ಸನ್ನಿ ಲಿಯೋನಿ ಈಗ ಏನ್ಮಾಡ್ತಿದ್ದಾರೆ? ಆ ವಿಶೇಷ ವಿಡಿಯೋ ಇಲ್ಲಿದೆ ನೋಡಿ
ಪಡ್ಡೆ ಹುಡುಗರ ಫೇವರೇಟ್ ಬೀಬಿ ಡಾಲ್ ಸನ್ನಿ ಲಿಯೋನ್,ಈಗ ವಿದೇಶದಲ್ಲಿ ತಮ್ಮ ಫ್ಯಾಮಿಲಿ ಜೊತೆ ಕಾಲಕಳೆಯುತ್ತ ಮಸ್ತ್ ಎಂಜಾಯ್ ಮಾಡ್ತಿದ್ದಾರೆ… ವಿಶ್ವದಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಇರೊ ಸನ್ನಿ, ಕೋಟಿ ಬೆಲೆ ಬಾಳೊ ಹೊಸ ಕಾರನ್ನು ಖರೀದಿಸಿ ಅವರೆಲ್ಲರ ಗಮನ ಸೆಳೆದಿದ್ದಾರೆ.
ಸನ್ನಿ ಲಿಯೋನ್, ಗಾರ್ಜಿಯಸ್ ಬೆಡಗಿ. ಗ್ಲಾಮರ್ ಬೇಬಿ ಡಾಲ್. ಈಕೆಯ ಹೆಸ್ರು ಕೇಳಿದ್ರೆ ಸಾಕು ಪಡ್ಡೆ ಹುಡುಗರಿಂದ ಹಿಡಿದು ಹಣ್ ಹಣ್ ಮುದುಕರ ಹಾರ್ಟ್ ಬೀಟ್ ಜಾಸ್ತಿಯಾಗುತ್ತೆ.. ತನ್ನ ಮಾದಕ ಮೈಮಾಟದಿಂದ ಸಿನಿ ರಸಿಕರ ಡ್ರೀಮ್ಗೆ ಕನ್ನ ಹಾಕಿರೋ ಮೋಹಕ ಬೆಡಗಿ ಈ ಸೇಸಮ್ಮ. ಯಾವುದೇ ಸಿನಿಮಾ ಆಗಿರಲಿ ಅಲ್ಲಿ ಈ ಸೆಕ್ಸಿ ಸನ್ನಿ ಇದ್ದಾಳೆ ಅಂದ್ರೆ ಮುಗಿದೇ ಹೋಯಿತು ಬಿಡಿ…ಪಡ್ಡೆ ಹುಡುಗ್ರಿಗೆ ಫುಲ್ ಕಿಕ್ಕೋ ಕಿಕ್ಕು…
ಗ್ಲಾಮರ್ ವರ್ಲ್ಡ್ನ ಮಹಾರಾಣಿಯಾಗಿ ಮಿಂಚುತ್ತಿರೋ ಸನ್ನಿ ಬಿಟೌನ್ನ ಬಹು ಬೇಡಿಕೆಯ ನಟಿಮಣಿ. ಜೊತೆಗೆ ನಂಬರ್ ಒನ್ ಐಟಂ ಡ್ಯಾನ್ಸರ್ ಕೂಡ ಹೌದು. ತನ್ನ ಮಾದಕ ಲುಕ್ನಿಂದ್ಲೇ ಎಲ್ಲರ ಗಮನವನ್ನ ತನ್ನತ್ತ ಸೆಳೆದಿರೋ ಬ್ಯೂಟಿ ಸನ್ನಿ.. ಲಾಕ್ ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಭಾರತದಿಂದ ವಿದೇಶಕ್ಕೆ ಹಾರಿರೊ ಸನ್ನಿ ಅಲ್ಲೇ ಫ್ಯಾಮಿಲಿ ಜೊತೆ ಕಾಲಕಳೆಯುತ್ತಿದ್ದಾರೆ..
ಬಾಲಿವುಡ್ನಲ್ಲಿ ಈಗ ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ನೆಪೋಟಿಸಂ, ಬಾಲಿವುಡ್ ಮಾಫಿಯಾ, ಒಳಗಿನವರು ಮತ್ತು ಹೊರಗಿನವರು ಎನ್ನುವ ಕಿತ್ತಾಟ, ಹೀಗೆ ಬೆಂಕಿ ಬಿರುಗಾಳಿಯೇ ಎದ್ದಿದೆ. ಆದ್ರೆ ಇದ್ಯಾವುದನ್ನೂ ತೆಲೆಗೆ ಹಾಕಿಕೊಳ್ಳದ ಸನ್ನಿ ಪತಿಯ ಜೊತೆ ಅಮೆರಿಕದಲ್ಲಿ ಆರಾಮಾಗಿ ಕಾಲಕಳೀತಿದ್ದಾರೆ, ಪತಿ ಜೊತೆ ಕಾರಿನಲ್ಲಿ ಜಾಲಿ ಡ್ರೈವ್ ಮಾಡ್ತಿದ್ದಾರೆ..
ವಿಶ್ವದ ಫೇಮಸ್ ಬ್ರಾಂಡ್ ಗಳಲ್ಲಿ ಒಂದಾಗಿರುವ ಇಟಲಿಯ ಮಸೆರಾಟಿ ಗಿಬ್ಲಿ ಸೆಡಾನ್ ಖರೀದಿಸಿದ್ದಾರೆ ಸನ್ನಿ. ಇದ್ರ ಬೆಲೆ 1.31 ಕೋಟಿ ರೂಪಾಯಿ. ಈ ಕಾರು 3.0 ಲೀಟರ್ನ V6 ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಮಸೆರಾಟಿಯ ಗಿಬ್ಲಿ ಸ್ಪೋರ್ಟ್ಸ್ ಸರಣಿಯ ಈ ಕಾರು 420bhp ಹಾಗೂ 580Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಈ ಬಿಳಿ ಬಣ್ಣದ ಕಾರಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಸನ್ನಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೊಸ ಕಾರು ಖರೀದಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಸನ್ನಿಗೆ ಪ್ರತೀ ಬಾರಿ ಈ ಕಾರನ್ನು ಓಡಿಸುವಾಗ ತುಂಬಾ ಖುಷಿಯಾಗುತ್ತಂತೆ. ಹೀಗಂತ, ಇನ್ಸ್ಟಾಗ್ರಾನಲ್ಲಿ ಫೋಸ್ಟ್ ಹಾಕುತ್ತಿದ್ದಂತೆ ಕಾರಿಗಿಂತ ಸನ್ನಿ ಫೋಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.