Supreme Court: ಇವಿಎಂ ಮತದ ಕ್ರಾಸ್ ವೆರಿಫಿಕೇಶನ್ ಕೋರಿ ಅರ್ಜಿ! ಎಲ್ಲವನ್ನೂ ಅನುಮಾನಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮತಗಳು ಮತ್ತು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳನ್ನು ಶೇ.100 ರಷ್ಟು ಕ್ರಾಸ್ ಚೆಕ್ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠವು ಅರ್ಜಿದಾರರಿಗೆ ವ್ಯವಸ್ಥೆಯ ಪ್ರತಿಯೊಂದನ್ನು ಅನುಮಾನಿಸಲಾಗದು ಹಾಗೂ ಎಲ್ಲವನ್ನೂ ಟೀಕಿಸಲಾಗದು ಎಂದು ಹೇಳಿದೆ.  ಈ ಅರ್ಜಿಯ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿದೆ.

ಅರ್ಜಿದಾರರ ಪರವಾಗಿ ವಕೀಲರಾದ ಪ್ರಶಾಂತ್ ಭೂಷಣ್, ಗೋಪಾಲ್ ಶಂಕರನಾರಾಯಣ್ ಮತ್ತು ಸಂಜಯ್ ಹೆಗ್ಡೆ ವಾದ ಚುನಾವಣಾ ಆಯೋಗದ ಪರವಾಗಿ ವಕೀಲ ಮಣಿಂದರ್ ಸಿಂಗ್ ಮತ್ತು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

ಅಣುಕು ಮತದಾನದಲ್ಲಿ ಬಿಜೆಪಿಗೆ ಹೆಚ್ಚು ಮತ

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಕೇರಳದಲ್ಲಿ ನಡೆದ ಅಣಕು ಮತದಾನವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಕಾಸರಗೋಡಿನಲ್ಲಿ ಅಣಕು ಮತದಾನ  ನಾಲ್ಕು ಇವಿಎಂಗಳನ್ನು ವಿವಿಪ್ಯಾಟ್‌ಗಳೊಂದಿಗೆ ಹೊಂದಾಣಿಕೆ ಮಾಡಿದಾಗ ಬಿಜೆಪಿಗೆ ಹೆಚ್ಚುವರಿ ಮತಗಳು ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ವಿವಿಪ್ಯಾಟ್ ಸ್ಲಿಪ್​ಗೆ ಮನವಿ

ಇದೇ ವೇಳೆ ಮತದಾನದ ನಂತರ ಮತದಾರರಿಗೆ ವಿವಿಪ್ಯಾಟ್ ಸ್ಲಿಪ್ ನೀಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ನ್ಯಾಯಾಲಯ ಚುನಾವಣಾ ಆಯೋಗವನ್ನು ಕೇಳಿತು. ಈ ಕುರಿತು ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಮತದಾರರಿಗೆ ವಿವಿಪ್ಯಾಟ್ ಸ್ಲಿಪ್ ನೀಡುವುದರಿಂದ ದೊಡ್ಡ ಅಪಾಯವಿದೆ. ಇದು ಮತದ ಗೌಪ್ಯತೆಗೆ ಧಕ್ಕೆ ತರುತ್ತದೆ ಮತ್ತು ಮತಗಟ್ಟೆಯ ಹೊರಗೆ ದುರ್ಬಳಕೆಯಾಗಬಹುದು. ಇತರರು ಅದನ್ನು ಹೇಗೆ ಬಳಸುತ್ತಾರೆ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿತು.

ಅರ್ಜಿದಾರರವಾದವೇನು?

ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು ಮತದಾನದ ಸಮಯದಲ್ಲಿ ವಿವಿಪ್ಯಾಟ್ ಪರದೆಯಲ್ಲಿ ಲೈಟ್ ಅನ್ನು ಬೆಳಗಿಸುವಂತೆ ಸೂಚಿಸಿದರು. ಇದರಿಂದ ಮತದಾರ ತಮ್ಮ ಮತ ತಾವೂ ಬಯಸಿದ ಪಕ್ಷಕ್ಕೆ ಸಿಕ್ಕಿದಿಯಾ ಎಂಬುದು ತಿಳಿಯಬೇಕು ಎಂದರು. ಅಡ್ವಕೇಟ್ ನಿಜಾಮ್ ಪಾಷಾ ಕೂಡ ಮತದಾರರು ತಾವೂ ಮತ ಚಲಾಯಿಸಿದ ನಂತರ ಖಚಿತತೆಗಾಗಿ ವಿವಿ ಪ್ಯಾಟ್ ಸ್ಲಿಪ್​ ಪಡೆಯುವಂತಾಗಬೇಕೆಂದು ಸಲಹೆ ನೀಡಿದರು.

ಎಲ್ಲವನ್ನೂ ಅನುಮಾನಿಸಲಾಗಲ್ಲ

ಈ ವೇಳೆ ಮಧ್ಯ ಪ್ರವೇಶಿಸಿದ ಪೀಠ, ಎಲ್ಲದರ ಬಗ್ಗೆ ಅನುಮಾನಾಸ್ಪದವಾಗಿರಬಾರದು ಎಂದು ವಕೀಲ ಪ್ರಶಾಂತ್ ಭೂಷಣ್​ ಪ್ರಶ್ನೆಗೆ ಉತ್ತರಿಸಿತು. “ಈಗ ನೀವು ತುಂಬಾ ದೂರ ಹೋಗುತ್ತಿದ್ದೀರಿ. ಎಲ್ಲವನ್ನೂ ಅನುಮಾನಿಸಲಾಗುವುದಿಲ್ಲ. ನೀವು ಎಲ್ಲವನ್ನೂ ಟೀಕಿಸಲು ಸಾಧ್ಯವಿಲ್ಲ, ದಯವಿಟ್ಟು ಅವರು ( ಚುನಾವಣಾ ಆಯೋಗ) ಏನಾದರೂ ಒಳ್ಳೆಯದನ್ನು ಮಾಡಿದ್ದರೆ ದಯವಿಟ್ಟು ಪ್ರಶಂಸಿಸಿ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಅನುಸರಿಸಿದ ಕ್ರಮಗಳ ಬಗ್ಗೆ ಚುನಾವಣಾ ಆಯೋಗದ ವಕೀಲರಿಂದ ಇವಿಎಂ ಮತ್ತು ವಿವಿಪ್ಯಾಟ್‌ಗಳ ಸಂಪೂರ್ಣ ಪ್ರಕ್ರಿಯೆಯನ್ನು ನ್ಯಾಯಾಲಕ್ಕೆ ಸಲ್ಲಿಸುವಂತೆ ತಿಳಿಸಿದ ಕೋರ್ಟ್​, ಅಲ್ಲದೆ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಕಾಪಾಡಬೇಕು ಎಂದು ತಿಳಿಸಿ ತೀರ್ಪನ್ನು ಕಾಯ್ದಿರಿಸಿದೆ.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *