3 ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್, ಅಲ್ಪ ಮತಕ್ಕೆ ಕುಸಿದ ಹರಿಯಾಣ ಬಿಜೆಪಿ ಸರಕಾರ
- ಹರಿಯಾಣ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು
- ಸರಕಾರ ಸುಭದ್ರ ಎಂದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ
- ಇತ್ತೀಚೆಗಷ್ಟೇ ವಿಶ್ವಾಸಮತ ಗೆದ್ದ ಹಿನ್ನೆಲೆ, ಸಂಕಷ್ಟದಿಂದ ಹರಿಯಾಣ ಸರಕಾರ ಪಾರು
ಚಂಡೀಗಢ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಹರಿಯಾಣದ ಮೂವರು ಪಕ್ಷೇತರ ಶಾಸಕರು ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡಿದ್ದು, ಸಿಎಂ ನಯಾಬ್ ಸಿಂಗ್ ಸೈನಿ ಸರಕಾರಕ್ಕೆ ಆತಂಕ ಎದುರಾಗಿದೆ.
ಪಕ್ಷೇತರ ಶಾಸಕರಾದ ಸೋಮ್ಬೀರ್ ಸಂಗವಾನ್, ರಣಧೀರ್ ಗೋಲೆನ್ ಮತ್ತು ಧರ್ಮಪಾಲ್ ಗೋಂದರ್ ಅವರು ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡಿದ್ದಾರೆ. ಅಲ್ಲದೇ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.