Actress Sridevi: ಶ್ರೀದೇವಿ ಡೆತ್ ಮಿಸ್ಟರಿ.. ಸೌತ್ ನಟಿಯ ನಿಗೂಢ ಸಾವಿಗೆ ಅಸಲಿ ಕಾರಣ ಇದು!! ಬಯಲಾಯ್ತು ಸತ್ಯ!
Famous Actress Sridevi: ದಕ್ಷಿಣ ಚಿತ್ರರಂಗದ ಜೊತೆಗೆ, ಶ್ರೀದೇವಿ ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್ ಅನ್ನು ರಾಣಿಯಂತೆ ಆಳಿದ್ದಾರೆ. ದೇವಲೋಕದ ಸುಂದರಿ, ದೇವತೆ ಎಂದೇ ಖ್ಯಾತಿ ಪಡೆದಿರುವ ಆಕೆಯ ಬಗ್ಗೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ದೇಶಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಗಳಿಸಿದ್ದ ಶ್ರೀದೇವಿ ನಮ್ಮೊಂದಿಗಿಲ್ಲ ಎನ್ನುವುದನ್ನು ಇಂದಿಗೂಅಭಿಮಾನಿಗಳಿಗೆ ಅರಿಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ..
ಶ್ರೀದೇವಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಪುಟಗಳನ್ನು ಬರೆದು.. ತಲೆಮಾರುಗಳಿಂದ ಮರೆಯಲಾಗದ ಖ್ಯಾತಿಯನ್ನು ಗಳಿಸಿದ್ದಾರೆ.. ಆದರೆ ಆಕೆಯ ಸಾವು ಶ್ರೀದೇವಿಯನ್ನು ಪ್ರೀತಿಸುವ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು.. ಅಷ್ಟೇ ಅಲ್ಲ ಅವರ ಸಾವು ಇಂದಿಗೂ ನಿಗೂಢವಾಗಿದೆ.
ಶ್ರೀದೇವಿ ಅನೇಕರ ಮನಸ್ಸಿನಲ್ಲಿ ಮರೆಯಲಾಗದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀದೇವಿಗೆ ಸಿನಿಮಾವೇ ಪ್ರಪಂಚ… ಅಲ್ಲದೇ ಅವರಿಗೆ ತಮ್ಮಿಬ್ಬರು ಹೆಣ್ಣು ಮಕ್ಕಳನ್ನೂ ತೆರೆಯ ಮೇಲೆ ನೋಡುವ ಆಸೆ. ಆದರೆ ಆಕೆಯ ಆಸೆ ಈಡೇರುವ ಮೊದಲೇ ಇಹಲೋಕ ತ್ಯಜಿಸಿದರು. ಶ್ರೀದೇವಿ ಸಾಯುವವರೆಗೂ ಚಿತ್ರವೇ ಅವರಿಗೆ ಪ್ರಪಂಚವಾಗಿ ಉಳಿದುಕೊಂಡಿತ್ತು. ನಾಯಕಿಯಾಗಿ ಗ್ಲಾಮರ್ ಹಾಳಾಗದಂತೆ ತುಂಬಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದರು..
ಫೆಬ್ರವರಿ 24, 2018 ರಂದು, ಶ್ರೀದೇವಿ ಅನಿರೀಕ್ಷಿತವಾಗಿ ನಿಧನರಾದರು. ಕುಟುಂಬದ ಕಾರ್ಯಕ್ರಮಕ್ಕೆ ದುಬೈಗೆ ತೆರಳಿದ್ದ ಶ್ರೀದೇವಿ ಬಾತ್ ರೂಂನ ಬಾತ್ ಟಬ್ ನಲ್ಲಿ ಶವವಾಗಿ ಕಾಣಿಸಿಕೊಂಡರು… ಆದರೆ ನಟಿ ಶ್ರೀದೇವಿಯ ಆಹಾರ ಕ್ರಮಕ್ಕೆ ತೊಂದರೆಯಾಗಿತ್ತು ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಅವರ ಕುಟುಂಬಸ್ಥರು. ಶ್ರೀದೇವಿ ಪತಿ ಬೋನಿ ಕಪೂರ್ ಕೂಡ ಇದನ್ನೇ ಹೇಳಿದ್ದಾರೆ. ಆದರೆ ಇಲ್ಲೊಂದು ಸಣ್ಣ ವಿಷಯ ವೈರಲ್ ಆಗಿದೆ. ಶ್ರೀದೇವಿಗೆ ಜಲಗಂಡಾಂತರವಿದ್ದು… ಹೀಗಾಗಿ ಅವರು ನೀರಿನಲ್ಲಿಯೇ ಶವವಾಗಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ.
ಈ ಹಿಂದೆ ಶ್ರೀದೇವಿ ಬಾಲ ಕಲಾವಿದೆಯಾಗಿದ್ದಾಗ 1972 ರಲ್ಲಿ ಬಾಲಭಾರತಂ ಚಿತ್ರದ ಶೂಟಿಂಗ್ ಸಮಯದಲ್ಲಿ.. ಜಲಪಾತದ ಬಳಿ ಶೂಟಿಂಗ್ ನಡೆಯುತ್ತಿತ್ತು.. ಆಗ ನಟಿ ನೀರಿನಲ್ಲಿ ಮುಳುಗಿದ್ದಳು. ಸಹ ನಟರು ಆಕೆಯನ್ನು ರಕ್ಷಿಸಲಾಗಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.. ಈ ವಿಷಯ ಅಧಿಕೃತವಾಗಿಲ್ಲ.. ಆದರೆ ಶ್ರೀದೇವಿಗೆ ಜಲ ಗಂಡಾಂತರವಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.