ಅಂಜಲಿ ನಿವಾಸಕ್ಕೆ ಸಚಿವ ಸಂತೋಷ ಲಾಡ್ ಭೇಟಿ; ಕುಟುಂಬಕ್ಕೆ 2 ಲಕ್ಷ ರೂ ಸಹಾಯ ಧನ
ಹೈಲೈಟ್ಸ್:
- ಭೀಕರವಾಗಿ ಹತ್ಯೆಯಾದ ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ ನಿವಾಸಕ್ಕೆ ಸಂತೋಷ್ ಲಾಡ್ ಭೇಟಿ
- ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಸಹಾಯ ಧನ
- ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಾಯ
ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ್ದಾಳೆ ಎನ್ನುವ ಕಾರಣಕ್ಕೆ ವಿಕೃತ ಪ್ರೇಮಿಯಿಂದ ಹತ್ಯೆಯಾದ ಅಂಜಲಿ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳಿಗೆ ಮಾತನಾಡುತ್ತಾ, ‘ ನೇಹಾ ಹತ್ಯೆ ಘಟನೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗುತ್ತಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದನ್ನ ಸಿಐಡಿ ತನಿಖೆಗೆ ಸರ್ಕಾರ ಕೊಡಬೇಕು ಅಂತ ನಾನು ಮನವಿ ಮಾಡುತ್ತೇನೆ. ಗೃಹ ಸಚಿವರು ಕೂಡ ಬರುತ್ತಾರೆ ಅಂತ ಹೇಳಿದ್ದಾರೆ. ಈಗಾಗಲೇ ಕುಟುಂಬಸ್ಥರು ಹೇಳಿದ್ದಾರೆ ದೂರು ಮೊದಲು ಕೊಟ್ಟಿದ್ದೆವು ಅಂತ. ಈಗಾಗಲೇ ಕ್ರಮ ಕೂಡ ಆಗಿದೆ’ ಎಂದರು.ಡ್ರಗ್ಸ್ ಎಲ್ಲಾ ಕಡೆ ಇದೆ ಟ್ಯಾಬ್ಲೆಟ್ ನಲ್ಲಿಯೂ ಕೂಡ ಬಂದಿದೆ. ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಮುಖ್ಯ. ನಾನು ಸರ್ಕಾರದ ಪರವಾಗಿ ಮಾತನಾಡುತ್ತಿಲ್ಲ. ಇಂತಹದ್ದು ಕಂಡು ಬಂದ್ರೆ ತಡೆಗಟ್ಟಲು ಸಹಾಯವಾಗುತ್ತೆ. ಈಗಾಗಲೇ ತನಿಖೆ ನಡೆಯುತ್ತದೆ. ಗೃಹ ಸಚಿವರು ಬಂದು ಈ ಕುರಿತು ಮಾತಾನಾಡುತ್ತಾರೆ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕೋದು ಪೋಲಿಸರ ಕರ್ತವ್ಯ. ದಿನಾ ನಡೆಯುವ ಕೆಲಸಗಳು ನಮಗೆ ಕೂಡ ಗೊತ್ತಾಗುವುದಿಲ್ಲ. ಅಂತಹ ಅಹಿತಕರ ಘಟನೆಗಳು ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಸಾರಾಯಿ ವಿಚಾರ ವಾಗಿ ಜನರು ಕೂಡ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಬೇಕು. ಎಲ್ಲವನ್ನು ನಾವು ಒಬ್ಬರೇ ತೆಗೆದು ಹಾಕಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದಾಗ ಇಂತಹದ್ದನ್ನು ತೆಗೆದುಹಾಕಬಹುದು. ನಾನು ಬಿಜೆಪಿ ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳೋದಿಲ್ಲ. ನನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಬರಲು ಆಗಿಲ್ಲ. ಅವರು ಕೇಳಿದ ಪ್ರಶ್ನೆ ಸರಿಯಾಗಿದೆ. ನಾನು ಅದಕ್ಕೆ ಅವರಿಗೆ ಉತ್ತರ ಕೂಡ ಹೇಳಿದ್ದೇನೆ’ ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾನು ಇಂತಹ ಘಟನೆಯನ್ನ ಖಂಡಿಸುತ್ತೇನೆ. ಈಗಾಗಲೇ ಎರಡು ಪ್ರಕರಣಗಳು ನಡೆದಿದೆ. ಡ್ರಗ್ಸ್ ವಿಚಾರವಾಗಿ ನಾನು ಮೊದಲು ತೆಗೆದುಹಾಕಬೇಕು ಅಂತ ಮೊದಲಿಂದ ಹೇಳಿ ಕೊಂಡು ಬಂದಿದ್ದೇನೆ. ಅದನ್ನ ತಡೆಗಟ್ಟಲು ನಾನು ಹಲವಾರು ಬಾರಿ ಇಲಾಖೆ ಮೀಟಿಂಗ್ ಮಾಡಿದ್ದೇನೆ. ಕೊಲೆಯಾದ ಸಂದರ್ಭದಲ್ಲಿ ನಾನು ಬಂದಿಲ್ಲ ಅಂತ ಟೀಕೆ ಮಾಡ್ತಿದ್ದಾರೆ. ನಾನು ಫೋಟೋ ಪೋಸ್ ಗೆ ಬರುವ ಅವಶ್ಯಕತೆಯಿಲ್ಲ. ನಮ್ಮದು ಬೇರೆ ಅಫಿಶೀಯಲ್ ಕೆಲಸ ಇತ್ತು ಬರಲು ಆಗಿಲ್ಲ. ಇಂತಹ ಘಟನೆಯಾದಾಗ ಫೋಟೋ ಪೋಸ್ ಬರುವ ಅವಶ್ಯಕತೆ ಇಲ್ಲ ಎಂದರು.