶಾಸ್ತ್ರ ಪರೀಕ್ಷೆ

18-03-2024 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ

20-03-2024 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ

22-03-2024 ರಂದು ಹಿಂದಿ ಪರೀಕ್ಷೆ

ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *