ಬಾಲಕನ ಪ್ರತಿಭೆಗೆ ಪವರ್ ಸ್ಟಾರ್ ಫಿದಾ..! ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡ ‘ದೊಡ್ಮನೆ’ ಹುಡುಗ..!!

ಇತ್ತೀಗೆ ಪವರ್​​ಸ್ಟಾರ್ ಪುನೀತ್​ ರಾಜ್​ಕುಮಾರ್ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರ್ತಾರೆ. ಅದರಲ್ಲೂ ಈ ಲಾಕ್​ಡೌನ್ ಟೈಮ್​ನಲ್ಲಿ ವರ್ಕೌಟ್ ವಿಡಿಯೋಗಳನ್ನು ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು. ಹಬ್ಬದ ಶುಭಾಶಯಗಳು, ಫಿಟ್ನೆಸ್​ಗೆ ಬೇಕಾದ ವಿಡಿಯೋಗಳನ್ನೆಲ್ಲಾ ಅಪ್ ಲೋಡ್ ಮಾಡುತ್ತಿದ್ದರು. ಹೀಗೆ ಒಂದು ವಿಶೇಷ ಅನ್ನಿಸುವಂತ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ನಾಲ್ಕು ವರ್ಷದ ಬಾಲಕ ಆಕಾಶ್​ ಭಟ್​ ಡಾ. ರಾಜ್​ ನಟನೆಯ ಬಭ್ರುವಾಹನ ಚಿತ್ರದ ಡೈಲಾಗ್​ ಅನ್ನು ನಿರರ್ಗಳವಾಗಿ ಹೇಳಿದ್ದಾನೆ ಜೊತೆಗೆ ಅಭಿನಯ ಕೂಡ ಮಾಡಿದ್ದಾನೆ. ಅದನ್ನ ಪತ್ರಕರ್ತರೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಅದನ್ನ ಫೇಸ್​ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ಶೇರ್ ಮಾಡಿಕೊಳ್ಳುವ ಮುಂಚೆ ಒಂದಷ್ಟು ಅಭಿಮಾನದ ಮಾತುಗಳನ್ನು ಹಾಡಿದ್ದಾರೆ. ನಮ್ಮ ತಂದೆಯವರು ಮಾಡಿದ ಈ ಅಭಿನಯ ಇಂಥ ಪುಟ್ಟ ಅಭಿಮಾನಿಯ ಹೃದಯ ತಟ್ಟಿದೆ ಅಂದ್ರೆ, ಎಷ್ಟು ಸಂತೋಷ ಆಗುತ್ತೆ. ನನ್ನ ತಂದೆಯವರು ಹೇಳ್ತಿದ್ದ ಮಾತು ನಿಜಾನೇ. ಅಭಿಮಾನಿಗಳೇ ದೇವರು ಎಂಬುದು. ಈ ಪುಟ್ಟ ಅಭಿಮಾನಿಗೆ ನನ್ನ ವಂದನೆಗಳು ಎಂದಿದ್ದಾರೆ ಪುನೀತ್ ರಾಜ್​ಕುಮಾರ್.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *