Viral Video: ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಕೈ ಮಾಡಿದ ಸ್ಟಾರ್ ಕ್ರಿಕೆಟಿಗ; ನೀನು ಇನ್ನ ಬದಲಾಗೋದಿಲ್ವಾ ಅಂತ ನೆಟ್ಟಿಗರು ಗರಂ!

ಶಕೀಬ್ ಅಲ್ ಹಸನ್ (Shakib Al Hasan) ಹೆಸರು ಕ್ರಿಕೆಟ್ ಅಭಿಮಾನಿಗಳಿಗೆ ಹೊಸದಾಗಿ ಪರಿಚಯ ಮಾಡುವ ಅಗತ್ಯವಿಲ್ಲ. ಬಾಂಗ್ಲಾದೇಶದ (Bangladesh) ಈ ಸ್ಟಾರ್ ಆಟಗಾರ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್ (All-rounder) ಎಂದು ಗುರುತಿಸಲ್ಪಟ್ಟಿದ್ದಾರೆ. ಆದರೆ, ಕ್ರೀಡೆ ಮಾತ್ರವಲ್ಲದೆ ಬೇರೆ ಬೇರೆ ವಿಚಾರಗಳಿಂದಲೂ ಶಕೀಬ್ ಹಾಗಾಗ ಸಖತ್ ಸುದ್ದಿ ಆಗ್ತಾನೆ ಇರ್ತಾರೆ. ಸಮಕಾಲೀನ ಕ್ರಿಕೆಟ್​ನಲ್ಲಿ ಸ್ಟಾರ್ ಆಲ್ ರೌಂಡರ್ ಆಗಿರುವ ಶಕೀಬ್ ವಿವಾದಗಳಿಗೆ ಕೇರಾಫ್ ಅಡ್ರೆಸ್ ಆಗಿದ್ದಾರೆ. ಸದ್ಯ ಅವರ ವಿಡಿಯೋ (Viral Video) ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಕೀಯಕ್ಕೆ ಎಂಟ್ರಿ!

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್​ ಬಳಿಕ ಬಾಂಗ್ಲಾ ದೇಶದ ಆಲ್​ರೌಂಡರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಈ ವರ್ಷದ ಆರಂಭದಲ್ಲಿ ನಡೆದ ಬಾಂಗ್ಲಾದೇಶ ಸಾರ್ವತ್ರೀಕ ಚುನಾವಣೆಯಲ್ಲಿ ಗೆಲುವು ಕೂಡ ಪಡೆದಿದ್ದರು. ಸದ್ಯ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಾರ್ಟಿ ಪರ ಮಗುರಾ-1 ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಆಯ್ಕೆಯಾಗಿದ್ದಾರೆ. ರಾಜಕೀಯ ಪ್ರವೇಶದ ಬಳಿಕವೂ ಕ್ರಿಕೆಟ್​ನಲ್ಲಿ ಮುಂದುವರಿದಿದ್ದಾರೆ.

ಸೆಲ್ಫಿ ಕೇಳಿದ ಗ್ರೌಂಡ್ ಸ್ಟಾಫ್!

ಸದ್ಯ ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಆಡುತ್ತಿದೆ. ಈ ಸರಣಿಯಿಂದ ದೂರ ಉಳಿದಿರುವ ಶಕೀಬ್ ಸದ್ಯ ದೇಶೀಯ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಪಂದ್ಯದ ಆರಂಭಕ್ಕೂ ಮುನ್ನ ಶಕೀಬ್ ಅಭಿಮಾನಿಯೊಬ್ಬರೊಂದಿಗೆ ನಡೆದುಕೊಂಡ ರೀತಿಯನ್ನು ಕಂಡ ಹಲವರು ಕಿಡಿಕಾರಿದ್ದಾರೆ. ಶಕೀಬ್‌ ನನ್ನು ನೋಡಿದ ಅಭಿಮಾನಿಯೊಬ್ಬ ಆತನ ಬಳಿಗೆ ಬಂದು ಸೆಲ್ಫಿ ಕೇಳುತ್ತಾರೆ. ಸಾಮಾನ್ಯವಾಗಿ ಯಾವುದೇ ಆಟಗಾರ ಆದರೂ ಇಂತಹ ಸಂದರ್ಭದಲ್ಲಿ ಫೋಟೋ ಕೊಡುತ್ತೇವೆ, ಇಲ್ಲ ಎಂದರೇ ನಿರಾಕರಿಸಿ ಬೇಡ ಅಂತಾರೆ. ಆದರೆ ಶಕೀಬ್‌ ಮಾತ್ರ ಅಭಿಮಾನಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ.ಱ

ಗ್ರೌಂಡ್​ ಸ್ಟಾಫ್​​ ಸೆಲ್ಪಿ ಕೇಳಿದ್ದರಿಂದ ಕೆರಳಿದ ಶಕೀಬ್ ಆತನ ಮೇಲೆ ಕೈ ಮಾಡಲು ಮುಂದಾಗಿದ್ದಾರೆ. ಇದರೊಂದಿಗೆ ಬೇಸರಗೊಂಡ ಗ್ರೌಂಡ್​ ಮ್ಯಾನ್ ಅಲ್ಲಿಂದ ತೆರಳಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಹಾಗೂ ನೆಟ್ಟಿಗರು ಶಕೀಬ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಷ್ಟು ಗರ್ವದಿಂದ ನಡೆದುಕೊಳ್ಳುವುದು ಬೇಸರ ತಂದಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *